ಅರಸೀಕೆರೆ :- ನಗರದ ಒಳಚರಂಡಿ ಕಾಮಗಾರಿಗಾಗಿ ಭೂಸ್ವಾದೀನ ಪಡಿಸಿಕೊಂಡಂತಹ ರೈತರಿಗೆ ಹಾಗೂ ನಿವೇಶನಗಳ ಮಾಲೀಕರಿಗೆ ಪರಿಹಾರ ಕೊಡಿಸುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್‍ರವರಿಗೆ ನಿವೇಶನಗಳ ಮಾಲೀಕರು ಮನವಿ ಸಲ್ಲಿಸಿದರು.
ಅರಸೀಕೆರೆ ನಗರಸಭೆ ಮತ್ತು ಒಳಚರಂಡಿ ಇಲಾಖೆ, ಹಾಸನ 2012ರಲ್ಲಿ ಒಳಚರಂಡಿ ಕಾಮಗಾರಿಗಾಗಿ ಭೂಮಿಯನ್ನು ವಶಪಡಿಸಿಕೊಂಡು ಇಲ್ಲಿಯವರೆಗೆ ರೈತರಿಗೆ ಹಾಗೂ ನಿವೇಶನಗಳ ಮಾಲೀಕರಿಗೆ ಯಾವುದೇ ಪರಿಹಾರ ನೀಡದೆ ಕಾಮಗಾರಿ ನಡೆಸುತ್ತಿದ್ದು ಈ ಭೂ ಸ್ವಾಧೀನಕ್ಕೆ ಒಳಪಟ್ಟ ರೈತರಿಗೆ ಹಾಗೂ ಭೂಮಾಲೀಕರಿಗೆ ಆದಷ್ಟು ಬೇಗ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೆ ತಂದು ಶೀಘ್ರವೇ ಪರಿಹಾರ ದೊರಕಿಸಿಕೊಡಬೇಕೆಂದು ಪತ್ರದಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎನ್.ಡಿ ಪ್ರಸಾದ್ ,ಕಾಟೀಕೆರೆ ಪ್ರಸನ್ನ ಕುಮಾರ್, ಮನೋಜ್ ಕುಮಾರ್ , ಡಿ.ಎಂ.ಕುರ್ಕೆ ಲೋಕೇಶ್ ,ಮುರುಳಿ , ನಗರಸಭಾ ಸದಸ್ಯ ಗಿರೀಶ್
Tags
ಅರಸೀಕೆರೆ