ಬೇಲೂರು ಕೋಟೆ ಶ್ರೀ ಶೃಂಗೇರಿ ಮಠದಲ್ಲಿ ಶಾರದಾಂಬೆಗೆ ವೀಣಾ ಪಾಣಿ ಅಲಂಕಾರ



ಬೇಲೂರು: ಶರನ್ನವರಾತ್ರಿ ಮಹೋತ್ಸವದ  ಅಂಗವಾಗಿ  ಶ್ರೀ ಶೃಂಗೇರಿ ಶಂಕರ ಮಠದಲ್ಲಿ  ಶಾರದಾಂಬೆಗೆ ವೀಣಾ ಪಾನೀಯ ಅಲಂಕಾರ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠದ ಗೌರವ ಕಾರ್ಯದರ್ಶಿ ಆರ್ ಸುಬ್ರಹ್ಮಣ್ಯ ಮಾತನಾಡಿ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪರಮಾನುಗ್ರಹದಿಂದ ಕೋಟೆ ಶ್ರೀ ಶಾರದಾ ಶಂಕರ ಮಠದಲ್ಲಿ  ಶರನ್ನವರಾತ್ರ್ಯೋತ್ಸವವನ್ನ  ಏರ್ಪಡಿಸಲಾಗಿದ್ದು  ಅ.೧೬  ರಿಂದ ಆರಂಭಗೊಂಡಿದ್ದು  ೨೭ ರ ಮಂಗಳವಾರ ಪರ್ಯಂತ ನಡೆಸಲು ತೀರ್ಮಾನಿಸಲಾಗಿದೆ. 
 ಪ್ರತಿನಿತ್ಯ ಶ್ರೀಶಾರದಾ ಪರಮೇಶ್ವರಿ ಅಮ್ಮನವರಿಗೆ ಕಲ್ಪೋಕ್ತ ಪೂಜೆ ವಿವಿಧ ಅಲಂಕಾರ ವಿವಿಧ ವಿಶೇಷ ಪೂಜೆ ಪಾರಾಯಣಗಳು ಹಾಗೂ ಬೆಳಿಗ್ಗೆ ಮತ್ತು ರಾತ್ರಿ ಅಷ್ಠಾವಧಾನ ಸೇವೆ ಮಹಾಮಂಗಳಾರತಿ ಕಾರ್ಯಕ್ರಮ ಇರುತ್ತದೆ.    ಅಲ್ಲದೆ ಮಂಗಳವಾರ  ಏಕಾದಶಿ ದಿನದಂದು ಬೆಳಿಗ್ಗೆ ಹತ್ತು ಗಂಟೆಗೆ 8ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ . ಭಕ್ತರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸುಬ್ರಹ್ಮಣ್ಯ ಕೋರಿದ್ದಾರೆ  .
 ಈ ಸಂದರ್ಭದಲ್ಲಿ ಅಧ್ಯಕ್ಷ ಗೋ ಕೃ ರವೀಂದ್ರ, ಖಜಾಂಚಿ ಎಸ್ ನಾಗರಾಜ್, ತಾಲ್ಲೂಕು ಸಂಚಾಲಕ ಕೆ ಆರ್ ಮಂಜುನಾಥ್ , ಮಠ ಮುದ್ರೆ ಡಿಯರ್ ರಾಮಚಂದ್ರ, ಪ್ರಧಾನ ಅರ್ಚಕ ಸುಮಂತಕುಮಾರ ಶರ್ಮಾ,  ಹಾಗೂ ಮೇಲ್ವಿಚಾರಕ ಅನಂತಮೂರ್ತಿ ಇದ್ದರು .

Post a Comment

Previous Post Next Post