ಕೊಣನೂರು : ರಾಮನಾಥಪುರ ಹೋಬಳಿಯ ಹಂಪಾಪುರ ಗ್ರಾಮದಲ್ಲಿ ಮಾ. ೨೦ ರಂದು ನಡೆದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಹಂಪಾಪುರ ಗ್ರಾಮಸ್ಥರು ಅತೀ ಹೆಚ್ಚು ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದರ ಮೇರೆ ಶಾಸಕರಾದ ಎ.ಟಿ.ರಾಮಸ್ವಾಮಿ, ಜಿಲ್ಲಾಧಿಕಾರಿಗಳಾದ ಗಿರೀಶ್, ಉಪವಿಭಾಗಾಧಿಕಾರಿಗಳಾದ ಗಿರೀಶ್ ನಂದನ್ ಹಾಗೂ ತಹಶೀಲ್ದಾರರಾದ ವೈ.ಎಂ.ರೇಣುಕುಮಾರ್ ರವರು ಅತೀತುರ್ತಾಗಿ ಗ್ರಾಮಸ್ಥರಿಗೆ ನಿವೇಶನಕ್ಕೆ ಜಾಗ ಗುರುತಿಸುವಂತೆ ಸೂಚಿಸಿದ ಹಿನ್ನೆಲೆ ಹಂಪಾಪುರ ಗ್ರಾಮದಲ್ಲಿ ಸ.ನಂ.೧೦೭ರ ಸರ್ಕಾರಿ ಖರಾಬು ಜಾಗ ವಿಸ್ತೀರ್ಣ ೭-೦೯ ಪ್ರದೇಶವನ್ನು ರಾಜಸ್ವನಿರೀಕ್ಷಕರಾದ ಸಿ.ಸ್ವಾಮಿ ರವರ ನೇತೃತ್ವದಲ್ಲಿ ಗುರುತಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ರಾಜಸ್ವನಿರೀಕ್ಷಕ ಸಿ.ಸ್ವಾಮಿ ಶಾಸಕರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರ ಸೂಚನೆಯಂತೆ ಸ್ಥಳ ಪರಿಶೀಲಿಸಲಾಗಿದ್ದು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಸಮಕ್ಷಮ ಚರ್ಚಿಸಿ ತಾಲೂಕು ಮೋಜಿಣಿದಾರರಿಂದ ಅಳತೆ ಕಾರ್ಯ ಮಾಡಿಸಿ ಅತೀ ತುರ್ತಾಗಿ ಕಡತ ತಯಾರಿಸಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶಕ್ಕಾಗಿ ನೀಡಲಾಗುವುದು. ಆದೇಶ ಬಂದ ನಂತರ ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ತಾಲೂಕು ಆಡಳಿತ ವತಿಯಿಂದ ಅಭಿವೃಧ್ದಿ ಪಡಿಸಿ ನಿವೇಶನ ನೀಡಲು ಗ್ರಾಮಪಂಚಾಯಿತಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಪಂಚಾಯಿತಿ ಅಭಿವೃಧ್ದಿ ಅಧಿಕಾರಿÀ ಎಂ.ಕೆ. ಪ್ರಭು, ಗ್ರಾಮಲೆಕ್ಕಾಧಿಕಾರಿ ಕೆ.ಪಿ.ಮಧುಕುಮಾರ್ .ಗ್ರಾಮಸಹಾಯಕ ಜಿ.ಜೆ.ರಾಜಯ್ಯ ಹಾಜರಿದ್ದರು.