ಫೇಸ್ ಬುಕ್ ಮೂಲಕ ಸೆಳೆದು ಕಳ್ಳತನ ಆರೋಪಿ ಹೊಳೆನರಸೀಪುರದಲ್ಲಿ ಬಂಧನ

ಹಾಸನ: ಫೇಸ್ ಬುಕ್ ಮೂಲಕ ಸೆಳೆದು ಕಳ್ಳತನ ಮಾಡುತ್ತಿದ್ದ ಓರ್ವನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರೂ ಪೊಲೀಸ್ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ತಲೆಮರಿಸಿಕೊಂಡಿದ್ದ ಆರೋಪಿಗಳನ್ನು ಹೊಳೆನರಸೀಪುರ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಕರ‍್ಯಚರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ತಿಳಿಸಿದರು.

      ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋನ್ ಮೂಲಕ ಚಿಕ್ಕಮಗಳೂರು ಮೂಲದ ರಂಗಪ್ಪ ಎಂಬುವನ ಪರಿಚಯವಾಗಿದ್ದು ಆತ ಒಮ್ಮೊಮ್ಮೆ ಮನೆಗೆ ಬರುತ್ತಿದ್ದು, ಕೊರಳಿನಲ್ಲಿದ್ದ ೩೦ ಗ್ರಾಂ ಚಿನ್ನದ ಸರವನ್ನು ಟಿವಿ ಸ್ಟಾö್ಯಂಡ್ ಮೇಲೆ ಇಡಲಾಗಿತ್ತು. ಸಮಾರಂಭಕ್ಕೆ ಹೋಗುವ ದಿವಸ ಚಿನ್ನದ ಸರ ಹಾಕಿಕೊಳ್ಳಲು ಹೋದಾಗ ಇರಲಿಲ್ಲ. ಮನೆ ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ಮನೆಗೆ ರಂಗಪ್ಪ ಎಂಬುವನು ಬಂದು ಹೋಗಿದ ಬಗ್ಗೆ ನೆನಪಿಸಿಕೊಂಡು ಕರೆ ಮಾಡಿದರೇ ಸ್ವಿಚ್ ಆಫ್ ಆಗಿತ್ತು. ಸಲ್ಪ ತಡವಾಗಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿ ತಂಡ ರಚಿಸಿ ತನಿಖೆ ಕೈಗೊಂಡಾಗ ಮಾರ್ಚ್ ೨೨ ರಂದು ಬೆಂಗಳೂರಿನ ಚಿಕ್ಕಸಂದ್ರದ ಬಳಿ ರಂಗಪ್ಪ ೩೮ ವರ್ಷ ಎಂಬುವನು ಸಿಕ್ಕಿ ಬಿದ್ದಿದ್ದು, ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇತನಿಂದ ೧ ಲಕ್ಷದ ೨೦ ಸಾವಿರ ಮೌಲ್ಯದ ಬೆಲೆ ಬಾಳುವ ೨೦ ಗ್ರಾಂ ತೂಕದ ಚಿನ್ನದ ಸರವನು ವಶಪಡಿಸಿಕೊಳ್ಳಲಾಯಿತು. 

      ಈ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಅಧೀಕ್ಷಕರಾದ ಬಿ.ಎನ್. ನಂದಿನಿ, ರವರ ಮಾರ್ಗದರ್ಶನದಲ್ಲಿ ಹೊಳೆನರಸೀಪುರ ಡಿವೈಎಸ್ಪಿ ಲಕ್ಷೆö್ಮÃಗೌಡ, ರವರ ಉಸ್ತುವಾರಿಯಲ್ಲಿ ಹೊಳೆನರಸೀಪುರ ವೃತ್ತದ ಸಿ.ಪಿ.ಐ ಅಶೋಕ್ ಆರ್.ಪಿ, ಹೊಳೆನರಸೀಪುರ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಕುಮಾರ್, ಪಿಎಸ್‌ಐ ಎಎಸ್‌ಐ - ನಿಂಗರಾಜಪ್ಪ ಸಿಬ್ಬಂದಿಗಳಾದ ಹೆಚ್ ಸಿ -೩೩ ಮಂಜುನಾಥ್, ೨೨-೨೬೪ ಮಂಜೇಗೌಡ, ಪಿಸಿ -೧೪೪ ಸಂಗಮ್, ಪಿಸಿ- S೩೧ ಪ್ರಕಾಶ, ಪಿಸಿ -೭೧೫ ಜಗದೀಶ್, ಪಿಸಿ -೨೨ ದ್ಯಾವೇಗೌಡ ಪಿಸಿ ೨,೨೮ ವಸಂತ ಒಸಿ -೮೩ ಕುಮಾರ , ಮಪಿಸಿ -೪೧೭ ಮಂಗಳ ಚಾಲಕರುಗಳಾದ ಎಪಿಸಿ -೨೫೧ ನಾಗಪ್ಪ , ಎಪಿಸಿ -೨೬೨ ಧನರಾಜ್ ರವರು ಪ್ರಕರಣ ಪತ್ತೆಹಚ್ಚುವಲ್ಲಿ ಶ್ರಮಿಸಿದ್ದು, ಇವರ ಕರ‍್ಯವೈಕರಿಯನ್ನು ಪ್ರಶಂಶಿಸಿ ಸೂಕ್ತ ನಗದು ಬಹುಮಾನ ಘೋಷಣೆ ಮಾಡಲಾಯಿತು.

ಪೊಲೀಸರ ಮೇಲೆ ಮಾರಾಣಾಂತಿಕ ಹಲ್ಲೆ ಆರೋಪಿ ಬಂಧನ:

      ಆರೋಪಿ ಸೋಮಶೇಖರ್ ರವರಿಗೆ ಸಮನ್ಸ್ ಜಾರಿ ಮಾಡಲು ಮಾರ್ಚ್ ೨೪ ರಂದು ಬಂದಾಗ ಮಗ ನಿತಿನ್ ಇಬ್ಬರೂ ಹೇಮಾವತಿ ನದಿ ಕಡೆಯ ಸೇತುವೆ ಕಡೆ ಹೋಗಿದ್ದು, ಪೊಲೀಸರು ದಡಕ್ಕೆ ಹೋದಾಗ ಸೋಮಶೇಖರ್ ಗಲಾಟೆ ಮಾಡಿ ಅವಾಚ್ಯ ಪದಗಳಿಂದ ನಿಂಧಿಸಿ, ಸಮನ್ಸ್ ಎಂದು ಹೇಳಿಕೊಂಡು ಪದೆ ಪದೆ ನಮ್ಮ ಮನೆಯ ಹತ್ತಿರಕ್ಕೆ ಬಂದು ನನ್ನ ಮರ್ಯಾದೆ ಹಾಳು ಮಾಡುತ್ತಿದ್ದಯಾ ಎಂದು ತಂದೆ ಮಗ ಇಬ್ಬರೂ ಕೆಳಕ್ಕೆ ಬೀಳಿಸಿ ಅಲ್ಲೆ ಬಿದ್ದಿದ್ದ ಕಲ್ಲನ್ನು ಇತನ ಮೇಲೆ ಎಸೆದು ಗಾಯಳ ಮಾಡಲಾಗಿತ್ತು. ಚಿಕ್ಕನಹಳ್ಳಿ ಗ್ರಾಮದ ಸುನೀಲ್ ಮತ್ತು ಕೆಕೆ ಹೊಸೂರು ಗ್ರಾಮದ ಸ್ವಾಮಿ ರವರು ಬರುತ್ತಿದ್ದನ್ನು ನೋಡಿ ಸೋಮಶೇಖರ ಮತ್ತು ನಿತಿನ್ ಇಬ್ಬರೂ ಸೇರಿ ಪಿರಾದಿ ಜೇಬಿನಲ್ಲಿದ್ದ ಮೊಬೈಲ್ ಫೋನನ್ನು ಕಿತ್ತುಕೊಂಡು ಪಿರಾದಿಯವರನ್ನು ಬಿಟ್ಟು ಓಡಿ ಹೋಗಿದ್ದರು. ಈ ಆರೋಪಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಹೇಳಿಕೆ ಮೇರೆಗೆ ಪೊಲೀಸ್ ಠಾಣಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು. ಆರೋಪಿಗಳನ್ನು ಪತ್ತೆ ಹಚ್ಚಲು ತಂಡವನ್ನು ರಚಿಸಿ ತನಿಖೆಯನ್ನು ಮುಂದುವರೆಸಿದ್ದು, ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಹೇಮಾವತಿ ನದಿ ದಡ ಹಿರೇಬೆಳಗುಲಿ ಗ್ರಾಮದ ಹತ್ತಿರ ಪತ್ತೆ ಮಾಡಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

      ಪ್ರಕರಣ ಪತ್ತೆ ಮಾಡಿದ ಹೊಳೆನರಸೀಪುರ ಡಿವೈಎಸ್ಪಿ ಲಕ್ಷೆö್ಮÃಗೌಡ ಉಸ್ತುವಾರಿಯಲ್ಲಿ ನಗರ ಪೊಲೀಸ್ ಠಣೆ ಪಿ.ಎಸ್.ಐ. ಅಶೋಕ್, ಪಿಎಸ್‌ಐ ಎಎಸ್‌ಐ - ನಿಂಗರಾಜಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳ ಕರ‍್ಯವೈಖರಿಗೆ ಪ್ರಶಂಸಿ ಬಹುಮಾನ ಘೋಷಣೆ ಮಾಡಿದರು.


Post a Comment

Previous Post Next Post