ಹಾಸನ: ನಗರದ ಹೊರ ವಲಯದಲ್ಲಿ ಬಿಜೆಪಿ ಪಕ್ಷದಿಂದ ಗುರುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಿಶೇಷ ಸಭೆಗೆ ಕಾರ್ಯಕರ್ತರು ಬೆರಳೆಣಿಕೆಯಷ್ಟೆ ಇರುವುದು ಕಂಡು ಬಂದಿತು. ಇನ್ನು ಪಕ್ಷದ ಜಿಲ್ಲಾಧ್ಯಕ್ಷರು ಸಭೆಗೆ ಬಾರದೆ ಇರುವುದನ್ನು ಕಂಡ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯನವರು ಅಸಮಧಾನಗೊಂಡು ಕೇವಲ ಎರಡು ನಿಮಿಷ ಭಾಷಣ ಮಾಡಿ ತಕ್ಷಣ ವಾಪಸ್ ಹೊರಟು ಹೋದ ಘಟನೆ ನಡೆಯಿತು.
ದೂರವಾಣಿ ಮುಖೇನಾ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಲಿ ಸುರೇಶ್ ಜೊತೆ ಮಾತನಾಡಿ ಪಕ್ಷದ ಪೂರ್ವ ಭಾವಿ ವಿಶೇಷ ಸಭೆಯಲ್ಲಿ ನಾನು ನಿಮೆಗೆಲ್ಲರಿಗೂ ಕಾಯಬೇಕಾಗಿದೆ? ಎಂದು ಸಭೆಯ ವೇದಿಕೆ ಮೇಲೆ ಬಂದಿರಲಿಲ್ಲ. ನಂತರ ಸಭೆ ಮೇಲೆ ಬಂದು ಪುಷ್ಪಾರ್ಚನೆ ನೆರವೇರಿಸಿ ಉದ್ದೇಶಿಸಿ ಮಾತನಾಡಿದ ಸಚಿವರು ಕೇವಲ ಎರಡು ನಿಮಿಷ ಭಾಷಣ ಮಾಡಿದರು. ಏಪ್ರಿಲ್ ೧೮ ಮತ್ತು ೧೯ ರಂದು ಹಾಸನ ನಗರದಲ್ಲಿ ನಡೆಯುವ ಬಿಜೆಪಿ ರಾಜ್ಯ ಕರ‍್ಯಕಾರಣಿ ಸಭೆಗೆ ಸಿದ್ಧತೆಯಲ್ಲಿದ್ದು, ಸ್ಥಳ ಹುಡುಕಾಟದಲ್ಲಿದೇವೆ. ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಒಲವು ಬರಲಿದೆ. ಕಾರ್ಯಕರ್ತರು ಒಗ್ಗೂಡಿ ಪಕ್ಷಕ್ಕಾಗಿ ದುಡಿಯುವಂತೆ ಕರೆ ನೀಡಿದರು. ನಾನು ಬೇರೆ ಕಡೆ ಹೋಗಬೇಕಾಗಿದ್ದು, ಸಭೆಯನ್ನು ಜಿಲ್ಲಾಧ್ಯಕ್ಷರಾದ ಹುಲ್ಲಳ್ಳಿ ಸುರೇಶ್ ಬಂದು ಮುಂದುವರೆಸಲಿದ್ದಾರೆ ಎಂದು ಹೇಳಿ ಒಂದು ನಿಮಿಷ ಕೂರದೆ ಅಲ್ಲಿಂದ ಹೊರ ಬಂದರು. ಇನ್ನೇನು ಕಾರು ಹತ್ತ ಬೇಕು ಎನ್ನುವಷ್ಟರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಹುಲ್ಲಳ್ಳಿ ಸುರೇಶ್ ಆಗಮಿಸಿದರು. ಎಷ್ಟೆ ಮಾತನಾಡಿಸಲು ಪ್ರಯತ್ನಿಸಿದರೂ ಸಚಿವರು ಅತ್ತ ಕಡೆ ಗಮನ ಕೊಡದೆ ಕಾರನ್ನು ಹತ್ತಿ ಕುಳಿತರು. ನಂತರ ಕಾರಿನ ಬಾಗಿಲಿಗೆ ಬಂದರೂ ಕಿವಿಕೊಡದೆ ವಾಪಸ್ ಹೊರಟೆ ಹೋದರು.
ಇದೆ ವೇಳೆ ಪಕ್ಷದ ಬಿಜೆಪಿ ಪಕ್ಷದ ಮುಖಂಡರಾದ ಚಂದ್ರಕಲಾ, ಕೆ.ಟಿ. ಕುಮಾರಸ್ವಾಮಿ, ಲೋಹಿತ್ ಇತರರು ಉಪಸ್ಥಿತರಿದ್ದರು.
