ಕೋವಿಡ್ ಕೇಂದ್ರಕ್ಕೆ ಮುಸ್ಲಿಂ ಹಾಸ್ಟೆಲ್ ನೀಡಲು ಮುಂದಾದ ಆಡಳಿತ ಸಮಿತಿ

ಹಾಸನ: ಕೋವಿಡ್ ೧೯ ಕೇರ್ ಸಂಟರ್ ಆಗಿ ಕಾರ್ಯನಿರ್ವಹಿಸಲು ಹಾಸನದ ಮುಸ್ಲಿಂ ಹಾಸ್ಟೆಲ್ ಕಟ್ಟಡ ನೀಡಲು ಆಡಳಿತ ಸಂಸ್ಥೆ ಮುಂದಾಗಿದೆ.



   ಮುಸ್ಲಿಂ ಹಾಸ್ಟೆಲ್ ಉಪಾಧ್ಯಕ್ಷ ಡಾ. ಫರ್ಹಾನ್ ಹುಸೇನ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕೊರೋನಾ ಮಹಾಮಾರಿ ಎಂಬ ರೋಗ ಇರುವುದರಿಂದ ನಗರದ ಕೆ.ಆರ್.ಪುರಂನಲ್ಲಿರುವ ಮುಸ್ಲಿಂ ಹಾಸ್ಟೆಲನ್ನು ರೋಗಿಗಳಿಗಾಗಿ ಕೋವಿಡ್ ಕೇಂದ್ರ ಸ್ಥಾಪಿಸಲು ಅವಕಾಶ ಕೊಡಲಾಗುತ್ತಿದೆ. ಕಟ್ಟಡದಲ್ಲಿ ೫೦ ಕೊಟ್ಟಡಿಗಳಿವೆ. ಹಾಲ್ ಗಳಿವೆ ಉತ್ತಮ ಶೌಚಾಲಯಗಳಿವೆ. ಸ್ನಾನದ ಗೃಹಗಳಿವೆ. ಅಧುನಿಕ ಅಡುಗೆ ಮನೆಗಳಿವೆ. ನೀರಿನ ವ್ಯವಸ್ಥೆ ಇದೆ ಎಂದರು. ಸರಕಾರದ ಮಾರ್ಗಸೊಚಿಯೆಂತೆ ಕಾರ್ಯನಿರ್ವಹಿಸಲು ಜಿಲ್ಲಾಡಳಿತದ ಜೊತೆ ಸಂಪರ್ಕಿಸಲು ನ್ಯಾಷನಲ್ ಹ್ಯೊಮನ್ ರೈಟ್ಸ ಡಬ್ಲೊಟಿ (ರಿ) ಸಂಸ್ಥೆಯ ಅಧ್ಯಕ್ಷರಾದ ಇಮ್ರಾನ್ ಖಾನ್ ರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಹಾಸ್ಟಲ್ ಕಾರ್ಯದರ್ಶಿ ಸುಫಿಯಾನ್, ಸದಸ್ಯರದ ಇಮಾದ್ ಜಮಿಲ್ ಷರೀಫ್, ರಹಮಾನ್ ಖಾನ್, ವಕ್ಪ ಮಂಡಳಿಯ ಮಾಜಿ ಅಧ್ಯಕ್ಷರಾದ ಪರ್ವಿಜ್ ಪಾಷ ಹಾಗೂ ನ್ಯಾಷನಲ್ ಹ್ಯೊಮನ್ ರೈಟ್ಸ ಡಬ್ಲೊಟಿ ಸಂಸ್ಥೆಯ ಅಧ್ಯಕ್ಷರಾದ ಇಮ್ರಾನ್ ಖಾನ್ ಇತರರು ಉಪಸ್ಥಿತರಿದ್ದರು.


Post a Comment

Previous Post Next Post