ಮಹಿಷಾ ದಸರಾ ಆಚರಣೆಗೆ ಒತ್ತಾಯ

ಗುಂಡ್ಲುಪೇಟೆ : ಮಹಿಷಾ ಈ ನಾಡಿನ ಮೂಲ ದೊರೆ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ ರವರು ಹೇಳಿದರು. ಅವರು ಇಂದು ಮಾನವ ಬಂಧುತ್ವ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಮಹಿಷಾನಿಗೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಷಾಸುರ ಕಾಲಾನಂತರದಲ್ಲಿ ಮೈಸೂರು ಆಗಿದೆ. ಇದನ್ನು ಈ ಹಿಂದೆ ಮಹಿಷಾಪುರ ,ಮಹಿಷಾ ಮಂಡಲ ಎಂಬುದಾಗಿಯೂ ಕರೆಯಲಾಗುತ್ತಿತ್ತು. ಮಹಿಷಾ ಮಂಡಲ ಮತ್ತು ತಮಿಳುನಾಡಿನ ಉದಕ ಮಂಡಲ ಇವುಗಳಿಗೆ ಎರಮೈ ನಾಡು ಎಂದು ಸಹ ಕರೆಯಲಾಗುತ್ತಿತ್ತು. ಇವರ ಲಾಂಚನ ಎಮ್ಮೆಯ ಮುಖದ ಚಿತ್ರವಾಗಿದೆ. ಧೃಡ ಕಾಯದ ದೇಹ ಹೊಂದಿದ್ದು ನಾಗರ ಹಾವನ್ನು ಕೈಯಲ್ಲಿ ಹಿಡಿದು ನಾಗ ಕುಲಕ್ಕೆ ಸೇರಿದ ರಾಜನಾಗಿದ್ದನು.ಅಶೋಕನ ಕಾಲದಲ್ಲಿ ಭೌದ್ಧ ಧಮ್ಮ ಬೆಳೆಸಲು ಈ ಭಾಗಕ್ಕೆ ಬಂದ ಮಹದೇವ ಥೇರಾ ಎಂಬುದು ಧೃಡವಾಗಿದೆ. ಮನುವಾದಿಗಳ ಪಿತೂರಿ ಸಂಚಿನಿಂದ ಚಾಮುಂಡಿಗೆ ಅಮೀಷ ನೀಡಿ ಕೊಲೆ ಮಾಡಿಸಲಾಗಿದೆ ಅಷ್ಟೆ. ಇವತ್ತಿಗೂ ಮೈಸೂರು ಅರಮನೆಯಲ್ಲಿ ಮಹಿಷಾನಿಗೆ ಬಹುಪರಾಕ್ ಮೂರು ಭಾರಿ ಹೇಳುತ್ತಾರೆ . ಆತ ನಿಜವಾಗಿಯೂ ದುಷ್ಟ ನಾಗಿದ್ದರೆ ಆ ರೀತಿ ಮಾಡಲು ಸಾಧ್ಯವಿತ್ತೆ ಹೇಳಿ ಎಂದು ಪ್ರಶ್ನಿಸಿದರು. ವಿಶ್ವ ಮಟ್ಟದಲ್ಲಿ ಮೈಸೂರು ಪ್ರಾಚೀನ ನಗರ ಎನ್ನಿಸಿಕೊಂಡಿದೆ. ಸ್ವಾತಂತ್ರ್ಯ ಬಂದಾಗಲೂ ಕನ್ನಡ ನಾಡಿಗೆ ಮೈಸೂರು ರಾಜ್ಯ ಎಂದೆ ಕರೆಯಲಾಗುತ್ತಿತ್ತು. 1973 ರ ನಂತರ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು . ದುರಂತ ನಾವು ಮಹಿಷಾಸುರ ದೊರೆಯನ್ನು ಮರೆತು ಕಪೋಲಕಲ್ಪಿತ ಕಥೆಗಳನ್ನು ನಂಬಿಸಲಾಗಿದೆ ಎಂದು ತಿಳಿಸಿದರು. 

   ವಕೀಲರು ಆದ ಸಂಪತ್ತು ಎಂ .ಎನ್ .ರವರು ಮಾತನಾಡಿ ಮೈಸೂರು ವಿಶ್ವ ಪ್ರಸಿದ್ಧ ಪಡೆಯಲು ಮಹಿಷಾ ನ ಜನಹಿತ ಕಾರ್ಯಗಳೇ ಕಾರಣ ಎಂದು ತಿಳಿಸಿದರು.
    ಕರ್ನಾಟಕ ಬುದ್ದ ಧಮ್ಮ ಸಮಿತಿಯ ಡಿ .ಗೋವಿಂದ ರಾಜ್ ಮಾತನಾಡಿ ಮೂಲ ನಿವಾಸಿ ಭೌಧ್ಧ ದೊರೆಯನ್ನು ಮನುವಾದಿಗಳು ಚಾಮುಂಡಿ ಎಂಬ ಅವಾಸ್ತವಿಕ ರೂಪದ ಹೆಣ್ಣು ಮಗಳನ್ನು ಸೃಷ್ಟಿಸಿ ಕೊಲೆಯನ್ನು ಸಮರ್ಥಿಸಿಕೊಳ್ಳಲು ಕಥೆಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.
  ಈ ಸಂಧರ್ಭದಲ್ಲಿ ಆರ್ .ಸೋಮಣ್ಣ ( ಸಂಚಾಲಕರು ಮಾನವ ಬಂಧುತ್ವ ವೇದಿಕೆ ),ಅಬ್ದುಲ್ ಮಾಲಿಕ್ ( ಅಧ್ಯಕ್ಷರು .ಕಾವಲು ಪಡೆ) ಅಬ್ದುಲ್ ರಶೀದ್ , ಗಿರೀಶ್ ಲಕ್ಕೂರು, ಕಾಳಿಂಗ ಸ್ವಾಮಿ ಸಿದ್ದಾರ್ಥ, ವಿ.ಲೋಕೇಶ್ , ರಾಜೇಶ್ (ವಕೀಲರು), ಬಸವಣ್ಣ ( ತಾ .ಅಧ್ಯಕ್ಷರು ಬಿ.ಎಸ್.ಪಿ.) ಮಹೇಶ್ ಕಂದೆಗಾಲ ( ದಸಂಸ) , ಶಿವಮೂರ್ತಿ ( ಅಧ್ಯಕ್ಷರು ಹಾಲು ಡೈರಿ), ಮಹೇಶ್ ಅಣ್ಣೂರು ಕೇರಿ, ನಾಗರಾಜ್ ಮದ್ದಯ್ಯನಹುಂಡಿ( ಕವಿ), ನಾಗಯ್ಯ ಹೊನ್ನೆಗೌಡನಹಳ್ಳಿ, ಹನುಮಂತ ರಾಜ್ , ಲೋಕೇಶ್ ಸಿದ್ದಯ್ಯನಪುರ, ಸಾದಿಕ್ ಪಾಷ, ಪ್ರಕಾಶ್ ಬೆಳವಾಡಿ ( ರೈತ ಸಂಘ),ಪ್ರತಾಪ್ ರಕ್ಕಸ ,ನರಸಿಂಹ ಹೊನ್ನಶೆಟ್ಟರಹುಂಡಿ, ರವಿ ಬೆಳವಾಡಿ, ಮುಂತಾದ ಅನೇಕರು ಉಪಸ್ಥಿತರಿದ್ದರು.

Post a Comment

Previous Post Next Post