ಸುಂಡೆಕೆರೆ ಧರ್ಮಗುರುಗಳ ಮೇಲೆ ಹಲ್ಲೆಗೆ ಜಿಲ್ಲಾ ವಕ್ಸ್ ಸಮಿತಿ ಖಂಡನೆ

ಹಾಸನ: ಸಕಲೇಶಪುರ ತಾಲ್ಲೂಕು, ಚರಂಡಹಳ್ಳಿ (ಸುಂಡೆಕೆರೆ) ಗ್ರಾಮದ ಮುಹಿಯುದ್ದೀನ್ ಜುಮ್ಮಾ ಮಸೀದಿ, ಧರ್ಮ ಗುರುಗಳ ಮೇಲೆ ನಾಲ್ವರು ಕಿಡಿಗೇಡಿಗಳು ಹಲ್ಲೆಯನ್ನು ಹಾಸನ ಜಿಲ್ಲಾ ವಕ್ಸ್ ಸಲಹಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ತೀರ್ವವಾಗಿ ಖಂಡಿಸಿದ್ದಾರೆ.

     ಮಾರ್ಚ್ ೨೧ ರಂದು ದುಷ್ಕರ್ಮಿಗಳು ಮರಕಸ್ತçಗಳಿಂದ ಹಲ್ಲೆ ನಡೆಸಿರುವ ಕೃತ್ಯವು

ಸಮಾಜದಲ್ಲಿ ಶಾಂತಿ ಕದಡುವ ಸಂಚಾಗಿದೆ ಎಂದು ಜಿಲ್ಲಾ ಉಪಾಧ್ಯರಾದ ಫೈರೋಜ್ ಪಾಷಾ ರವರು ಹೇಳಿದ್ದಾರೆ. ಪ್ರಾರ್ಥನೆಗಾಗಿ ತೆರಳುತ್ತಿದ್ದ  ನಾಸೀರ್ ಧಾರಿಮಿ ರವರನ್ನು ಅಲ್ಲೊ ಕಾರ್‌ನಲ್ಲಿ ಹೊಂಚು ಹಾಕಿ ಕುಳಿತಿದ್ದ ನಾಲ್ಕು ಮಂದಿ ದಾರಿ ಮಧ್ಯೆ ತಡೆದು ಜಾತಿ ಧರ್ಮ, ವೇಷ ಭೂಷಣವನ್ನು ನಿಂದಿಸುತ್ತ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಕಿಡಿಗೇಡಿಗಳು ದುರುದ್ದೇಶ ಪೂರ್ವಕವಾಗಿ ಪೂರ್ವಯೋಜಿತ ದಾಳಿ ನಡೆಸಿ ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಗಲಭೆ ಹರಡಿ ಶಾಂತಿಯನ್ನು ಕದಡುವ ಕೃತ್ಯಕ್ಕೆ ಕೈ ಹಾಗಿದ್ದಾರೆ. ದುಶೃತ್ಯ ಎಸಗಿದವರ ಮೇಲೆ ಈಗಾಗಲೇ ಕಾನೂನು ಮುಕದ್ದಮೆ ದಾಖಲಾಗಿದ್ದು ಇದುವರೆವಿಗೂ ಅವರನ್ನು ಬಂಧಿಸುವುದರಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.

    ಇದು ಸಮಾಜದ ಶಾಂತಿಯನ್ನು ಕದಡುವ ವಿಷಯವಾಗಿದ್ದು ಆದರೂ ಮುಸ್ಲಿಂ ಸಮಾಜ ಕಾನೂನು ಮತ್ತು ಮೊಲೀಸ್ ಇಲಾಖೆಯೊಂದಿಗೆ ನಂಬಿಕೆಯನ್ನಿಟ್ಟು ಶಾಂತಿಯನ್ನು ಕಪಾಡಿಕೊಂಡಿರುತ್ತಾರೆ. ಹೀಗಾಗಿ ದುಷ್ಕರ್ಮಿಗಳನ್ನು ಆದಷ್ಟು ಬೇಗ ಬಂಧಿಸಿ ಸಮಾಜದಲ್ಲಿ ಶಾಂತಿ ಕದಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಎಸ್ ಪಿ ರವರಿಗೆ ಮನವಿ ಸಲ್ಲಿಸಿದರು. 

       ಈ ಸಂಧರ್ಭದಲ್ಲಿ ಜಿಲ್ಲಾ ವಕ್ಸ್ ಮಂಡಳಿಯ ಉಪಧ್ಯಕ್ಷರಾದ ಅಕ್ಕಿಲ್, 'ಸದಸ್ಯರುಗಳಾದ ಹಸೇನಾರ್ ಅನೆಮಹಲ್, ಕಬೀರ್ ಆಲೂರು, ಮೊಹಮ್ಮದ್ ಫರೂಖ್ ಬೇಲೂರು, ಅನ್ವರ್  ಚನ್ನರಾಯಪಟ್ಟಣ, ಸೈಯದ್ ಶಭ್ಬಿರ್ ಹಾಸನ, ಆರಿಫ್ ಜಾನ್ ಅರಸೀಕೆರೆ, ಸಾದಿಖ್ ಅರಕಲಗೂಡು  ಹಾಜರಿದ್ದರು.

Post a Comment

Previous Post Next Post