ಚಾಮರಾಜನಗರ: ಗ್ರಾಮೀಣ ಭಾಗದ ಜನರಿಗೆ ದಾರಿ ದೀಪವಾಗಿದೆ. ನಮ್ಮರಾಜ್ಯದಲ್ಲಿ ಹಾಲು ಉತ್ಪಾದನೆಗೆ ಉತ್ತಮ ಬೇಡಿಕೆ ಇದೆ ಎಂದು ಚಾಮರಾಜನಗರ ನಗರಸಭೆ ಪೌರಯುಕ್ತ ರಾಜಣ್ಣ ತಿಳಿಸಿದ್ದಾರೆ.
ನಗರದ ಸಮೀಪದ ಸೋಮವಾರಪೇಟೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಕ್ಕೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರತಿಯೊಂದು ಗ್ರಾಮದಲ್ಲಿ ಹೈನುಗಾರಿಕೆ ಯಿಂದ ಎಷ್ಟೋ ಕುಟುಂಬಗಳು ಉತ್ತಮ ಜೀವನವನ್ನು ನಡೆಸುತ್ತಾ ಬಂದಿದೆ. ಇಷ್ಟು ದಿನಗಳ ಕಾಲ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ ಹಾಲು ಉತ್ಪಾದಕರ ಸಂಘ ಇಂದು ಸ್ವಂತ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವುದು ಸಂತೋಷದ ವಿಷಯ ಕಟ್ಟಡ ಬೇಗನೇ ಪೂರ್ಣ ಗೊಳಿಸಿ ಜಿಲ್ಲೆಯಲ್ಲಿಯೇ ಉತ್ತಮ ಹಾಲು ಉತ್ಪಾದಕರ ಸಂಘವಾಗಲು ರೈತರು ಕೈ ಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವಾರ್ಡ್ 2 ಗೌರಿಸೆಂದಿಲ್ ಕುಮಾರ್, ವಾರ್ಡ್ 1 ನಿಲಮ್ಮ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಮಮತಮಹದೇವಸ್ವಾಮಿ, ಹಾಗೂ ಸದಸ್ಯರಾದ ಎನ್.ವೃಷಬೇಂದ್ರಸ್ವಾಮಿ, ಎಸ್.ಬಿ. ರಾಜಪ್ಪ, ನಂಜುಂಡಸ್ವಾಮಿ, ಮಾಜಿ ಸದಸ್ಯರಾದ ಮಹದೇವು, ಸಿದ್ದಶೆಟ್ಟಿ, ಮಹದೇವಶೆಟ್ಟಿ, ಕೃಷ್ಣಶೆಟ್ಟಿ, ಚಂದ್ರಶೇಖರ್, ಪ್ರಭು ಹಾಜರಿದ್ದರು