ಸ್ವಾಮೀಜಿ ಜನ್ಮದಿನ ಉಚಿತ ಆರೋಗ್ಯ ತಪಾಸಣೆ, ರಕ್ತದಾನ


ಹಾಸನ: ನಗರದ ಅರಳೇಪೇಟೆ ರಸ್ತೆಯಲ್ಲಿರುವ ಶ್ರಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸ್ವರಾಜ್ಯ ವಿಕಾಸ ಟ್ರಸ್ಟ್, ಸಪ್ತಗಿರಿ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಿವಕುಮಾರಸ್ವಾಮೀಜಿಯವರ ೧೧೪ನೇ ಜಯಂತಿ ಅಂಗವಾಗಿ ಗುರುವಂದನಾ ಕಾರ್ಯಕ್ರಮ, ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಜನ ಪಾಲ್ಗೊಂಡು ಇದರ ಸದುಪಯೋಗಪಡೆದುಕೊಂಡರು. ಮದ್ಯಾಹ್ನದ ಸಮಯದಲ್ಲಿ ಅನ್ನದಾಸೋಹ ಮಾಡಿದರು. ಇದಕ್ಕೆ ಮೊದಲು ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಜನಪ್ರಿಯ ಆಸ್ಪತ್ರೆಯ ಛರ‍್ಮನ್ ಅಬ್ದೂಲ್ ಬಶೀರ್, ಸಂತೋಷ್ ಕೆಂಚಾAಬ, ಯೋಗೇಂದ್ರ, ಜಯಕರ್ನಾಟಕ ವೇದಿಕೆಯ ಮಂಜುನಾಥ್ ಸ್ವರಾಜ್ಯ ವಿಕಾಸ ಟ್ರಸ್ಟ್ನ ಜಿ.ಎಸ್. ಅವಿನಾಶ್, ಮಜ್ದೂರ್ ಆಟೋ ಚಾಲಕರ ಸಂಘದ ಅಧ್ಯಕ್ಷ ದಿಲೀಪ್, ಶ್ಯಾಮ್, ಮಹತೇಶ್, ಮೋಹನ್, ಕಾರ್ತಿಕ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post