ಕಾಡುಪ್ರಾಣಿಗಳ ಸಂಘರ್ಷ : ಸರ್ಕಾರ ಶಾಶ್ವತ ಪರಿಹಾರ‌ ಒದಗಿಸಲುವಂತೆ ಅನಂತಸುಬ್ಬರಾಯ್ ಕರೆ





ಬೇಲೂರು : ಇತ್ತೀಚಿನ ದಿನಗಳಲ್ಲಿ ಮಾನವ ಹಾಗೂ ಕಾಡುಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಕೂಡಲೇ ಶಾಶ್ವತ ಪರಿಹಾರವನ್ನು ಒದಗಿಸಬೇಕು ಎಂದು ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೊಚ ಅನಂತಸುಬ್ಬರಾಯ್ ಹೇಳಿದರು.
ಸುದ್ದಿ ಘೋಷ್ಟಿ ಯಲ್ಲಿ ಮಾತನಾಡಿದ ಅವರು ಹಾಸನ ಜಿಲ್ಲೆಯಲ್ಲಿ ಆಲ್ದೂರು,ಸಕಲೇಶಪುರ,ಅರಕಲಗೂಡು, ಬೇಲೂರು ತಾಲೂಕಿನಲ್ಲಿ ಕಾಫಿ ಬೆಳೆಗಾರರು ಹಾಗೂ ರೈತರು ಕಾಡು ಪ್ರಾಣಿಗಳಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.ಈ ಪ್ರದೇಶವು ಪಶ್ಚಿಮ ಘಟ್ಟದಲ್ಲಿರುವುದರಿಂದ ಇದು ಸೂಕ್ಷ್ಮ ಪ್ರದೇಶ ಎಂಬುವುದು ಎಲ್ಲರಿಗೂ ತಿಳಿದ ವಿಚಾರ.ಈಗಾಗಲೇ ಆನೆಗಳ ಹಾವಳಿ ಯಿಂದಾಗಿಇಲ್ಲಿಯ ಬೆಳೆಗಾರರು ಸಂಪೂರ್ಣ ನಲಗುತ್ತಿದ್ದಾರೆ.ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರ ಯಾವುದೇ ಕಾಮಗಾರಿ ಎತ್ತಿನಹೊಳೆಯಂತ ಹಲವಾರು ಯೋಜನೆಗಳನ್ನು  ನೀಡುವಾಗ ಈ ಭಾಗಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗೆ ಅನುಮತಿ ನೀಡಬೇಕು .ಈಗ ನಡೆಯುತ್ತಿರುವ ಕಾಮಗಾರಿಯಿಂದ ಬರುವ ಶಬ್ಧದಿಂದಾಗಿ ಕೇವಲ ಆನೆಗಳಲ್ಲದೆ ವನ್ಯಪ್ರಾಣಿ ಗಳು ಕಾಡನ್ನು ಬಿಟ್ಟು ನಾಡಿಗೆ ಬರುಬಂತಾಗಿದೆ.ರೈತರು ಹಾಗೂ ಕಾಫಿ ಬೆಳೆಗಾರರಿಗೆ ಬೆಳೆ ಮತ್ತು ಆಸ್ತಿ ನಷ್ಟದ ಪರಿಹಾರ ಸಮವಾಗಿ ವಿತರಿಸುತ್ತಿಲ್ಲ.ಕಾಫಿ ಬೆಳೆಗಾರರ ಗಿಡಗಳಿಗೆ ಹಾನಿಯಾದ ಹಿನ್ನಲೆಯಲ್ಲಿ ಧನಾತ್ಮಕ ಧನ ಎಂದು ಪರಿಹಾರ ನೀಡುತ್ತಿರುವುದು ಸರಿಯಲ್ಲ.ಅದನ್ನು ಗಿಡದ ಅನುಗುಣಕ್ಕಾಗಿ ನಷ್ಟ ವನ್ನು ಗಮನದಲ್ಲಿಟ್ಟುಕೊಂಡು ಪರಿಹಾರವನ್ನು ಹೆಚ್ಚು ನೀಡಬೇಕು. ಈಗಾಗಲೇ ನಮ್ಮ ಜಿಲ್ಲೆಯಲ್ಲಿ ೫೦-೬೦ ಆನೆಗಳು ಕಾಣಿಸಿಕೊಂಡಿದ್ದು,ಅವುಗಳನ್ನು ಕಾಡಿಗೆ ಅಟ್ಟುವ ಕೆಲಸ ಆಗಬೇಕು.೨೦೧೦ ರಿಂದ ಇಲ್ಲಿಯವರೆಗೂ ಸುಮಾರು ೪೧ ಜನರು ಕಾಡು ಆನೆಗಳ ದಾಳಿಗೆ ಸಾವನ್ನಪ್ಪಿದ್ದಾರೆ.ಆದ್ದರಿಂದ ತಕ್ಷಣವೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು.ಆನೆ ಕಾರಿಡಾರ್ ಯೋಜನೆಯ ಬಗ್ಗೆ ಭರವಸೆ ನೀಡುವ ಬದಲು ಅದರಿಂದ ಏನು ಉಪಯೋಗ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.ಇಡೀ ಜಿಲ್ಲೆಯಲ್ಲಿ ಬೆಳೆಗಾರರರು ಕಾಡನ್ನು  ನಾಶಮಾಡಿ ಯಾರೂ ಸಹ ಒತ್ತುವರಿ ಮಾಡಿಲ್ಲ ಎಂದು ತಿಳಿಸಿದರು.
ಬೆಳೆಗಾರರ ಹಾಗೂ ಮಾನವ, ಕಾಡುಪ್ರಾಣಿಗಳ ಸಂಘರ್ಷ ಸಮಿತಿಯ ಸಂಚಾಲಕ ರೋಹಿತ್ ಮಾತನಾಡಿ ಈಗಾಗಲೇ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ೬ ಸಾವಿರಕ್ಕೂ ಹೆಚ್ಚು ಆನೆಗಳ ಸಂಖ್ಯೆ ಇದ್ದು ಇದರಲ್ಲಿ ೫ ರಲ್ಲಿ ಒಂದು ಭಾಗ ನಮ್ಮ ಜಿಲ್ಲೆಯಲ್ಲಿದೆ.ಜಿಲ್ಲೆಯಲ್ಲಿ ೬೫ ಕ್ಕೂ ಹೆಚ್ಚು ಆನೆಗಳು ವಿವಿಧ ಭಾಗಗಳಲ್ಲಿ ಇರುವುದರಿಂದ ಈ ಭಾಗದಲ್ಲಿ ರೈತರು ಹಾಗೂ ಕಾಫಿ ಬೆಳೆಗಾರರ ಉದ್ಯಮ ನಶಿಸಲು ಕಾರಣವಾಗುತ್ತಿದೆ.ಉತ್ಪನ್ನ ವೆಚ್ಚ ,ಹೆಚ್ಚುತ್ತಿರುವ ಕಾರ್ಮಿಕರ ವೇತನದಿಂದಾಗಿ ಕಾಫಿ ಬೆಳೆಗಾರರು ಬಳಲುತ್ತಿದ್ದು,ಕಾಡಾನೆಗಳಿಂದ ಬೆಳೆಗಾರರ ಮೇಲೆ ಆಗುತ್ತಿರುವ ಹಾನಿಯನ್ನು ಯಾರೂ ಕೇಳದಂತಾಗಿದೆ.ಈಗಾಗಲೇ ಆನೆಗಳಿಂದ  ನಷ್ಟ ಸಂಭವಿಸಿದಾಗ ಅದಕ್ಕೆ ಪರಿಹಾರ ನೀಡುವಲ್ಲಿಯೂ ಸಹ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.ಸಣ್ಣ ಬೆಳೆಗಾರರಿಂದ ಹಿಡಿದು ಪ್ರತಿಯೊಬ್ಬ ಬೆಳೆಗಾರರೂ ಅರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಗೋವಿಂದ ಶೆಟ್ಟರು ಮಾತನಾಡಿ ಅತಿವೃಷ್ಟಿ ಇಂದಾಗಿ ಎನ್ ಡಿ ಆರ್ ಎಫ್ ನವರು ತಾಲೂಕಿನಲ್ಲಿ ೫೮ ಗ್ರಾಮಗಳನ್ನು ಮಾತ್ರ ಪರಿಹಾರಕ್ಕೆ ಸೇರಿಸಿ,ಇನ್ನಿತರ ಅತಿ ಹೆಚ್ಚು ಹಾನಿಯಾಗಿರುವ ಪ್ರದೇಶಗಳನ್ನು ಸೇರಿಸದೆ ಸಮರ್ಪಕವಾಗಿ ಸರ್ವೆ ನಡೆಸದೆ ಗೆಂಡೇಹಳ್ಳಿ,ಅರೇಹಳ್ಳಿ, ಹಾಗೂ ಇನ್ನಿತರ ಮಲೆನಾಡು ಭಾಗಗಳನ್ನು ಕಡೆಗಣಿಸುತ್ತಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.ಅಲ್ಲದೆ‌ಇತ್ತೀಚಿಗೆ ಬಿದ್ದಂತ ಬಾರೀ ಮಳೆಯಿಂದಾಗಿ ಕಾಫಿ ಉದ್ಯಮಕ್ಕೆ ಬಲವಾದ ಪೆಟ್ಟು ಬಿದ್ದಿದ್ದು,ಮೆಣಸು,ಕಾಫಿ ಸಂಪೂರ್ಣ ನೆಲಕಚ್ಚಿದ್ದು,ಸೂಕ್ತ ಪರಿಹಾರ ನೀಡುವುದರ ಜೊತೆಗೆ ಕಾಫಿಬೆಳೆಗಾರರ ಬಡ್ಡಿ ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅರೇಹಳ್ಳಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಖಲೀಂ ಮಹಮ್ಮದ್,ತಾಲೂಕು ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಮನು ಹಾಜರಿದ್ದರು.
,

Post a Comment

Previous Post Next Post