ಹಾಡುಹಗಲೆ ಕಾಡನೆ ಗ್ರಾಮದಲ್ಲಿ ಪ್ರತ್ಯಕ್ಷ :ಆತಂಕ

ಸಕಲೇಶಪುರ: ಹಾಡಹಗಲೇ ತಾಲೂಕಿನ‌ ಮಠಸಾಗರ ಗ್ರಾಮದಲ್ಲಿ ಒಂಟಿ ಸಲಗ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ.
ಬೆಳಗ್ಗೆ ಕಾಡಾನೆಯೊಂದು ಗ್ರಾಮದ ರಸ್ತೆಯಲ್ಲಿ ರಾಜಾರೋಷವಾಗಿ ಹಾದು ಹೋಗಿದ್ದು, ಜನ ಭಯಭೀತರಾಗಿದ್ದಾರೆ. ಕಳೆದ ವಾರವಷ್ಟೇ ಗ್ರಾಮದ ಅಸ್ತಿಕ ಭಟ್ ಎಂಬವರು ಆನೆ ದಾಳಿಯಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಇದೀಗ ಮತ್ತೆ ಆನೆ ಕಾಣಿಸಿಕೊಂಡಿದೆ.ಗ್ರಾಮದ ಮುಖ್ಯ ರಸ್ತೆಯಲ್ಲಿ ಓಡಾಡಿದ ಆನೆ.. ಜನರ ಆತಂಕ ಕಾಡಾನೆಗಳ ಗುಂಪು ಗ್ರಾಮದಲ್ಲಿ ಓಡಾಡುತ್ತಿದ್ದು, ಅಪಾರ ಪ್ರಮಾಣದ ಭತ್ತ, ಕಾಫಿ, ಬಾಳೆ, ಅಡಿಕೆ ಬೆಳೆಗಳು ನಾಶವಾಗಿದೆ. ಮಠಸಾಗರ ಗ್ರಾಮದ ಸಮೀಪದ ಬಾಳ್ಳುಪೇಟೆ ಜಮ್ಮನಹಳ್ಳಿಯ ನಲಪಾಡ್ ಪ್ಲಾಂಟೇಷನ್​ನಲ್ಲಿ ಕೂಡ ಆನೆ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಲಹಳ್ಳಿ ಸಲೀಂ‌ ಮಾತನಾಡಿ, ಕೂಡಲೇ ಕಾಡಾನೆಗಳ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಕೊಳ್ಳದಿದ್ದರೆ ಮತ್ತಷ್ಟು ಸಾವು-ನೋವುಗಳು ಸಂಭವಿಸಲಿವೆ ಎಂದು ವ್ಯಕ್ತಪಡಿಸಿದ್ದಾರೆ

Post a Comment

Previous Post Next Post