ಬನ್ನಿ ಮಂಟಪೋತ್ಸವ ನೆಡೆಸಲು ಅಡ್ಡೆಗಾರರು ಹಾಗೂ ಸಾರ್ವಜನಿಕರ ಒತ್ತಾಯ

ಬೇಲೂರು: ಪ್ರತೀವರ್ಷದಂತೆ ಶ್ರೀ ಚನ್ನಕೇಶವ  ಅನಾದಿಕಾಲದಿಂದಲೂ ನಡೆಯುತ್ತಿದ್ದ ಬನ್ನಿ ಮಂಟಪೋತ್ಸವವು ಈ ಬಾರಿ ನಿಲ್ಲುವ ಸೂಚನೆ ಇದ್ದು ಅದನ್ನು ಎಂದಿನಂತೆ ನೆಡೆಸಲು ಅಡ್ಡೆಗಾರರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಶ್ವವಿಖ್ಯಾತ ಶ್ರೀ ಚನ್ನಕೇಶವ ದೇಗುಲದಲ್ಲಿ ನವರಾತ್ರಿ ಅಂಗವಾಗಿ ಬನ್ನಿ ಮಂಟಪ ಉತ್ಸವಕ್ಕೆ ಅಶ್ವರೂಡನಾಗಿ ಶ್ರೀ ಚನ್ನಕೇಶವ ಸ್ವಾಮಿಯು ತೆರಳಿ ಪೂಜೆ ಸಲ್ಲಿಸುತ್ತಿದ್ದು ಹಿಂದಿನಿಂದಲೂ ವಾಡಿಕೆಯಾಗಿತ್ತು.
ಆದರೆ ಈ ಬಾರಿ ಕೋವೀಡ್ ೧೮ ಹಿನ್ನಲೆಯಲ್ಲಿ ಅದನ್ನು ಸ್ಥಗಿತಗೊಳಿಸಿ ದೇವಾಲಯದ ಪ್ರಾಂಗಣದಲ್ಲಿ ನಡೆಸುತ್ತಿತುವುದರಿಂದ ಅಡ್ಡೆಗಾರರು ಹಾಗೂ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಡ್ಡೆಗಾರ ಶ್ರೀನಿವಾಸ್ ಸಾಂಪ್ರದಾಯಿಕವಾಗಿ ಪ್ರತೀ ವರ್ಷವೂ ಸಹ ಅನಾದಿಕಾಲದಿಂದಲೂ ಬನ್ನಿಮಂಟಪೊತ್ಸವ ನಡೆದುಕೊಂಡು ಬರುತ್ತಿದೆ.ಆದರೆ ಹಾಸನ ಜಿಲ್ಲೆಯಲ್ಲಿ ಕೆಲವು ತಾಲೂಕುಗಳಲ್ಲಿ ಬನ್ನಿ ಮಂಟಪೋತ್ಸವವು ಎಂದಿನಂತೆ ನೆಡೆಯುತ್ತಿದ್ದರೂ ನಮ್ಮ‌ಬೇಲೂರಿನಲ್ಲಿ ಮಾತ್ರ ಏಕೆ ಈ ರೀತಿ ತಾರತಮ್ಯ ಮಾಡುತ್ತಿದ್ದಾರೆ.ಕೇವಲ ನಮಗೆ ಪ್ರಾಂಗಣದಲ್ಲಿ ಮಾತ್ರ ನೆಡೆಸಲು ಅವಕಾಶ ಕಲ್ಪಿಸಿದ್ದಾರೆ.ನಮ್ಮ ಸಿಓರನ್ನು ಕೇಳಿದರೆ ಮೇಲಾಧಿಕಾರಿಗಳಿಂದ ಆದೇಶ ಬಂದಿಲ್ಲ ಎಂದು ಹೇಳುತ್ತಾರೆ.ನಮಗೆ ಈ ಕೋವೀಡ್ ಹಿನ್ನಲೆಯಲ್ಲಿ ಸಾಂಕೇತಿಕವಾಗಿ  ಬನ್ನಿಮಂಟಪ ನೆಡೆಸಲಿ .ಆದರೆ ಸುಮಾರು ೮ ತಿಂಗಳಿಂದ ತಾಲೂಕಿನ ಭಕ್ತಾಧಿಗಳಿಗೆ ದರ್ಶನ ಪಡೆಯಲು ಅವಕಾಶ ಸಿಕ್ಕಿಲ್ಲ.ಮುಖ್ಯವಾಗಿ ನವರಾತ್ರಿ ಸಂದರ್ಭದಲ್ಲಿ ಭಕ್ತಾದಿಗಳಿಗೆ ಸಂಜೆ ೬ ರ ನಂತರ  ದೇವರ ದರ್ಶನಕ್ಕೆ ಅವಕಾಶ ಸಿಗುತ್ತಿಲ್ಲ.ಆದ್ದರಿಂದ ಸಂಭಂದಪಟ್ಟ ಅಧಿಕಾರಿಗಳು ಹಾಗೂ ನಮ್ಮ ಸ್ಥಳೀಯ ಶಾಸಕರು ಇದರ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಡ್ಡೆಗಾರರಾದ ವೆಂಕಟೇಶ್ ದೇವರಾಜ್,ಗೋಪಾಲ್,ರಾಜಣ್ಣ,ಮಂಜುನಾಥ್, ಹರೀಶ್,ಜಗದೀಶ್,ಪ್ರವೀಣ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

Post a Comment

Previous Post Next Post