ಹಾಸನದ ಸ್ಫಂದನ ಸಿರಿ ವೇದಿಕೆ ಸಹೃದಯಸಂಗಮ ಬಳಗದ ಬದುಕು ಬರಹದ ೨೬ನೇ ವಾರದ ಸಾಹಿತ್ಯ ಕಾರ್ಯಕ್ರಮ ಜಿಲ್ಲಾ ಕಸಾಪ ಸಹಕಾರದಲ್ಲಿ ಪರಿಷತ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಾಟಕ ನಿರ್ದೇಶಕರು ರಂಗಪ್ಪದಾಸ್, ಕಲಾವಿದರಾದ ಯರೇಹಳ್ಳಿ ಮಂಜೇಗೌಡ, ಗಾಡೇನಹಳ್ಳಿ ಕೃಷ್ಣೇಗೌಡ, ಯಲಗುಂದ ಶಾಂತಕುಮಾರ್, ಎಂ.ಟಿ.ತಿಮ್ಮೇಗೌಡರು ರಂಗಗೀತೆಗಳನ್ನು ಹಾಡಿ ರಂಜಿಸಿದರು. ಕವಿಗಳಾದ ಗೊರೂರು ಅನಂತರಾಜು, ರೇಷ್ಮಾಶೆಟ್ಟಿಗೊರೂರು, ಗಿರಿಜಾ ನಿರ್ವಾಣಿ ಕವಿತೆ ವಾಚಿಸಿ ಸುಧಾ ಬಾಣಾವಾರ, ಸಾತುಗೌಡ ಮಡಿಕೇರಿ, ಆಶಾ ಶಿವಮೊಗ್ಗ, ಮಾಲಾ ಚೆಲುವನಹಳ್ಳಿ, ಶಫಿತಾ ಬೇಗಂ, ಸಾವಿತ್ರಮ್ಮಓಂಕಾರ್, ಎಂ.ಸೀತಮ್ಮ ವಿವೇಕ್, ತನುಜ ಪೊಲೀಸ್, ಅನುಸತೀಶ್, ಪ್ರಕಾಶ್‌ಕಡೂರು, ಜಯಮಂಗಳ ಜವಳಿ ಬೆಂಗಳೂರು ಇವರು ಗೂಗಲ್‌ಮೀಟ್‌ನಲ್ಲಿ ಕವಿತೆ ವಾಚಿಸಿದರು. ಯೋಗೇಂದ್ರದುದ್ದ, ಕಲಾವತಿ ಮಧುಸೂಧನ್, ಉಮಾ ವಿಶ್ವನಾಥ್, ಸೌಮ್ಯ ಪ್ರಸಾದ್ ಭಕ್ತಿಗೀತೆ ಹಾಡಿದರು. ಸುನಂದ ಕೃಷ್ಣ ಕಗ್ಗದಗಾಯನ ಮಾಡಿದರು. ಕ್ಯಾಪ್ಟನ್ ಜಯರಾಂ ಪುಟ್ಟೇಗೌಡ, ಪವನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Tags
ಹಾಸನ
