ಚಾಮರಾಜನಗರ:- ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯನ್ನು ಬಳಸಿ ಜಿಲ್ಲೆಯ ವಿವಿಧ ಗಣಿ ಬಾಧಿತ ಪ್ರದೇಶದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರಗ್ರಾಮದಲ್ಲಿ 0.625 ಕಿ.ಮೀರಸ್ತೆ ಕಾಮಗಾರಿಯನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ 100 ಲಕ್ಷ ರೂ ವೆಚ್ಚದಲ್ಲಿ ಕೈಗೊಂಡಿದ್ದು ಈ ಸಂಬಂಧ ಈಗಾಗಲೇ 75 ಲಕ್ಷ ರೂಗಳನ್ನು ಬಿಡುಗಡೆಗೊಳಿಸಿದ್ದು, ಇದರಡಿ ನಿರ್ವಹಿಸಲಾಗಿರುವ ರಸ್ತೆ ಕಾಮಗಾರಿಯನ್ನು ಜಿಲ್ಲಾಧಿಕಾರಿಯವರು ಪರಿಶೀಲಿಸಿದರು.
ಜ್ಯೋತಿಗೌಡನಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಬಳಸಿ ಗ್ರಾಮಾಂತರ ಮಕ್ಕಳ ಇನ್‍ಫರ್‍ಮೇಷನ್ ಟೆಕ್ನಾಲಜಿ ಕಲಿಕೆಗೆ ಅನುಕೂಲವಾಗುವಂತೆ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಿರುವುದನ್ನು ಪರಿಶೀಲಿಸಿದರು. ಮಕ್ಕಳ ಶಾರೀರಿಕ, ಬೌದ್ದಿಕ ಬೆಳವಣಿಗೆಗೆ ಅನುಕೂಲವಾಗಲು ಖರೀದಿಸಿರುವ ಕ್ರೀಡಾ ಸಮಗ್ರಿಗಳ ಗುಣಮಟ್ಟ ಪರಿಶೀಲಿಸಿದರು.
ಮಲೆಯೂರು ಗ್ರಾಮದಲ್ಲಿ ಅಂತರಗಂಗೆ ಅಂತರ್ಜಲ ಅಭಿವೃದ್ದಿಗಾಗಿ ಇಂಗುಗುಂಡಿ ನಿರ್ಮಾಣವಾಗುತ್ತಿರುವ ಪ್ರದೇಶಕ್ಕೂ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು.ಸಣ್ಣ ನೀರಾವರಿ ಇಲಾಖೆ ಮೂಲಕ ಇಲ್ಲಿನಅಂತರಗಂಗೆ ಹಳ್ಳಕ್ಕೆ ಇಂಗು ಕೆರೆ ನಿರ್ಮಾಣಕಾಮಗಾರಿಗೆರೂ.100 ಲಕ್ಷರೂಮೀಸಲಿರಿಸಿದ್ದು ಈಅನುದಾನದಡಿಕೈಗೊಂಡಿರುವಕಾಮಗಾರಿಯನ್ನು ವ್ಯಾಪಕವಾಗಿಜಿಲ್ಲಾಧಿಕಾರಿಡಾ.ಎಂ.ಆರ್. ರವಿ ಅವರು ಪರಿಶೀಲನೆ ಮಾಡಿದರು.
ಮಲೆಯೂರುಗ್ರಾಮದಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಖನಿಜ ಪ್ರತಿಷ್ಠಾನದಿಂದ ಹಣ ವಿನಿಯೋಗಿಸಿ ಸ್ಮಾರ್ಟ್ ಕ್ಲಾಸ್ ಬೋರ್ಡ್, ಕಂಪ್ಯೂಟರ್, ಪ್ರೋಜೆಕ್ಟರ್ ಸೇರಿದಂತೆ ಇತರೆ ಒದಗಿಸಲಾಗಿರುವ ಸೌಲಭ್ಯಗಳನ್ನು ವೀಕ್ಷಿಸಿದರು.ಶಾಲೆಗಳು ಆರಂಭಕ್ಕೆ ಮೊದಲೇ ಈ ಎಲ್ಲಾ ಕಲಿಕಾ ಸಾಮಗ್ರಿಗಳನ್ನು ಅಳವಡಿಸಿ ಮಕ್ಕಳ ಮಾಹಿತಿ ತಂತ್ರಜ್ಞಾನ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಸೂಚಿಸಿದರು.
ಹೆಚ್ಚಿನ ಯುವಕರು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದರು. ಪ್ರಸ್ತುತ ಕೋವಿಡ್ 19 ಹಿನ್ನಲೆಯಲ್ಲಿ ಉದ್ಯೋಗ ಅರಸಿ ಹೋಗಿದ್ದ ಯುವಜನರು ಸ್ವಾಗ್ರಾಮಕ್ಕೆ ಹಿಂದಿರುಗಿ ಉದ್ಯೋಗ ನಿರೀಕ್ಷೆಯಲ್ಲಿರುವುದನ್ನು ಮನಗಂಡಿರುವ ಜಿಲ್ಲಾಡಳಿತವು ಗ್ರಾನೈಟ್ ಉದ್ದಿಮೆಗೆ ಅವಶ್ಯಕವಾದ ಮಾನವ ಸಂಪನ್ಮೂಲವನ್ನು ಸ್ಥಳೀಯವಾಗಿ ತರಬೇತಿ ನೀಡಿ ಅಭಿವೃದ್ದಿ ಪಡಿಸಿ ಆ ಮೂಲಕ ಜಿಲ್ಲೆಯ ಜನರಿಗೆ ಉದ್ಯೋಗ ದೊರಕಿಸಿಕೊಡಲು ವಿನೂತನ ಯೋಜನೆಯನ್ನು ರೂಪಿಸಿದೆ.
ಈ ಯೋಜನೆಯ ಅನುಷ್ಠಾನಕ್ಕಾಗಿ ಮೊದಲಿಗೆ ತರಬೇತಿ ನೀಡುವ ಸಂಬಂಧ ಚಾಮರಾಜನಗರ ತಾಲ್ಲೂಕಿನ ಬದನಗುಪ್ಪೆಯಲ್ಲಿರುವ ಅನಂತಕುಮಾರ ರವರ ಒಡೆತನದ ಮೆ: ಬಿಳಿಗಿರಿ ಗ್ರಾನೈಟ್ ಕಟಿಂಗ್ ಮತ್ತು ಪಾಲಿಷಿಂಗ್ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರು ಭೇಟಿ ನೀಡಿ ಗ್ರಾನೈಟ್ ಉದ್ಯಮಕ್ಕೆ ಅವಶ್ಯಕವಾದ ಮಾನವ ಸಂಪನ್ಮೂಲ ತರಬೇತಿ ಸಂಬಂಧ ಪರಿಶೀಲನೆ ನಡೆಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಲಕ್ಷ್ಮಮ್ಮ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಟಿ.ಎಸ್.ಜವರೇಗೌಡ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್, ಕೌಶಲ್ಯಾಭಿವೃದ್ದಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟರಾಮು ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
.