ಡಾ. ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಪರಿವರ್ತನಾ ತಿಂಗಳಾಗಿ ಆಚರಣೆ.

ಹಾಸನ ಏ.೧: ಡಾ. ಬಿ.ಆರ್ ಅಂಬೇಡ್ಕರ್ ಅವರ ೧೩೦ ನೇ ಜನ್ಮದಿನಾಚರಣೆಯನ್ನು ಏ. ೧೪ ರಂದು  ಆಚರಿಸಲಾಗುತ್ತಿದ್ದು,  ಈ ಸಂಬAಧ ನಿರ್ದಿಷ್ಟವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಅಭಿವೃದ್ಧಿಗೆ ಸರ್ಕಾರದ ವಿವಿಧ ಇಲಾಖೆಗಳ ಮುಖಾಂತರ ಅನುಷ್ಠಾನ ಮಾಡುತ್ತಿರುವ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ಮಾ. ೧೪ ರಿಂದ  ಏ. ೧೪ ರವರೆಗೆ ಪರಿವರ್ತನಾ ತಿಂಗಳು ಎಂಬುದಾಗಿ  ಆಚರಿಸಲಾಗುತ್ತಿದೆ.



 ಅದರ ಅಂಗವಾಗಿ ಇಲಾಖಾವಾರು ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆಗಳ  ವಿವರ ಇಂತಿದೆ:

 ಸಮಾಜ ಕಲ್ಯಾಣ ಇಲಾಖೆ:  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾರ್ಥಿನಿಲಯಗಳಲ್ಲಿ ಊಟ, ವಸತಿ ಸೌಲಭ್ಯ ನೀಡಲಾಗುವುದು, ಕಾನೂನು ಪದವೀಧರರಿಗೆ ಪ್ರೋತ್ಸಾಹಧನ,  ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು. ದೌರ್ಜನ್ಯದ ಸಂತ್ರಸ್ತರಿಗೆ ಪರಿಹಾರ ಧನ, ಅಂತರ್ ಜಾತಿ  ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ, ಎಸ್. ಎಸ್. ಎಲ್. ಸಿ  ಕಾಲೇಜು ಹಂತದಲ್ಲಿ ಪ್ರಥಮ ಪ್ರಯತ್ನದಲ್ಲಿ  ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರು ಮಾಡಲಾಗುವುದು. 

 ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಧನ ಸಹಾಯ,  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ  ಪ್ರತಿಷ್ಠಿತ ಶಾಲೆಗಳಲ್ಲಿ ದಾಖಲಿಸುವುದು. 

ಕೆ. ಎ. ಎಸ್, ಐ. ಎ. ಎಸ್, ಐ. ಪಿ. ಸ್   ಪರೀಕ್ಷೆ ತೆಗೆದುಕೊಳ್ಳುವ ನಿರುದ್ಯೋಗಿ ಅಭ್ಯರ್ಥಿಗಳಿಗೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ  ಪರೀಕ್ಷಾ ಪೂರ್ವ ತರಬೇತಿ ಕೇಂದ್ರ,  ಬೆಂಗಳೂರುರವರಿAದ  ಉಚಿತವಾಗಿ ತರಬೇತಿ ನೀಡಲಾಗುವುದು. 

 ಕೃಷಿ ಇಲಾಖೆ:  ಕೃಷಿ ಪರಿಕರಗಳು,ಉಪಕರಣಗಳು, ಎರೆಹುಳು, ಕೃಷಿ ಯಂತ್ರೋಪಕರಣಗಳು,  ಸಂಸ್ಕರಣಾ  ಘಟಕ, ಟಾರ್ಪಲಿನ್, ಬಿತ್ತನೆ ಬೀಜ ವಿತರಣೆ, ತುಂತುರು ಮತ್ತು ಹನಿ ನೀರಾವರಿ, ಎರೆಹುಳು, ಕಾಂಪೋಸ್ಟ್, ಬಯೋಡೈಜೆಸ್ಟರ್, ಕೃಷಿಹೊಂಡ, ಪಾಲಿಹೌಸ್, ಕ್ಷೇತ್ರಬದು, ಪಂಪ್ ಸೆಟ್,    ಸ್ಪಿçಂಕ್ಲರ್ ವಿತರಣೆ ಮಾಡಲಾಗುವುದು.

 ತೋಟಗಾರಿಕೆ ಇಲಾಖೆ:  ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ, ಸಮಗ್ರ ತೋಟಗಾರಿಕಾ  ಅಭಿವೃದ್ಧಿ ಯೋಜನೆ, ಹನಿ ನೀರಾವರಿಗೆ ಸಹಾಯಧನ,   ಎಣ್ಣೆ ತಾಳೆ ವ್ಯವಸಾಯ,  ಜೇನು  ಸಾಕಾಣೆ  ರೈತರಿಗೆ  ಸಹಾಯ ಹಾಗೂ ತರಬೇತಿ, ರಾಷ್ಟಿçÃಯ ತೋಟಗಾರಿಕೆ ಮಿಷನ್, ರಾಷ್ಟಿçÃಯ ಕೃಷಿ ವಿಕಾಸ ಯೋಜನೆ, ಕೃಷಿ ಭಾಗ್ಯ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗುವುದು. 

 ರೇಷ್ಮೆ ಇಲಾಖೆ:  ಹೊಸ ಹಿಪ್ಪುನೇರಳೆ ನಾಟಿ ಹಾಗೂ ರೇಷ್ಮೆಹುಳು ಸಾಕುವ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು.

 ಆರೋಗ್ಯ ಇಲಾಖೆ:  ಜನನಿ ಸುರಕ್ಷಾ ಯೋಜನೆ, ಕುಟುಂಬ ಕಲ್ಯಾಣ ಯೋಜನೆಯಡಿ ಸವಲತ್ತುಗಳನ್ನು ಒದಗಿಸಲಾಗುವುದು.

 ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ:  ಸ್ತಿçà ಶಕ್ತಿ, ಉದ್ಯೋಗಿನಿ ಯೋಜನೆ,  ಅಪೌಷ್ಠಿಕ ಮಕ್ಕಳ ವೈದ್ಯಕೀಯ ವೆಚ್ಚ, ಸಮೃದ್ಧಿ ಯೋಜನೆ, ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದ ಮೂಲಕ ಸೌಲಭ್ಯ ನೀಡಲಾಗುವುದು.

 ಭಾರಿ ಮತ್ತು  ಮಧ್ಯಮ ನೀರಾವರಿ ಇಲಾಖೆ:  ಕೊಳವೆ ಬಾವಿ ನಿರ್ಮಿಸಿ ವಿದ್ಯುತ್ ಸಂಪರ್ಕ ಒದಗಿಸುವುದು. ಕಾಲೋನಿಗಳ ರಸ್ತೆಗಳ ನಿರ್ಮಾಣ, ಕಾಲುವೆ ಅಭಿವೃದ್ಧಿ ಸಮುದಾಯ ಭವನ ನಿರ್ಮಿಸಲಾಗುವುದು.

 ಸಣ್ಣ ನೀರಾವರಿ:  ಕೊಳವೆ ಬಾವಿ ಕೊರೆಯುವುದು, ಏತನೀರಾವರಿ ಯೋಜನೆ, ಚೆಕ್ ಡ್ಯಾಮ್ ನಿರ್ಮಾಣ

 ಲೋಕೋಪಯೋಗಿ ಇಲಾಖೆ: ಪ. ಜಾತಿ, ಪ. ವರ್ಗದ  ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು.

 ಆಹಾರ ಮತ್ತು ನಾಗರೀಕ  ಸರಬರಾಜು:  ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿ ವಿತರಿಸಲಾಗುವುದು.

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ:  ಗ್ರಾಮೀಣ ನೀರು ಸರಬರಾಜು, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ, ಕಾಲೋನಿ ರಸ್ತೆಗಳ ನಿರ್ಮಾಣ, ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ್ ಅಭಿಯಾನ, ಸುತ್ತುನಿಧಿ

 ಕೈಮಗ್ಗ ಮತ್ತು ಜವಳಿ ಇಲಾಖೆ:  ಕೈಮಗ್ಗ ಆಧುನೀಕರಣಗೊಳಿಸುವುದು.

 ಇಂಧನ ಇಲಾಖೆ:   ನೀರಾವರಿ ಪಂಪ್ ಸೆಟ್ ಗಳ ವಿದ್ಯುದೀಕರಣ, ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು.

ಅರಣ್ಯ ಇಲಾಖೆ :  ಅರಣ್ಯದ ಅಂಚಿನಲ್ಲಿ ವಾಸವಿರುವವರಿಗೆ  ಸಿಲಿಂಡರ್ ರೀಫಿಲ್ಲಿಂಗ್ ಸೌಲಭ್ಯ ಕಲ್ಪಿಸಲಾಗುವುದು.

 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ:  ಶುಲ್ಕ ಮರುಪಾವತಿ, ಅಕ್ಷರ ದಾಸೋಹ

 ವೈದ್ಯಕೀಯ ಶಿಕ್ಷಣ: ವಿದ್ಯಾರ್ಥಿಗಳಿಗೆ ಪುಸ್ತಕಗಳು ಮತ್ತು ಇತರೆ ವೈದ್ಯಕೀಯ ಪರಿಕರ ವಿತರಿಸುವುದು. ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವುದು. ಕಟ್ಟಡ ನಿರ್ವಹಣೆ, ಮರುವಿನ್ಯಾಸ ಕಾಮಗಾರಿಗೊಳಿಸುವುದು

 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:  ವಿದ್ಯಾರ್ಥಿ ನಿಲಯಗಳ ನಿರ್ವಹಣೆ

 ಮೀನುಗಾರಿಕೆ ಇಲಾಖೆ:  ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ನೀಡಲಾಗುವುದು.

 ಗ್ರಾಮೀಣ ಕೈಗಾರಿಕಾ ಇಲಾಖೆ:  ಸುಧಾರಿತ ಉಪಕರಣಗಳ ವಿತರಣೆ ಮಾಡಲಾಗುವುದು.

 ಆಯುಷ್ ಇಲಾಖೆ:  ಔಷಧಯುಕ್ತ  ಸಸ್ಯವನ ಅಭಿವೃದ್ಧಿ, ವಸತಿನಿಲಯಗಳ ಮೇಲ್ವಿಚಾರಕರಿಗೆ ತರಬೇತಿ, ಆಯುಷ್ ಸೇವಾ ಗ್ರಾಮ 

 ಸಹಕಾರ ಇಲಾಖೆ:   ಸಂಘಗಳಲ್ಲಿ ಸದಸ್ಯರಾಗಿ ನೊಂದಾಯಿಸಲು ಸಹಾಯ ಧನ, ಆಸ್ತಿ ಸೃಷ್ಟಿಗಾಗಿ ಪಿಸಿಎಆರ್ ಡಿ  ಬ್ಯಾಂಕ್ ಗಳಲ್ಲಿ ಪ. ಜಾತಿ  ಸದಸ್ಯರಿಗೆ ಮಂಜೂರು ಮಾಡಿದ ಸಾಲಗಳ ಮೊತ್ತದ ಮೇಲೆ ಶೇಕಡ ೬೦ ರಷ್ಟು ಸಹಾಯಧನ ನೀಡಲಾಗುವುದು.

 ಡಾ. ಬಿ.ಆರ್. ಅಂಬೇಡ್ಕರ್ ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮ :   ಐ. ಎಸ್. ಬಿ ಯೋಜನೆ,  ವೈಯಕ್ತಿಕ ಕೊಳವೆ ಬಾವಿ,  ಮೈಕ್ರೋ ಕ್ರೆಡಿಟ್ ಕಿರುಸಾಲ ಯೋಜನೆಯಡಿ ಸೌಲಭ್ಯ ಒದಗಿಸಲಾಗುವುದು.

 ಕನ್ನಡ ಮತ್ತು ಸಂಸ್ಕöÈತಿ ಇಲಾಖೆ:  ಪ್ರಾಯೋಜಿತ ಕಾರ್ಯಕ್ರಮಗಳು,  ಜನಪರ ಉತ್ಸವ,  ಗುರು ಶಿಷ್ಯ ಪರಂಪರೆ, ಅಂಬೇಡ್ಕರ್ ಓದು, ಗಿರಿಜನ ಉತ್ಸವ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ನೀಡಲಾಗುವುದು.

 ಪಶುಪಾಲನೆ ಇಲಾಖೆ:  ಹಸು ಮತ್ತು ಎಮ್ಮೆ ಘಟಕ ಸ್ಥಾಪನೆಗೆ ಸಹಾಯಧನ

 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ:  ಗುಡಿ ಮತ್ತು    ಅತಿ ಸೂಕ್ಷ÷್ಮ ಕೈಗಾರಿಕಾ ಘಟಕಗಳು, ಕುಶಲಕರ್ಮಿಗಳಿಗೆ ಬ್ಯಾಂಕಿನ ಸಾಲದ ಮೇಲೆ ಶೇಕಡ ೬೦ ರಷ್ಟು ಸಹಾಯಧನ ನೀಡಲಾಗುವುದು.

 ಕಾರ್ಮಿಕ ಇಲಾಖೆ:  ಬಾಲಕಾರ್ಮಿಕ ಪುನರ್ವಸತಿ ಯೋಜನೆ

 ಪ್ರವಾಸೋದ್ಯಮ:   ಪ್ರವಾಸಿ ಟ್ಯಾಕ್ಸಿಗಳ ವಿತರಣೆ ಮಾಡಲಾಗುವುದು.


Post a Comment

Previous Post Next Post