ಬೇಲೂರು:ಕನ್ನಡ ಮೊಟ್ಟ ಮೊದಲ ಶಿಲಾಶಾಸನ ದೊರೆತ ಹಲ್ಮಿಡಿ ಗ್ರಾಮದ ಕನ್ನಡ ಭವದಲ್ಲಿ ಆಹಾರ ಇಲಾಖೆ ದಾಸ್ತಾನು ಮಾಡಿರುವ ಪಡಿತರವನ್ನು ಕೂಡಲೇ ತೆರೆವು ಮಾಡಬೇಕೆಂದು ಹಲ್ಮಿಡಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಲ್ಮಡಿ ಶಾಸನ ಗ್ರಾಮ ಅಭಿ ವೃದ್ದಿ ಟ್ರಸ್ಟ್ ಅಧ್ಯಕ್ಷ ಚನ್ನೇಗೌಡ ಮಾತನಾಡಿ ಕಳೆದ ಲಾಕ್ ಡೌನ್ ಸಮಯದಲ್ಲಿ ಹಲ್ಮಿಡಿ ಗ್ರಾಮದ ನ್ಯಾಯ ಬೆಲೆ ಅಂಗಡಿಗೆ ಮೂರು ತಿಂಗಳ ದಾಸ್ತಾನು ಒಟ್ಟಿಗೆ ಬಂದಿದ್ದು ಸ್ಥಳಾವಕಾಶ ಅಬಾವ ವಿರುವು ದರಿಂದ ತಾತ್ಕಾಲಿಕವಾಗಿ ಕನ್ನಡ ಭವನದಲ್ಲಿ ದಾಸ್ತಾನು ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದರು.
ಪ್ರತಿ ವರ್ಷದಂತೆ ಗ್ರಾಮಸ್ಥರು ಕನ್ನಡ ಶಿಲಾಶಾಸನ ದೊರೆತ ಈ ಜಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಸಮುದಾಯ ಭವನದ ಅವಶ್ಯತೆ ಇರುವುದರಿಂದ ನವೆಂಬರ್ ತಿಂಗಳು ಭವನವನ್ನು ಸ್ವಚ್ಚತೆ ಮಾಡಿ ಹಲ್ಮಿಡಿ ಶಾಸನ ಗ್ರಾಮ ಅಭಿವೃದ್ದಿ ಟ್ರಸ್ಟ್‍ಗೆ ಹಿಂದಿರಿಗಿಸುವಂತೆ ಗ್ರಾಮ ಸ್ಥರು ಸಭೆಯಲ್ಲಿ ಚರ್ಚಿಸುತಿದ್ದಾಗ ನ್ಯಾಯ ಬೆಲೆ ಅಂಗಡಿ ಮಾಲೀಕ ಈಶ್ವರ್ ಹಾಗೂ ಅವನ ಸಹೋದರ ಚನ್ನಕೇಶವ, ತಂದೆ ರಾಜೇಗೌಡ, ತಾಯಿ ಶಾರದಮ್ಮ, ಅವರುಗಳು ಗುಂಪು ಕಟ್ಟಿಕೊಂಡು ಬಂದು ನಮ್ಮನ್ನು ಅವ್ಯಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಗೆ ಹಾಕಿ ದರಲ್ಲದೆ ಭವನ್ನು ಯಾವುದೇ ಕಾರಣಕ್ಕೂ ಖಾಲಿ ಮಾಡುವುದಿಲ್ಲ ವೆಂದು ಉಡಾಫೇ ವರ್ತನೆ ತೋರಿದ್ದಾರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
ಈಶ್ವರ್ ಅವರ ಮನೆಯ ಮುಂಭಾಗದಲ್ಲಿರುವ 90*63 ವಿಶಾಲವಾದ ಸರ್ಕಾರಿ ಗ್ರಾಮ ಠಾಣಾ ಜಾಗವಾಗಿದ್ದು, ಇದನ್ನು ಅವರು ಗ್ರಾ.ಪಂ. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ತಮ್ಮ ಪಿತ್ರಾಜಿತ ಆಸ್ತಿ ಎಂದು ನಕಲಿ ದಾಖಲೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು ತಮ್ಮ ನ್ಯಾಯ ಬೆಲೆ ಅಂಡಿಯಲ್ಲಿ ಪಡಿತರರ ದಾರರಿಗೆ ಸರಿಯಾಗಿ ಪಡಿತರ ವಿತರಿಸದೇ ಕಾರ್ಡ್‍ಗಳನ್ನು ತಮ್ಮ ವಶದಲ್ಲಿಟ್ಟಿಕೊಂಡು ಗ್ರಾಹಕರಿಗೆ ತೊಂದರೆ ನೀಡುತ್ತಿದ್ದಾರೆ ಈ ಎಲ್ಲಾವುಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ದೂರ ನೀಡಲಾಗಿದ ಎಂದರು.ಗ್ರಾಮಸ್ಥ ರಾದ ಮಂಜೆಗೌಡ, ಶಾಂತ್‍ಕುಮಾರ್, ಉಮೇಶ್, ಗೊವಿಂದ್ ಹಾಜರಿದ್ದರು.