ಆಲೂರು: ಡಾ.ಅಂಬೇಡ್ಕರ್ ಅವರ ಸಂವಿಧಾನದಲ್ಲಿನ ಸಮಾನತೆ Éಯನ್ನು ಎಲ್ಲರೂ ಅಳವಡಿಸಿಕೊಂಡರೆ ಸಮಾಜದಲ್ಲಿ ಆರೋಗ್ಯಕರ ವಾತಾ ವರಣ ನಿರ್ಮಾಣಗೊಳ್ಳಲು ಸಾಧ್ಯ ಎಂದು ಸಕಲೇಶಪುರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಯಡೇಹಳ್ಳಿ. ಆರ್.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಕಾಡ್ಲೂರು ಗ್ರಾಮ ದಲ್ಲಿ ಜೈ ಭೀಮ್ ಯುವಕರ ಸಂಘ, ಎಂಪವರ್ ಮೂವ್ ಮೆಂಟ್ಸ್ ಹಾಗೂ ಕಾಡ್ಲೂರು ಗ್ರಾಮಸ್ಥರು ಆಯೋಜಿಸಿದ್ದ ಜೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಭಾವ ಚಿತ್ರದ " ಮಹಾ ನಾಯಕ " ಬ್ಯಾನರ್ ಅನಾವರಣಗೊಳಿಸಿಮಾತನಾಡಿದರು.
ದೇಶಾದ್ಯಂತ ಅಂಬೇಡ್ಕರ್ ಅಭಿಮಾನಿಗಳು ಬಾಬಾ ಸಾಹೇಬರ ಜೀವನ ಚರಿತ್ರೆಯುಳ್ಳ "ಮಹಾನಾಯಕ" ಧಾರಾವಾಹಿಯನ್ನು ನೋಡಿ ಅಭಿ ಮಾನದಿಂದ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ತಮ್ಮ ತಮ್ಮ ಗ್ರಾಮಗಳಲ್ಲಿ ಅಳವಡಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿರುವುದು ಶ್ಲಾಘನೀಯ, ಅಂಬೇಡ್ಕರ್ ಹಾಗೂ ಅವರ ಕುಟುಂಬ ಅನುಭವಿಸುತ್ತಿರುವ ಕಷ್ಟ, ಸುಖ, ನೋವು, ಅವಮಾನವನ್ನು ಚಿತ್ರಿಸಿ ಜನಸಾಮಾನ್ಯರಿಗೆ ಉಣಬಡಿ ಸುತ್ತಿರುವ, ದಾರಾವಾಹಿ ಮುಖ್ಯಸ್ಥರು ಹಾಗೂ ಪ್ರಸಾರ ಮಾಡುತ್ತಿರುವ ಖಾಸಗಿ ಚಾನೆಲ್‍ರವರಿಗೆ ಈ ಸಂದ ರ್ಭದಲ್ಲಿ ಅಭಿನಂದನೆ ಸಲ್ಲಿಸಲೇಬೇಕು ಪ್ರತಿ ಯೊಬ್ಬರೂ ಈ ಧಾರಾ ವಾಹಿಯನ್ನು ವೀಕ್ಷಿಸಿ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮೈಗೂ ಡಿಸಿಕೊಂಡು ಸತ್ಪ್ರಜೆಗಳಾಗಬೇಕು ಎಂದರು.
ಮುಖಂಡ ಮೋಹನ್ ಕಾಡ್ಲೂರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ, ಶಿಕ್ಷಣ,ಸಿಗಬೇಕೆಂಬ ಕಲ್ಪನೆಯನ್ನು ಹೊಂದಿದ್ದು. ತಮ್ಮ ಜೀವಿತವನ್ನು ಸಮಾಜದ ತುಳಿತಕ್ಕೆ ಒಳಗಾದವರಿಗೆ ಸಮರ್ಪಣೆ ಮಾಡಿದ್ದರು ಸಮಾಜದಲ್ಲಿ ಬದಲಾವಣೆ ಕಾಣಬೇಕಾದರೆ ಎಲ್ಲ ವರ್ಗದ ಜನತೆಗೂ ಸಮಾನತೆ ದೊರೆಯಬೇಕಾದರೆ ಶಿಕ್ಷಣ, ಸಂಘ ಟನೆ, ಹೋರಾಟಗಳ ಮೂಲಕ ಸಜ್ಜಾಗಬೇಕಾಗಿದೆ. ವಿದ್ಯಾರ್ಥಿಗಳು ಅಂಬೇಡ್ಕರ್ ರವರ ಪುಸ್ತಕಗಳನ್ನು ಓದುವಂತಹ ಮೂಲಕ ಅವರ ತತ್ವಾದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದರು.
ಕಾಡ್ಲೂರು ಗ್ರಾಮದ ಹಿರಿಯ ಮುಖಂಡ ಗೋಪಾಲ, ಬಿವಿಎಸ್ ಸಂಪನ್ಮೂಲ ವ್ಯಕ್ತಿ ವಕೀಲ ಯೋಗೇಶ್, ಸ.ಪುರ ತಾಲ್ಲೂಕು ಬ್ಯಾಕರವಳ್ಳಿ ಮೊರಾರ್ಜಿ ವಸತಿ ಶಾಲೆಯ ಪ್ರಾಂಶು ಪಾಲ ಷತೇಂದ್ರ ಕುಮಾರ್, ಹೊಸ Àಕೋಟೆ ಹೋಬಳಿ ಕರವೇ ಅಧ್ಯಕ್ಷ ವಿವೇಕ್ ವೈದ್ಯನಾಥ್, ಕೆ.ಹೊಸ ಕೋಟೆ ಹೋಬಳಿ ರೈತ ಸಂಘದ ಕಾರ್ಯದರ್ಶಿ ಜಯಣ್ಣಗೌಡ, ಡಾ. ವಸಂತ್ ಕುಮಾರ್ ಶೆಟ್ಟಿ, ಶಿಕ್ಷಕ ಲತೇ ಶ್, ಅಣ್ಣಪ್ಪ ,ಕುಮಾರ್ ಚಂದನ್, ಸ್ಥಳೀಯ ಮುಖಂಡರಾದ ಸೈಯದ್, ಪ್ರೀತಮ್, ಭುವನೇಶ್,ಶಕೀಲ್, ಮಾಜಿ ಗ್ರಾ.ಪಂ. ಸದಸ್ಯ ಚಂದ್ರಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.