ರಾಜ್ಯದಲ್ಲಿ ಮತ್ತೆ 'ಲಾಕ್ ಡೌನ್, ಸೀಲ್ ಡೌನ್' ರೂಲ್ಸ್.?

ಬೆಂಗಳೂರು : ರಾಜ್ಯದಲ್ಲಿ 11 ಜನರಿಗೆ ಬ್ರಿಟನ್ ರೂಪಾಂತರ ವೈರಸ್ ದೃಢಪಟ್ಟಿದೆ. ಬ್ರಿಟನ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಲಿರುವಂತ ಕ್ರಮಗಳ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಾಳೆ ಸುದ್ದಿಗೋಷ್ಠಿ ನಡೆಸಿ, ಮಹತ್ವದ ಮಾಹಿತಿ ನೀಡಲಿದ್ದಾರೆ. ಅಲ್ಲದೇ ರೂಪಾಂತರ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ನಂತಹ ಟಫ್ ರೂಲ್ಸ್ ಜಾರಿಗೆ ತರಲಿದ್ದಾರಾ ಎಂಬ ಕುತೂಹಲಕ್ಕೂ ಕಾರಣವಾಗಿದೆ.

ಬೆಂಗಳೂರಿನಲ್ಲಿ 7 ಜನರಿಗೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರಿಗೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 11 ಜನರಿಗೆ ಬ್ರಿಟನ್ ರೂಪಾಂತರಿ ವೈರಸ್ ಶಾಕ್ ನೀಡಿದೆ. ಹೀಗಾಗಿ ಬಿಬಿಎಂಪಿ ವಸಂತಪುರ ಹಾಗೂ ಅಪಾರ್ಟ್ಮೆಂಟ್ ಸುತ್ತಾ ಮುತ್ತಾ ಹೈ ಅಲರ್ಟ್ ಘೋಷಿಸಿದೆ.


ಇತ್ತ ಶಿವಮೊಗ್ಗ ಜಿಲ್ಲೆಗೂ ಕೊರೋನಾ ಶಾಕ್ ನೀಡಿದ್ದು, ಒಂದೇ ಕುಟುಂಬದ ನಾಲ್ವರಿಗೆ ಕೊರೋನಾ ರೂಪಾಂತರ ವೈರಸ್ ಸೋಂಕು ತಗುಲಿದೆ. ಹೀಗಾಗಿ ಜಿಲ್ಲಾಡಳಿತ ಕೂಡ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಇದೇ ಸಂದರ್ಭದಲ್ಲಿ ನಾಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬ್ರಿಟನ್ ವೈರಸ್ ನಿಯಂತ್ರಣ ಸಂಬಂಧ ಕೈಗೊಳ್ಳಲಿರುವಂತ ಕ್ರಮಗಳ ಕುರಿತಂತೆ ಸುದ್ದಿಗೋಷ್ಠಿ ನಡೆಸಿ, ಮಹತ್ವದ ಮಾಹಿತಿ ನೀಡಲಿದ್ದಾರೆ. ರಾಜ್ಯದಲ್ಲಿ ರೂಪಾಂತರ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್, ಸೀಲ್ ಡೌನ್ ಹಾಗೂ ಕರ್ಪ್ಯೂ ನಂತರ ಟಫ್ ರೂಲ್ಸ್ ಜಾರಿಗೊಳಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ನಾಳೆಯವರೆಗೆ ಕಾದು ನೋಡಬೇಕಿದೆ.

Post a Comment

Previous Post Next Post