ಹಾಸನ: ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಪತ್ತೆ ಮಾಡಿದ ಮೂವರು ಆರೋಪಿಗಳನ್ನು 8 ತಿಂಗಳ ನಂತರ ಬಂಧಿಸುವಲ್ಲಿ ಬೇಲೂರು ವೃತ್ತದ ಸಿಪಿಐ ಮತ್ತು ತಂಡದವರು ಯಶಸ್ವಿ ಕಾರ್ಯಚರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020 ಜನವರಿ 6 ರಂದು ಮದ್ಯಾಹ್ನ 2 ಗಂಟೆಯ ಸಮಯದಲ್ಲಿ ಅರೆಕೆರೆ ಗ್ರಾಮದ ಬಳಿ ಜಮೀನಿಗೆ ಹೋಗಲು ನಡೆದುಕೊಂಡು ಹೋಗುತ್ತಿರುವಾಗ ಬಾಣಾವರ ಜಾವಗಲ್ ಮುಖ್ಯ ರಸ್ತೆಯ ಎಡ ಬದಿಯ ಹಳ್ಳದಲ್ಲಿ ಸತ್ತ ವಾಸನೆ ಬಂದಿದ್ದು, ನೋಡಿದರೇ ಸುಮಾರು 25 ರಿಂದ 30 ವರ್ಷದ ಅಪರಿಚಿತ ಗಂಡಸಿನ ಶವ ಓರ್ವ ವ್ಯಕಿಯ ದೇಹವೆಲ್ಲಾ ಸುಟ್ಟು ಸತ್ತು ಬಿದ್ದಿರುವುದು ಕಂಡು ಬಂದಿದೆ. ಅಂಗಾತವಾಗಿ ಬಿದ್ದಿದ್ದು, ಕುಗ್ಗಿಗೆಯಲ್ಲಿ ಯಾವುದೊ ವಾಹನದ ಟೈರುಗಳನ್ನು ಹಾಕಿ ದೇಹವನ್ನು ಇಟ್ಟಿದ್ದು, ತಲೆಯು ಪೂರ್ತಿ ಬೆಂದು ಹೋಗಿದೆ. ಪಕ್ಕದಲ್ಲಿ ಎರಡು ಪ್ಲಾಸ್ಟಿಕ್ ಬಾಟಲ್ ಗಳು ಮತ್ತು ಒಂದು ಬೆಂಕಿ ಪಟ್ಟಣ ಬಿದ್ದಿತ್ತು. ಶವದ ಎರೆಡು ಕಡೆಗಳಲ್ಲಿ ಗೋಣಿ ಚೀಲ ಸುಟ್ಟು ಬಿದ್ದಿದ್ದು, ಇದನ್ನು ನೋಡಿದರೆ ಯಾರೋ ದುಷ್ಕರ್ಮಿಗಳು ಎಲ್ಲಿಯೂ ಕೊಲೆ ಮಾಡಿ ಸಾಕ್ಷ್ಯವನ್ನು ಮರೆ ಮಾಚುವ ಉದ್ದೇಶದಿಂದ ದಿನಾಂಕ ಜನವರಿ 5 ರಂದು ರಾತ್ರಿ ಸಮಯದಲ್ಲಿ ಈ ಸ್ಥಳಕ್ಕೆ ತಂದು ಸುಟ್ಟು ಹಾಕಿರುವುದಾಗಿ ಹೇಳಿದರು.
ಆರೋಪಿಗಳ ವಿರುದ್ಧ ವಿವೇಕ್ ಎಂಬುವರ ನೀಡಿದ ದೂರಿನ ಮೇಲೆ ಬಾಣಾವರ ಪೊಲೀಸ್ ಪಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು. ಎಎಸ್ಪಿ ನಂದಿನಿ ಅವರ ಮೇಲುಸ್ತುವಾರಿಯಲ್ಲಿ ಮತ್ತು ಅರಸೀಕೆರೆ ಉಫವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಲ್. ನಾಗೇಶ್ ಹಾಗೂ ಬೇಲೂರು ವೃತ್ತ ನಿರೀಕ್ಷಕರಾದ ಸಿದ್ದರಾಮೇಶ್ವರವರ ನೇತೃತ್ವದಲ್ಲಿ ಬಿಎಸ್‍ಐ ಬೇಲೂರು ಆಜಂತ್ ಕುಮಾರ್ ಮತ್ತು ಸಿಬ್ಬಂದಿಗಳನ್ನು ಒಳಗೊಂಡಂತೆ ವಿಶೇಷ ತಂಡವು ಆರೋಪಿ ಪತ್ತೆಗೆ ಬಲೆ ಬೀಸಿತ್ತು.
ನಿಖರವಾದ ಮಾಹಿತಿಯನ್ನು ಸಂಗ್ರಹಿಸಿ ಖಚಿತ ಮಾಹಿತಿಯ ಅಕ್ಟೋಬರ್ 15 ರಂದು ಲಕ್ಯ ಗ್ರಾಮದ ವಾಸಿ ಶ್ರೀಕಾಂತ್ ರವರನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರ ಬಂದಿದೆ. ಶ್ರೀಕಾಂತ್ ನ ಅಣ್ಣನ ಮಗನ ನಾಮಕರಣದ ಪಾರ್ಸಿ ವ್ಯವಸ್ಥೆ ಮಾಡಲಾಗಿತ್ತು. ಪಾರ್ಟಿ ಮುಗಿಸಿಕೊಂಡು ಶ್ರೀಕಾಂತ್ ಮತ್ತು ಇತನ ಸ್ನೇಹಿತರಾದ ಚೇತನ್ ಮತ್ತು ಮೋಹನ್ ಇವರುಗಳು ಚಿಕ್ಕಮಗಳೂರು ಲಕ್ಯ ಬಸ್ ನಿಲ್ದಾಣ ಬಳಿ ಬಂದಾಗ ಓರ್ವ ವ್ಯಕ್ತಿ ಭಿಕ್ಷೂಕ ಇಲ್ಲಿ ಮಲಗಿರುವುದನ್ನು ನೋಡಿದ್ದಾರೆ. ಕುಡಿದ ಅಮಲಿನಲ್ಲಿ ಆತನ ಬಳಿ ಗಲಾಟೆ ಮಾಡಿದ್ದಾರೆ. ಮಲಗಿದ್ದ ಅಪರಿಚಿತ ವ್ಯಕ್ತಿ ಶ್ರೀಕಾಂತ್ ಕೈಗೆ ಕಚ್ಚಿ ಓಡಿ ಹೋಗಿದ್ದು, ಆತನನ್ನು ಹಿಂಬಾಲಿಸಿಕೊಂಡು ಹೋಗಿ ಹಿಡಿದು ಹಲ್ಲೆ ಮಾಡಿದಲ್ಲದೇ ಕೊಲೆ ಮಾಡಿದ್ದಾರೆ. ನಂತರದಲ್ಲಿ ಮಾರುತಿ ಎಸ್ಟಿಮ್ ಕಾರೊಳಗೆ ಶವ ಹಾಕಿಕೊಂಡು ಬಾಣಾವರ ಕಡೆಗೆ ಹೋಗಿ ಕೆರೆಕೋಡಿ ಹಳ್ಳದ ಸೇತುವೆ ಬಳಿ ಶವ ಸುಟ್ಟು ಹಾಕಲಾಗಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿರವುದಾಗಿ ಹೇಳಿದರು. ಚಿಕ್ಕಮಗಳೂರು ತಾಲೂಕು ಲಕ್ಯ ಗ್ರಾಮದ ಮೆಕಾನಿಕ್ ಕೆಲಸ ಮಾಡುವ ಶ್ರೀಕಾಂತ್ (26) ವರ್ಷ ಇತ ನೀಡಿದ ಮಾಹಿತಿ ಆಧಾರಿವಿದೆ ತಾಲೂಕಿನ ಚೇತನ್ (29) ವರ್ಷ ಹಾಗೂ ಬೆಂಗಳೂರಿನಲ್ಲಿ ವಾಸವಾಗಿರುವ ಲೈಟ್ ಬಾಯ್ ಮೋಹನ್ (29) ವರ್ಷ ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 8 ತಿಂಗಳ ನಂತರ ಕೊಲೆ ಆರೋಪಿಗಳು ಹಿಡಿಯುವಲ್ಲಿ ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶೇಷ ತಂಡದಲ್ಲಿದ್ದ ಡಿವೈಎಸ್‍ಪಿ ಅರಸೀಕೆರೆ ಉಪ ವಿಭಾಗದ ಎಲ್. ನಾಗೇಶ್, ಬೇಲೂರು ಸಿಪಿಐ ಸಿದ್ದರಾಮೇಶ್ವರ್, ಪಿಎಸ್‍ಐ ಅಜಯಕುಮಾರ್ ಮತ್ತು ಸಿಬ್ಬಂದಿಗಳಾದ ಜಮ್ಮುದ್ ಖಾನ್, ಶಶಿಕುಮಾರ್, ರವೀಶ್, ಪುನೀತ್, ರಘು, ಚಾಲಕ ಸೋಮಶೇಖರ್ ಮತ್ತು ಪೀರ್ ಖಾನ್, ಇವರ ಕಾರ್ಯಚರಣೆಯನ್ನು ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿರುವುದಾಗಿ ಹೇಳಿದರು.