8
ಕೆ.ಆರ್.ನಗರ,ಅ.22 : ಮುಂಬುರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕೆ.ಆರ್.ನಗರ ತಾಲೂಕಿನಲ್ಲಿ ಪಕ್ಷವು ಸದೃಡವಾಗಿ ಬೆಳೆಯಲು ಸಹಕಾರ ನೀಡಿ ಎಂದು ಕೆ.ಆರ್.ನಗರ ಎಪಿಎಂಸಿ ನಿರ್ದೇಶಕ ಹೊಸೂರು ಹೆಚ್.ವಿ.ಅನಿಲ್ ಕುಮಾರ್ ಹೇಳಿದರು
ತಾಲೂಕಿನ ಮಾಯಿಗೌಡನಹಳ್ಳಿಯಲ್ಲಿ ನಡೆದ ಹೊಸೂರು ವಿಭಾಗದ ಬಿ.ಜೆ.ಪಿ.ಶಕ್ತಿ ಕೇಂದ್ರದ ಗ್ರಾ.ಪಂ.ಚುನಾವಣೆಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು ಈ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಕ್ತಿ ತುಂಬಲು ಪಕ್ಷದ ಕಾರ್ಯಕರ್ತರು ಈ ಚುನಾವಣೆಯ ಮೂಲಕ ತಳಮಟ್ಟದಿಂದ ಹೋರಾಟ ನಡೆಸಿ ಎಂದರು.
ಈ ಗ್ರಾ.ಪಂ. ಚುನಾವಣೆ ವೇಳೆ ಜನಸಾಮಾನ್ಯರ ಮುಂದೆ ಪಕ್ಷದ ಪರವಾಗಿ ಮತಯಾಚನೆಯ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ.ಸರ್ಕಾರವು ಇದುವರೆವಿಗೂ ಮಾಡಿರುವ ರೈತ ಮತ್ತು ಜನ ಪರ ಕಾರ್ಯಕ್ರಮಗಳನ್ನು ಮುಂದಿಟ್ಟು ಮುಂದಿನ ದಿನಗಳಲ್ಲಿ ಮಾಡ ಬಹುದಾದ ಕೆಲಸ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಮತಯಾಚನೆ ಮಾಡುವಂತೆ ಕಾರ್ಯಕರ್ತರಿಗೆ ತಿಳಿಸಿದರು
ತಾಲೂಕು ಬಿ.ಜೆಪಿ ಉಸ್ತುವಾರಿ ರಾಜೇಗೌಡ ಮಾತನಾಡಿ ಎಲ್ಲಾ ಸಮುದಾಯಗಳು ಇರುವ ಬಿ.ಜೆ.ಪಿ ಸದಸ್ಯರ ಭೂತ್ ಸಮಿತಿ ರಚನೆ ಮಾಡಿ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಿಸುವ ಮೂಲಕ ತಾಲೂಕಿನಲ್ಲಿ ಇರುವ 34 ಗ್ರಾ.ಪಂ.ಗಳಲ್ಲಿ ಹೆಚ್ಚಿನ ಬಿ.ಜೆ.ಪಿ ಸದಸ್ಯರನ್ನ ಗೆಲ್ಲಿಸಲು ಬೆ.ಜೆ.ಪಿ.ಕಾರ್ಯಕರ್ತರು ಮುಂದಾಗ ಬೇಕು ಮತ್ತು ಪಣ ತೋಡಬೇಕೆಂದರು
ಪೂರ್ವಭಾವಿ ಸಭೆ ಸಭೆಯಲ್ಲಿ ಎ.ಪಿ.ಎಂ.ಸಿ.ನಿರ್ದೇಶಕ ಕುಪ್ಪೆ ಪ್ರಕಾಶ್, ಹಿರಿಯ ಬಿ.ಜೆ.ಪಿ ಮುಖಂಡ ಬೆಮ್ಮತ್ತಿ ಕೃಷ್ಣೇಗೌಡ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಹೊಸಕೋಟೆ ಕೃಷ್ಣ, ಶಕ್ತಿ ಕೇಂದ್ರದ ಅಧ್ಯಕ್ಷ ಲೋಕೇಶ್, ಮುಖಂಡರಾದ ಹೊಸೂರು ಕೃಷ್ಣ, ಚನ್ನಂಗೆರೆ ಮಲ್ಲೇಶ್ ನಾಯ್ಕ, ನಿಖಿಲ್, ಹರೀಶ್, ಅಂಕನಹಳ್ಳಿ ಸದಾಶಿವಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.