ಮುಕ್ಕಡಹಳ್ಳಿ ಮಾಯಮ್ಮದೇವಿ ದೇವಸ್ಥಾನದಲ್ಲಿ ಗೋಲಕ ಎಣಿಕೆ : 66 ರೂ ಸಂಗ್ರಹ

 
ಚಾಮರಾಜನಗರ, ಅ. 23- ತಾಲೂಕಿನ ಮುಕ್ಕಡಹಳ್ಳಿ ಗ್ರಾಮದ  ಮಾಯಮ್ಮ ದೇವಿ ದೇವಸ್ಥಾನದ ಗೋಲಕವನ್ನು  ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ನೇತೃತ್ವದಲ್ಲಿ ಇಂದು ತೆರೆದು ಎಣಿಕೆ ಮಾಡಲಾಯಿತು. 
66 ಸಾವಿರ ರೂ.ಗಳು ಸಂಗ್ರಹ: ಮುಕ್ಕಡಹಳ್ಳಿ ಗ್ರಾಮದ ಮಾಯಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಎಣಿಕೆ ನಡೆಯಿತು.  ಭಕ್ತರು ಕಾಣಿಕೆ ರೂಪದಲ್ಲಿ  ದೇವಸ್ಥಾನದ ಗೋಲಕದಲ್ಲಿ 66 ಸಾವಿರ ರೂ.ಸಂಗ್ರಹ ವಾಗಿದೆ.  ಈ ಹಣವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. 
ಈ ಸಂದರ್ಭದಲ್ಲಿ ಹರವೆ ನಾಡ ಕಚೇರಿಯ ಉಪ ತಹಶೀಲ್ದಾರ್  ಮಹದೇವಶೆಟ್ಟಿ, ರಾಜಸ್ವ ನಿರೀಕ್ಷಕ ಎಂ. ಲಿಂಗರಾಜಮೂರ್ತಿ, ಹರವೆ ಹೋಬಳಿ  ಗ್ರಾಮ  ಲೆಕ್ಕಿಗರು  ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. 

Post a Comment

Previous Post Next Post