ಆಲೂರು - ಸರ್ಕಾರಿ ಶಾಲೆಗಳಿಗೆ ಇತ್ತೀಚಿನ ದಿನಗಳಲ್ಲಿ ದಾಖಲಾತಿ ಹೆಚ್ಚಾಗುತ್ತಿರುವುದು ಸ್ವಾಗತಾರ್ಹವೆಂದು ಶಾಸಕ ಹೆಚ್ ಕೆ ಕುಮಾರಸ್ವಾಮಿ ತಿಳಿಸಿದರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸುಮಾರು 1 ಕೋಟಿ ವೆಚ್ಚದ 5 ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ದೊರಕಿಸುವುದು ನಮ್ಮ ಉದ್ದೇಶ ಮುಂದಿನ ದಿನಗಳಲ್ಲಿ ಲೈಬ್ರರಿ ಶೌಚಾಲಯ ಪ್ರಯೋಗಾಲಯಗಳನ್ನು ಒದಗಿಸಿಕೊಡಲಾಗುವುದು ಕಳೆದ ವರ್ಷ ಆಲೂರಿನ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಗಳಿಸಿದ್ದು ಈ ಬಾರಿಯೂ ಉತ್ತಮವಾದ ಫಲಿತಾಂಶ ಬಂದಿದೆ ಪಟ್ಟಣದ ಕ್ರೀಡಾಂಗಣಕ್ಕೆ 50 ಲಕ್ಷ ಹಣ ಮಂಜೂರಾಗಿದ್ದು ಸರ್ಕಾರ ಇನ್ನು ಹಣ ಬಿಡುಗಡೆ ಮಾಡಿಲ್ಲ ಹಣ ಬಿಡುಗಡೆಯಾದ ನಂತರ ಕ್ರೀಡಾಂಗಣದ ದುರಸ್ತಿ ಕಾರ್ಯ ಹಾಗೂ ಮುಖ್ಯರಸ್ತೆಯಿಂದ ಕ್ರೀಡಾಂಗಣದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದ ಅವರು ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ದಾಖಲಾತಿಗಳು ಹೆಚ್ಚಾಗುತ್ತಿವೆ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ಬುದ್ಧಿವಂತ ಶಿಕ್ಷಕರು ಇರುವ ಕಾರಣ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
Tags
ಆಲೂರು