ವ್ಯವಸಾಯ ಉತ್ಪನ್ನ ಸಹಕಾರ ಸಂಘದಲ್ಲಿ ೧೦ ಜನರು ಅವಿರೋಧವಾಗಿ ಆಯ್ಕೆ


ಬೇಲೂರು: ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘ ಮತ್ತೊಮ್ಮೆ ಜೆಡಿಎಸ್ ಪ್ರಾಬಲ್ಯ ಮೆರೆದಿದೆ.
೧೩ ಸದಸ್ಯರ ಬಲದ ವ್ಯವಸಾಯ ಉತ್ಪನ್ನ ಸಹಕಾರ ಸಂಘದಲ್ಲಿ ೧೦ ಜನರು ಅವಿರೋಧವಾಗಿ ಆಯ್ಕೆಯಾಗಿದ್ದರು.ಇದರಲ್ಲಿ ಬಿಡಿ ಚಂದ್ರೇಗೌಡ,ಎಸ್ ನಾಗೇಶ್, ಬಿ,ಎಂ ರವಿಕುಮಾರ್ ,ಕೆಜಿ ಕುಮಾರ್,ರಾಜಶೇಖರಯ್ಯ,ಕಾಂತರಾಜ್,ಪ್ರಸಾದ್,ಭಾರತೀಗೌಡ,ಪ್ರಿಯಾಂಕ,ಜಾನಕಮ್ಮ,ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಮೂರು ಸ್ಥಾನಗಳಿಗೆ ಬಿಸಿಎಂಬಿ ವರ್ಗದಲ್ಲಿ ಡಿ,ಪಿ,ಸೋಮೇಗೌಡ,ಎಸ್ ರವಿ,ಸಾಮಾನ್ಯ ವರ್ಗದಿಂದ ಡಿ,ಇ,ಮಲ್ಲೇಗೌಡ,ಪಿಟಿ ಸೋಮೇಗೌಡ,ಹಾಗೂ ಎಸ್ಸಿ ವರ್ಗದಿಂದ ಹೆಚ್ ಎಂ.ಗೋವಿಂದಪ್ಪ,ಮಂಜುನಾಥ್ ಹಾಗೂ ಬಿಎಲ್ ಲಕ್ಷ್ಮಣ್ ಸೇರಿ ಏಳು ಜನರು ಕಣದಲ್ಲಿದ್ದರು.
ಸುಮಾರು ೨೧೫ ಮತದಾರರಿದ್ದು ಇದರಲ್ಲಿ ೨೦೬ ಮತದಾನವಾಗಿದ್ದು ಸಾಮಾನ್ಯ ವರ್ಗದಿಂದ ಡಿ ಇ ಮಲ್ಲೇಗೌಡ ೧೪೨ ಮತಗಳನ್ನು ಪಡೆದರೆ.ಹಿಂದುಳಿದ ವರ್ಗ ಬಿ ಡಿ,ಪಿ,ಸೊಮೇಗೌಡ‌ ೧೪೦ ಮತಗಳನ್ನು ಪಡೆದು, ಪರಿಶಿಷ್ಟ ಜಾತಿಯಿಂದ ಬಿ ಎಲ್ ಲಕ್ಷ್ಮಣ್ ೧೧೮ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿದ್ದ ಎಸ್ ಆರ್ ಲೋಕೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಿಶಾಲಿಯಾದವರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ ಎಸ್ ಲಿಂಗೇಶ್ ಎಲ್ಲರ ಸಹಕಾರದಿಂದಾಗಿ ಮತ್ತೊಮ್ಮೆ ಜೆಡಿಎಸ್ ಪಕ್ಷ ತನ್ನ ಹಿಡಿತವನ್ನು ಸಹಕಾರ ಕ್ಷೇತ್ರದಿಂದ ಹಿಡಿಯುತ್ತಾ ಬಂದಿದೆ.ಇದಕ್ಕೆ ಕಾರಣ ಹೆಚ್ ಡಿ ರೇವಣ್ಣನವರು,ಸಹಕಾರ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ನೆನೆದು ಈದಿನ ಮತದಾರರು ನಮ್ಮ ಪಕ್ಷದ ಕೈ ಹಿಡಿದಿದ್ದಾರೆ.ತಾಲೂಕಿನಲ್ಲಿ ಪ್ರಥಮಬಾರಿಗೆ ಪಿಎಲ್ ಡಿ ಬ್ಯಾಂಕ್ ನಲ್ಲಿ ಇದ್ದಂತ ೧೩ ಕ್ಷೇತ್ರಗಳಲ್ಲಿ ೧೦ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆಮಾಡುವುದರ ಮೂಲಕ ಜೆಡಿಎಸ್ ಪಕ್ಷ ಪ್ರಾಭಲ್ಯ ಮೆರೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿ,ಪಂ,ಮಾಜಿ‌ಅಧ್ಯಕ್ಷ ಬಿಡಿ ಚಂದ್ರೇಗೌಡ ಮಾತನಾಡಿ ಸುಮಾರು ೧೫ ವರ್ಷದಿಂದ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆದುಕೊಂಡು ಬರುತ್ತಿದೆ.ಈಗಾಗಲೇ ೧೩ ಕ್ಷೇತ್ರಗಳಲ್ಲಿ ೧೦ ಕ್ಷೇತ್ರಗಳಲ್ಲಿ ಸಂಸದರ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.ಇನ್ನು ಮೂರು ಸ್ಥಾನಗಳಿಗೆ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಗಳನ್ನು  ಮತದಾರರು ಗೆಲ್ಲಿಸಿದ್ದಾರೆ ಎಂದರು.
ನೂತನ ಸದಸ್ಯರಾದ ಮಲ್ಲೇಗೌಡ ಸೋಮೇಶ್ ಮಾತನಾಡಿ ಎಲ್ಲರ ಸಹಕಾರದಿಂದ ಮತದಾರ ಒಲವಿನಿಂದಾಗಿ ನಮ್ಮನ್ನು ಆಯ್ಕೆ ಮಾಡಿದ್ದಾರೆ.ವ್ಯವಸಾಯ ಉತ್ಪನ್ನದ ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃದ್ಧಿ ಕೊಂಡುಯ್ಯೊವುದರ ಜೊತೆಗೆ ಜಿಲ್ಲೆಯಲ್ಲಿ ಮಾದರಿ ಸಂಘವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಿ,ಹೆಚ್ ಮಹೇಶ್,ತಾ,ಪಂ,ಮಾಜಿ ಅಧ್ಯಕ್ಷ ಬಾಣಸವಳ್ಳಿ ಅಶ್ವಥ್, ನಟರಾಜ್,ಡಿಪಿ ನಾಗೇಶ್,ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್ ಕೆ ನಾಗೇಶ್,  ಬಿರಟೇಮನೆ ಸುರೇಶ್,ಮಹದೇವ್,ಉಮೇಶ್,
ಜಗದೀಶ್,ಸತೀಶ್,ಜಯರಾಂ,ರಮೇಶ್,ಸಂದೀಪ್,,ಇನ್ನು ಮುಂತಾದವರು ಹಾಜರಿದ್ದರು.

Post a Comment

Previous Post Next Post