ರೋಟರಿಯಿಂದ ಬಸ್ ತಂಗುತಾಣ ಉದ್ಘಾಟನೆ: ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನ



ಚಾಮರಾಜನಗರ: ರೋಟರಿ ಸಂಸ್ಥೆಯ   ಸುವರ್ಣ ಮಹೋತ್ಸವ  ವರ್ಷಾಚರಣೆ ಅಂಗವಾಗಿ ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ಜೆಎಸ್‍ಎಸ್ ಮಹಿಳಾ ಕಾಲೇಜ್ ಹತ್ತಿರ ಪಟೇಲ್ ಬಜಾಜ್ ಸಹ ಯೋಗದಲ್ಲಿ ನಿರ್ಮಾಣ ಮಾಡಿದ್ದ ಬಸ್ ತಂಗುತಾಣವನ್ನು  ಲೋಕಾ ರ್ಪಣೆ ಮಾಡಲಾಯಿತು. 
ನಗರಸಭಾ  ಪರಿಸರ ಇಂಜಿನಿ ಯರ್ ಗಿರಿಜಾ ಅವರು ನೂತನ ಬಸ್ ತಂಗುತಾಣವನ್ನು ಉದ್ಗಾಟಿಸಿದರು. ನಂತರ ರೋಟರಿ ಭವನದಲ್ಲಿ  ಜಿಲ್ಲೆಯ ಅತ್ಯುತ್ತಮ ಶಿಕ್ಷಕರು ನಿವೃತ್ತರಿಗೆ ಸನ್ಮಾನ  ಸಮಾರಂಭವು ನಡೆಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಗಿರಿಜಾ ಅವರು, ಚಾಮರಾಜನಗರ ಜಿಲ್ಲಾ ಕೇಂದ್ರದ ಅಭಿವೃದ್ದಿಗೆ ಸಂಘ ಸಂಸ್ಥೆಗಳ ಸಹಕಾರ ಮುಖ್ಯವಾಗಿದೆ. ರೋಟರಿ ಸಂಸ್ಥೆಯು ಎರಡು ಬಸ್ ತಂಗುತಾಣ  ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಅತ್ಯವಶ್ಯಕವಾಗಿರುವ ಜೆಎಸ್‍ಎಸ್ ಮಹಿಳಾ ಕಾಲೇಜು ಬಳಿ ಪಟೇಲ್ ಬಜಾಜ್ ಸಹಕಾರ ದಲ್ಲಿ ನಿರ್ಮಾಣ ಮಾಡಿರುವುದು ಸಂತಸ ತಂದಿದೆ. ನಗರದ  ಸ್ವಚ್ಚತೆಯಲ್ಲಿ ಎಲ್ಲರು ಭಾಗಿಗಳಾಗಬೇಕು. ಪರಿಸರ ವನ್ನು ಕಾಪಾಡುವ ನಿಟ್ಟಿನಲ್ಲಿ ನಗರಸಭೆ ಕಾರ್ಯಕ್ರಮಗಳಿಗೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. 
ರೋಟರಿ ಅಧ್ಯಕ್ಷ ಪ್ರಕಾಶ್ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, ಉತ್ತಮ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕರು ಸಮುದಾಯದ ಆಸ್ತಿ. ತಾವು ಕಲಿತ ವಿದ್ಯೆಯನ್ನು ಮಕ್ಕ ಳಿಗೆ ಧಾರೆಯೆರೆಯುವ ಮೂಲಕ ಉತ್ತ ಮ ಪ್ರಜೆಗಳನ್ನಾಗಿ ರೂಪಿಸುತ್ತಿದ್ದಾರೆ. ಇಂಥ ಶಿಕ್ಷಕರು ನಿವೃತ್ತರಾಗಿರುವುದು ಹಾಗೂ  ರಾಜ್ಯ ಮತ್ತು ಜಿಲ್ಲಾ ಮಟ್ಟ ದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಿರು ವುದು ಹೆಮ್ಮ ತಂದಿದೆ ಎಂದರು. 
ರೋಟರಿ ಕಾರ್ಯದರ್ಶಿ ಚಂದ್ರ ಪ್ರಭ ಜೈನ್, ನಿಕಟಪೂರ್ವ ಅಧ್ಯಕ್ಷ ಆರ್.ಎಂ.ಸ್ವಾಮಿ, ಕಾರ್ಯದರ್ಶಿ ಕೆಂಪನಪುರ ಮಹದೇವಸ್ವಾಮಿ, ಪಟೇಲ್ ಬಜಾಜ್  ಮಾಲೀಕ ಪಿ. ವೃಷಬೇಂದ್ರಪ್ಪ, ರೋಟರಿಯನ್ ಗಳಾದ ಶ್ರೀನಿವಾಸಶೆಟ್ಟಿ, ಜಿ.ಆರ್. ಆಶ್ವಥ್‍ನಾರಾಯಣ್, ಡಾ. ಆರ್.ಎಸ್. ನಾಗರಾರ್ಜುನ್,  ಸುಭಾಷ್, ಮಹದೇವಸ್ವಾಮಿ, ಸುರೇ ಶ್, ಕಮಾಲ್‍ರಾಜ್, ಕಾಗಲವಾಡಿ ಚಂದ್ರು, ಸ್ವಾಗತ್ ರಮೇಶ್, ಎಲ್. ನಾಗರಾಜು, ಗುರುಸ್ವಾಮಿ, ಬಿ.ಕೆ. ಮೋಹನ್, ಸಿ.ಪಿ. ಮಹೇಶ್, ಸುರೇಶ್‍ಕುಮಾರ್  ಉಪಸ್ಥಿತರಿದ್ದರು.

Post a Comment

Previous Post Next Post