ಹಾಸನ : ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ನೂತನ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ಕೇಂದ್ರ ಸಮಿತಿಯ ಚುನಾವಣೆ ನಂತರ ಉದ್ಘಾಟನಾ ಸಮಾರಂಭವನ್ನು ನ್ಯಾಯಯುತವಾಗಿ ನಡೆಸಲು ಸಹಕರಿಸುವಂತೆ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಕರ‍್ಯಕಾರಿ ಸಮಿತಿ ಸದಸ್ಯ ಚಂದ್ರಶೇಖರಯ್ಯ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಹಾಸನ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಅಪೂರ್ಣಗೊಂಡಿರುವ ಕಟ್ಟಡವನ್ನು ಚುನಾವಣಾ ಗಿಮಿಕ್‌ಗಾಗಿ ಅತುರ ಆತುರವಾಗಿ ಉದ್ಘಾಟನಾ ಮಾಡಲು ಹೊರಟಿರುವುದಕ್ಕೆ ಹಲವಾರು ಆಕ್ಷೇಪಣೆಗಳು ಕೇಳಿ ಬಂದಿದೆ. ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲು ಆಗಮಿಸುತ್ತಿರುವ ಕೇಂದ್ರ ಸಮಿತಿಯ ಅಧಿಕಾರಾವಧಿಯು ೨೦೨೦ ಡಿಸೆಂಬರ್ ೧೦ಕ್ಕೆ ಮುಕ್ತಾಯಗೊಂಡಿರುತ್ತದೆ. ಮುಂದಿನ ಚುನಾವಣೆ ನಡೆಯುವವರೆಗೆ ಪ್ರಭಾರವಾಗಿ ಅಧಿಕಾರವನ್ನು ನಡೆಸಲು ಸಂಘಗಳ ನೋಂದಣಾಧಿಕಾರಿಗಳು ಆದೇಶಿಸಿದ್ದಾರೆ ಎಂದರು. ಜಿಲ್ಲಾ ಸಮಿತಿಯು ಚಾಲ್ತಿಯಲ್ಲಿದ್ದು ಸ್ವಂತ ಕಛೇರಿಯನ್ನು ಹೊಂದಿದ್ದು, ಅಧ್ಯಕ್ಷರು ಸೇರಿದಂತೆ ಕಾರ್ಯಕಾರಿ ಮಂಡಳಿಯು ನ್ಯಾಯಯುತವಾಗಿ ಆಡಳಿತವನ್ನು ನಡೆಸುತ್ತಿದ್ದು, ಈ ಆಡಳಿತ ಮಂಡಳಿಯನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಿಲ್ಲ. ಕೇಂದ್ರ ಸಮಿತಿಯ ಅಧಿಕಾರವಧಿಯು ಮುಕ್ತಾಯ ಗೊಂಡಿರುವುದರಿAದ ಈಗ ಇರುವ ಪದಾಧಿಕಾರಿಗಳು ಮುಂದಿನ ಚುನಾವಣೆ ಮಾಡುವವರೆಗೆ ಸಂಘದ ಹಿತದೃಷ್ಟಿಯಿಂದ ಕೇವಲ ಸಂಘದ ಸದಸ್ಯರ ಮರಣ ಪರಿಹಾರ ಮತ್ತು ಕಛೇರಿಯನ್ನು ನಿರ್ವಹಿಸಲು ಸಿಬ್ಬಂದಿ ವೆಚ್ಚದ ಹಣಕಾಸು ವ್ಯವಸ್ಥೆಯನ್ನು ಮಾಡಲು ಅರ್ಹರಾಗಿರುತ್ತಾರೆಂದು ಸಂಘದ ನೋಂದಣಾಧಿಕಾರಿಗಳು ಪತ್ರ ಮುಖೇನ ತಿಳಿಸಿದ್ದಾರೆ ಎಂದ ಅವರು, ಇಷ್ಟೆಲ್ಲಾ ನಿರ್ದೆಶನಗಳು ಇದ್ದರೂ ಸಹ ಕೇಂದ್ರ ಸಮಿತಿಯವರು ನ್ಯಾಯಯುತವಾಗಿ ಆಡಳಿತವನ್ನು ನಡೆಸಿಕೊಂಡು ಹೋಗುತ್ತಿರುವ ಹಾಸನ ಜಿಲ್ಲಾ ಸಮಿತಿಗೆ ಬೆಂಗಳೂರು ಸಿವಿಲ್ ನ್ಯಾಯಾಲಯದಿಂದ ವಿಜಯನಗರದ ಕಟ್ಟಡವನ್ನು ಉದ್ಘಾಟನೆ ಮಾಡಲು ಜಿಲ್ಲಾ ಸಮಿತಿಯವರು ತಡೆಯಾಜ್ಞೆ ತರಬಹುದೆಂಬ ಭಯದಿಂದ ಕೇವಿಯಟ್ ತಂದು ನಮ್ಮನ್ನು ಈ ಸಮಾರಂಭದಲ್ಲಿ ಪರಿಗಣನೆಗೆ ತೆಗೆದುಕೊಂಡಿರುವುದಿಲ್ಲ ಎಂದು ದೂರಿದರು.
ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಬೆಂಗಳೂರು ಇವರಿಗೆ ಮನವಿ ಸಲ್ಲಿಸಿದಾಗ ನೋಂದಣಾಧಿಕಾರಿಗಳು ಸಹ ಕಾರ್ಯಕ್ರಮವನ್ನು ನಡೆಸಬಾರದೆಂದು ಕೇಂದ್ರ ಸಮಿತಿಗೆ ೨೦೨೧ ಮೇ ೨೩ ರಂದು ಚುನಾವಣೆ ನಡೆಸಲು ರಾಜ್ಯ ಉಚ್ಚ ನ್ಯಾಯಾಲಯ ಬೆಂಗಳೂರು ಇವರ ಆದೇಶದಂತೆ ದಿನಾಂಕ ನಿಗಧಿಯಾಗಿರುವುದರಿಂದ ಈ ಹಂತದಲ್ಲಿ ಚುನಾವಣೆ ಮುಗಿಯುವವರಿಗೆ ಸನೆ ಜಿಲ್ಲಾ ಕಟ್ಟಡ ಉದ್ಘಾಟನೆಯನ್ನು ಮುಂದೂಡಲು ಸೂಚಿಸಿದೆ ಎಂದರು. ಕೊರೋನಾ ಎರಡನೇ ಆಲೆ ಪ್ರಾರಂಭವಾಗಿ ಆಶೀ ಶೀಘ್ರವಾಗಿ ಎಲ್ಲಡೆ ಬಹಳ ಉಲ್ಬಣಹೊಂದುತ್ತಿರುವುದರಿAದ ಸಮಾರಂಭಗಳನ್ನು ನಡೆಸಬಾರದೆಂದು ಕಟ್ಟೆಚ್ಚರ ನೀಡಿ ನಿರ್ದೆಶನ ನೀಡಿದೆ ಎಂದು ತಿಳಿಸಿದರೂ ಸಹ ಕೇಂದ್ರ ಸಮಿತಿಯ ಪದಾಧಿಕಾರಿಗಳು ಮತ್ತು ಕೆಲವು ಗುತ್ತಿಗೆದಾರರು ಈ ಕಾರ್ಯಕ್ರಮವನ್ನು ನಡೆಸಲು ಮುಂದಾಗಿರುತ್ತಾರೆ. ಈಗಾಗಲೇ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿದ್ದು, ಆಪೂರ್ಣವಾಗಿರುವ ಕಟ್ಟಡವನ್ನು ಪೂರ್ಣಗೊಳಿಸಿ ಜಿಲ್ಲಾ ಸಮಿತಿಯನ್ನು ಪರಿಗಣಿಸಿ ಕೇಂದ್ರ ಸಮಿತಿಯ ಚುನಾವಣೆ ನಂತರ ಕಟ್ಟಡ ಉದ್ಘಾಟನೆಯನ್ನು ನ್ಯಾಯಯುತವಾಗಿ ನಡೆಸಲು ನಾವು ಕೂಡ ಸಹಕರಿಸಲು ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಬಿ. ರಮೇಶ್, ಗೌರವ ಉಪಾಧ್ಯಕ್ಷ ಈಶ್ವರಪ್ಪ, ಗೌರವ ಕಾರ್ಯದರ್ಶಿ ಬಿ.ಆರ್. ವೆಂಕಟೇಗೌಡ, ಗೌರವ ಖಜಾಂಚಿ ಬಿ.ಹೆಚ್. ಮಹೇಶಪ್ಪ, ಸಂತೋಷ್ ಇತರರು ಪಾಲ್ಗೊಂಡಿದ್ದರು.