ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಅತಿವೃಷ್ಟಿಯಿಂದ sಸಂಭವಿಸಿದ ಬೆಳೆ ಹಾನಿಯನ್ನು ಸ್ಥಳೀಯವಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಮನವರಿಕೆ ಮಾಡಿ ಸಮಸ್ಯೆ ಬಗೆಹರಿಸಲು ಚಿಂತನೆ ನಡೆಸಲಾಗುವುದು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ ಹೇಳಿದರು.
ಬಣಕಲ್ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ಹಾಗೂ ಬಣಕಲ್ ಹೋಬಳಿ ಬೆಳೆಗಾರರ ಸಂಘದ ಜಂಟಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಾರರ ಸಾಲಮನ್ನಾ, ಬಡ್ಡಿ ಮನ್ನಾ ಬಗ್ಗೆಯೂ ಸರ್ಕಾರÀದ ಗಮನಕ್ಕೆ ತಂದು ಬೆಳೆಗಾರರ ಸಮಸ್ಯೆ ಬಗೆಹರಿಸಲು ಸುದೀರ್ಘ ಪ್ರಯತ್ನ ನಡೆಸಲಾಗುವುದು ಎಂದರು.
ಕಾಫಿ ಮಂಡಳಿ ಹಿರಿಯ ಲೇಸನ್ ಅದಿಕಾರಿ ಶ್ರೀಮತಿ ಮಾತನಾಡಿ, ಬೆಳೆಗಾರರ ಸಮಸ್ಯೆ ಬಗೆಹರಿಸಲು 140 ಬೆಳೆಗಾರರನ್ನು s ಬೇಟಿ ಮಾಡಿ ಸ್ಥಳೀಯವಾಗಿ ಸಮಸ್ಯೆ ಆಲಿಸಿದ್ದೇವೆ. ಕಂದಾಯ ಇಲಾಖೆ. ತೋಟಗಾರಿಕೆ, ಕೃಷಿ ಅದಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲಾಗುವುದು. ರೈತರು ಕಾಫಿ ಮಂಡಳಿಯ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ಮಾಹಿತಿ ನೀಡಬೇಕು.ಇದರಿಂದ ಬೆಳೆಗಾರರ ಸಮಸ್ಯೆ ಬಗೆಹರಿಸಲು ಸುಲಭವಾಗುತ್ತದೆ ಎಂದರು.
ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಮಾತನಾಡಿ, ಕಾಫಿನಾಡಿನಲ್ಲಿ ಕಾಡಾನೆ ಸಮಸ್ಯೆಯಿಂದ ಹಲವು ಎಕರೆ ಕೃಷಿ ಬೆಳೆ, ಕಾಫಿಬೆಳೆ ನಷ್ಟವಾಗಿದೆ. ಇದರಿಂದ ರೈತರು ಬ್ಯಾಂಕ್‍ನಲ್ಲಿ ಸಾಲ ಪಡೆದು ಬೆಳೆ ಹಾನಿಯಿಂದ ಫಸಲು ಕುಯ್ಯಲು ಈ ಬಾರಿ ಆಗದೇ ಕಂಗೆಟ್ಟಿದ್ದಾರೆ.ಅಧಿಕಾರಿಗಳು ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಬೆಳೆಗಾರರಿಗೆ ಸೂಕ್ತ ಪ್ಯಾಕೇಜ್ ಜೊತೆಗೆ ಮೂಡಿಗೆರೆಯನ್ನು ಅತಿವೃಷ್ಟಿ ತಾಲ್ಲೂಕನ್ನಾಗಿ ಘೋಷಿಸಬೇಕು ಎಂದರು.
ಕೆಜಿಎಪ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, ಕಸ್ತೂರಿರಂಗನ್ ವರದಿ ಜಾರಿಯಾದರೆ ಪಶ್ಚಿಮಘಟ್ಟದ ವ್ಯಾಪ್ತಿಯ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆರ್ಥಿಕತೆಗೆ, ಕೃಷಿ ಅಭಿವೃದ್ದಿಗೆ ಹೊಡೆತ ಬೀಳಲಿದೆ. ಪಶ್ಚಿಮಘಟ್ಟದ ವ್ಯಾಪ್ತಿಯ ಎಲ್ಲಾ ರಾಜ್ಯಗಳ ಲೋಕಸಭಾ ಸದಸ್ಯರ ಸಭೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲು ಕಾಫಿ ಮಂಡಳಿ ನಿಯೋಗವು ಆಗ್ರಹಿಸಿ ಮಾರಕ ಯೋಜನೆ ಕೈಬಿಡುವಂತೆ ಒತ್ತಾಯಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಅಧಿಕಾರಿಗಳಿಗೆ ಬೆಳೆಗಾರರ ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ಬಿ.ಎಸ್.ನಾರಾಯಣಗೌಡ, ಕಾಫಿ ಮಂಡಳಿಯ ಕಿರಿಯ ಲೇಸನ್ ಅಧಿಕಾರಿ ಪ್ರಭುಗೌಡ, ಶಿವಪ್ರಕಾಶ್, ಕೆಜಿಎಪ್ ನಿರ್ದೇಶಕರಾದ ಎಚ್.ಪಿ ದೇವರಾಜ್, ರೈತ ಸಂಘದ ಮಹಿಳಾ ರಾಜ್ಯ ಉಪಾಧ್ಯಕ್ಷೆ ವನಶ್ರೀಲಕ್ಷ್ಮಣ್‍ಗೌಡ, ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ಬೆಳೆಗಾರರಾದ ಬಿ.ಸಿ.ಪ್ರವೀಣ್,ಗುಡ್ಡೆಟ್ಟಿ ರಮೇಶ್,ಮನೋಜ್, ಸುರೇಶ್ ಬಂಕೇನಹಳ್ಳಿ, ಬಸನಿ ಸುಂದರೇಶ್,ದಿನೇಶ್ ಬೆಟ್ಟಗೆರೆ, ಸುಂದರೇಶ್ ಬಂಕೇನಹಳ್ಳಿ ಇದ್ದರು.