ಪಾಂಡವಪುರ : ರಾಸುಗಳಿಗೆ ಕಾಲುಬಾಯಿ ಜ್ವರ ಸೇರಿದಂತೆ ಇತರೆ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹಾಲಿನ ಇಳುವರಿ ಕಮ್ಮಿ ಯಾಗಲಿದ್ದು, ಜತೆಗೆ ನಿರ್ವಹಣಾ ವೆಚ್ಚ ಅಧಿಕವಾಗಿ ರೈತರಿಗೆ ನಷ್ಟ ಉಂಟಾ ಗುವ ಸಂಭವ ಹೆಚ್ಚಾಗಿರುತ್ತದೆ. ಹೀಗಾ ಗಿ ರೈತರು ಕಾಲ ಕಾಲಕ್ಕೆ ಸೂಕ್ತ ಲಸಿಕೆ ಹಾಕಿಸುವ ಮೂಲಕ ರಾಸುಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಂ.ಸಿ. ಪದ್ಮನಾಭ್ ಸಲಹೆ ನೀಡಿದರು.
ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರ ಮದಡಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮನ್‍ಮುಲ್ ಸಹಯೋಗದಲ್ಲಿ ನಡೆದ 17ನೇ ಸುತ್ತಿನ ರಾಸುಗಳಿಗೆ ಕಾಲು ಬಾಯಿ ಜ್ವರ ಲಸಿಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಸುಗಳಿಗೆ ಬರುವ ಕಾಲು ಬಾಯಿ ಜ್ವರ ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಕಾಯಿಲೆ ಬಂದ ರಾಸುಗಳು ಹಾಲು ಕಡಿಮೆ ಕೊಡುತ್ತವೆ. ಇದರಿಂದ ರೈತನ ಆದಾಯ ಕಡಿಮೆಯಾಗುತ್ತದೆ. ಹೀಗಾ ಗಿ ಕಾಯಿಲೆ ಬರುವ ಮುನ್ನ ಮುಂಜಾ ಗ್ರತೆ ವಹಿಸುವುದು ಸೂಕ್ತ. ಲಾಕ್‍ಡೌನ್ ಸಂದರ್ಭದಲ್ಲಿ ದೇಶದಲ್ಲಿ ಎಲ್ಲ ಉದ್ಯಮಗಳು ನಿಂತರೂ ಕೃಷಿ ಮತ್ತು ಹೈನೋದ್ಯಮ ನಿಲ್ಲಲಿಲ್ಲ. ಇದರಿಂದ ದೇಶದ ಜನರಿಗೆ ನಿರಂತರವಾಗಿ ಆಹಾರ ಒದಗಿಸಲು ಸಾಧ್ಯವಾಯಿತು ಎಂದು ಹೇಳಿದರು.
ಜಿಲ್ಲೆಯಾದ್ಯಂತ ಅ.2ರಿಂದ ನ.15ರವರೆಗೆ ಕಾಲುಬಾಯಿ ಜ್ವರದ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದ್ದು, ಪ್ರತಿ ವರ್ಷ ಎರಡು ಬಾರಿ ಲಸಿಕೆ ಕಾರ್ಯಕ್ರಮ ಆಯೋಜಿಸ Àಲಿದ್ದು, ರೈತರು ತಪ್ಪದೇ ರಾಸುಗಳಿಗೆ ಲಸಿಕೆ ಹಾಕಿಸಬೇಕು ಎಂದರು.
ಜಿ.ಪಂ ಸದಸ್ಯೆ ಶಾಂತಲಾ ರಾಮಕೃಷ್ಣೇಗೌಡ ಮಾತನಾಡಿ, ಇತ್ತೀಚೆಗೆ ಮನ್‍ಮುಲ್ ರೈತರಿಗೆ ನೀಡುತ್ತಿದ್ದ ಹಾಲಿನ ದರದಲ್ಲಿ 2 ರೂ. ಇಳಿಕೆ ಮಾಡಿದೆ. ಇದರಿಂದ ಹೈನುಗಾರರಿಗೆ ಸಿಗುತ್ತಿದ್ದ ಲಾಭಾಂಶ ದಲ್ಲಿ ಕಡಿತ ಉಂಟಾಗಿದ್ದು ಕೂಡಲೇ ಸಂಬಂಧ ಪಟ್ಟವರು ಮತ್ತೆ ಹಾಲಿನ ದರ 2 ರೂ. ಹೆಚ್ಚಿಸಬೇಕು ಎಂದು ಒತ್ತಾಯಿಸಿದ ಅವರು, ರೈತರು ಕಾಲ ಕಾಲಕ್ಕೆ ತಮ್ಮ ರಾಸುಗಳಿಗೆ ಕಾಲು ಬಾಯಿ ಜ್ವರದ ವಿರುದ್ಧ ಲಸಿಕೆ ಹಾಕಿಸ ಬೇಕು ಎಂದು ಸಲಹೆ ನೀಡಿದರು.
ಮನ್‍ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರ, ತಾಪಂ ಅಧ್ಯಕ್ಷೆ ನವೀನ ವೆಂಕಟೇಶ್ ಮಾತನಾಡಿದರು. ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ತಾ.ಪಂ ಸದಸ್ಯೆ ಗಾಯಿತ್ರಿ ಕಾಂತರಾಜು, ಮಾಜಿ ಸದಸ್ಯ ಎಲ್.ಎಸ್.ರಾಜು, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ನಟರಾಜ್, ಲಕ್ಷ್ಮೀಸಾಗರ ಡೇರಿ ಅಧ್ಯಕ್ಷ ಅಶೋಕ್, ಮನ್ ಮುಲ್ ಉಪ ವ್ಯವಸ್ಥಾಪಕ ವಿಜಯ ಕುಮಾರ್, ಮಾರ್ಗ ವಿಸ್ತರಣಾಧಿಕಾರಿ ಗಳಾದ ಉಷಾ, ಮಂಜುನಾಥ್, ಜೆಡಿಎಸ್ ಮುಖಂಡ ಶ್ಯಾದನಹಳ್ಳಿ ಚಲುವರಾಜು, ಪಶುಪಾಲನ ಇಲಾ ಖೆಯ ಕೊಂಡಯ್ಯ, ದೇವರಾಜು, ಸಾಕಮ್ಮ, ಕದರೇಶ್ ಇತತರರಿದ್ದರು.