ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ರುಚಿಕರವಾದ ಚಿಕನ್ ಬಿರಿಯಾನಿ ಅನ್ನು ಹೇಗೆ ಮಾಡಿಕೊಳ್ಳುವುದು ಅಂತ ತಿಳಿಸಿಕೊಡುತ್ತೇನೆ ಈ ರೀತಿಯ ಬಿರಿಯಾನಿ ಅನ್ನ ಬ್ಯಾಚುಲರ್ಗಳು ಕೂಡ ಮಾಡ್ಕೋಬಹುದು. ಯಾಕೆ ಅಂದ್ರೆ ಬಿರಿಯಾನಿ ತಿನ್ನಬೇಕು ಅಂತ ಇಂತಹ ಸಮಯದಲ್ಲಿ ಆಚೆ ಹೋಗೋ ಜನ ಕೂಡ ಇರ್ತಾರೆ ಆದರೆ ಇಂತಹ ಸುಲಭವಾದ ಚಿಕನ್ ಬಿರಿಯಾನಿ ಅನ್ನ ಮನೆಯಲ್ಲಿಯೇ ಮಾಡಿಕೊಂಡು ತಿಂದರೆ ಆರೋಗ್ಯವೂ ಉತ್ತಮವಾಗಿರುತ್ತದೆ, ರುಚಿಕರವಾದ ಬಿರಿಯಾನಿಯನ್ನು ಮನೆಮಂದಿಯೆಲ್ಲ ಕುಳಿತು ಸವಿಯಬಹುದು.
ಸ್ವಾದಿಷ್ಟವಾದ ಬಿರಿಯಾನಿ ಅನ್ನ ಮಾಡೋದು ಹೇಗೆ ಅಂತ ತಿಳಿಯೋಣ ಮೊದಲಿಗೆ ಒಂದು ಪ್ರೆಷರ್ ಕುಕ್ಕರ್ನ್ನು ತೆಗೆದುಕೊಳ್ಳಿ ನೀವು ಪಾತ್ರೆಯಲ್ಲಿ ಮಾಡುವುದಾದರೆ ಪಾತ್ರೆಯನ್ನು ಆದರೂ ಇಟ್ಟುಕೊಳ್ಳಬಹುದು ನಂತರ ಮೂರು ಚಮಚ ಅಡುಗೆ ಎಣ್ಣೆಯನ್ನು ಹಾಕಿ ಇದಕ್ಕೆ ಇದೀಗ ಎರಡು ಏಲಕ್ಕಿಯನ್ನು ಬಿಡಿಸಿ ಹಾಕಿ ಏಲಕ್ಕಿಯನ್ನು ಹಿಡಿಯಾಗಿ ಹಾಕಬೇಡಿ ಏಲಕ್ಕಿಯನ್ನು ಸಿಪ್ಪೆ ತೆಗೆದು ನಂತರ ಎಣ್ಣೆಗೆ ಹಾಕಬೇಕು ಆಮೇಲೆ ಎರಡು ಚಕ್ರಮೊಗ್ಗು ಅಂದರೆ ಸ್ಟಾರ್ ಹಾಕಿಕೊಂಡು ನಾಲ್ಕು ಲವಂಗ ಎರಡು ಇಂಚು ಚಕ್ಕೆ ಮತ್ತು ಒಂದು ಪಾಲಾವ್ ಎಲೆ ಅನ್ನು ಹಾಕಿ ಎಣ್ಣೆಯಲ್ಲಿ ಫ್ರೈ ಮಾಡಬೇಕು.
ಹೆಣ್ಣಿನಲ್ಲಿ ಇಷ್ಟು ಪದಾರ್ಥವನ್ನು ಫ್ರೈ ಮಾಡಿದ ಮೇಲೆ ಒಂದು ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಮತ್ತೊಮ್ಮೆ ಏಲ್ಲಾ ಪದಾರ್ಥವನ್ನು ಮಿಶ್ರಣ ಮಾಡಿಕೊಳ್ಳಿ ಇದೀಗ ಎಣ್ಣೆಯ ಬಣ್ಣ ಸ್ವಲ್ಪ ಬದಲಾಗುತ್ತದೆ ನಂತರ ನಾಲ್ಕರಿಂದ ಐದು ಹಸಿರು ಮೆಣಸಿನಕಾಯಿಯನ್ನು ಉದ್ದವಾಗಿ ಕತ್ತರಿಸಿ ಹಾಕಿ ಆಮೇಲೆ ಎರಡರಿಂದ ಮೂರು ಈರುಳ್ಳಿಯನ್ನು ಉದ್ದವಾಗಿ ಕತ್ತರಿಸಿ ಎಣ್ಣೆಯೊಳಗೆ ಹಾಕಿ ಮತ್ತೊಮ್ಮೆ ಫ್ರೈ ಮಾಡಿ ಈರುಳ್ಳಿ ಹಸಿ ವಾಸನೆ ಹೋಗಿ ಈರುಳ್ಳಿಯ ಸ್ವಲ್ಪ ಬಣ್ಣ ಬದಲಾಗಬೇಕು. ಅಷ್ಟು ಫ್ರೈ ಮಾಡಿಕೊಳ್ಳಬೇಕು ನಂತರ ಎರಡು ಟೊಮೆಟೊವನ್ನು ಸಣ್ಣದಾಗಿ ಕತ್ತರಿಸಿ ಫ್ರೈ ಮಾಡಬೇಕು ಟೊಮೆಟೊ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
ಇದೀಗ ಅರ್ಧ ಕೆಜಿ ಚಿಕನ್ ಅನ್ನು ಚೆನ್ನಾಗಿ ತೊಳೆದು ಇಟ್ಟುಕೊಂಡಿರಿ ಟೊಮೆಟೊ ಹಸಿ ವಾಸನೆ ಹೋದ ಮೇಲೆ ಎಣ್ಣೆಗೆ ಹಾಕಿ ಮಸಾಲಾ ಜೊತೆ ಮಿಶ್ರಣ ಮಾಡಿ. ಆದಷ್ಟು ಸ್ಕಿನ್ ಲೆಸ್ ಚಿಕನ್ ಅನ್ನೇ ತೆಗೆದುಕೊಳ್ಳಿ, ರುಚಿ ಚೆನ್ನಾಗಿ ಇರುತ್ತದೆ. ಚಿಕನ್ ಅನ್ನು ಮಸಾಲದೊಂದಿಗೆ ಬೆರೆಸಿದ ನಂತರ ಇದಕ್ಕೆ ಅರ್ಧ ಚಮಚ ಅರಿಶಿಣದ ಪುಡಿ ಎರಡು ಚಮಚ ಅಚ್ಚ ಕಾರದ ಪುಡಿ ಅರ್ಧ ಚಮಚ ಗರಂ ಮಸಾಲಾ ಅರ್ಧ ಚಮಚ ದನಿಯಾ ಪುಡಿ ಅನ್ನು ಹಾಕಿ ಚೆನ್ನಾಗಿ ಮಸಾಲಾವನ್ನು ಮಿಶ್ರಣ ಮಾಡಿಕೊಳ್ಳಿ ನಂತರ ಒಂದು ಕಪ್ ಮೊಸರನ್ನು ಹಾಕಿ ಜೊತೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಸಣ್ಣದಾಗಿ ಕತ್ತರಿಸಿ ಹಾಕಿ ಮತ್ತೊಮ್ಮೆ ಮಸಾಲಾವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಇದೀಗ ಚಿಕನ್ ಗೆ ಒಂದು ಲೋಟ ಅಕ್ಕಿಯನ್ನು ಹಾಕಿಕೊಳ್ಳೋಣ. ಅಕ್ಕಿಯನ್ನು ಚಿಕನ್ ನೊಂದಿಗೆ ಒಮ್ಮೆ ಮಿಶ್ರಣ ಮಾಡಿ ನಂತರ ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರನ್ನು ಹಾಕಬೇಕು ಪಾತ್ರೆಯಲ್ಲಿ ಆದರೆ ಸರಿಯಾಗಿ ಎರಡು ಲೋಟ ನೀರನ್ನು ಹಾಕಿ ನೀವು ಪ್ರೆಶರ್ ಕುಕ್ಕರ್ ನಲ್ಲಿ ಬಿರಿಯಾನಿ ಮಾಡ್ತಾ ಇದ್ದರೆ. ಒಂದೂವರೆ ಲೋಟ ನೀರು ಸಾಕಾಗುತ್ತದೆ ಹೆಚ್ಚು ನೀರನ್ನು ಹಾಕಬೇಡಿ ಅನ್ನ ಮುದ್ದೆ ರೀತಿ ಆಗುತ್ತದೆ ರುಚಿ ಇರುವುದಿಲ್ಲ, ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಪ್ರೆಷರ್ ಕುಕ್ಕರ್ ನಲ್ಲಿ ಎರಡು ವಿಶಲ್ ಹಾಕಿಸಿ ಸೂಪರ್ ಆದ ಬಿರಿಯಾನಿ ರೆಡಿಯಾಗುತ್ತದೆ.
Tags
ಆರೋಗ್ಯ