ಹಾಸನ: ನಗರದ ಸ್ಲೇರ‍್ಸ್ ಹಾಲ್ ವೃತ್ತದಲ್ಲಿ ಸ್ನೇಹ ಬಳಗ, ಆಟೋ ಚಾಲಕರ ಸಂಘದ ಹಾಗು ವರ್ತಕರ ಸಂಘದವತಿಯಿAದ ಶ್ರೀ ಡಾ|| ಶಿವಕುಮಾರ ಸ್ವಾಮೀಜಿ ರವರ ೧೧೪ನೇ ಹುಟ್ಟುಹಬ್ಬ ಮತ್ತು ಅನ್ನದಾಸೋಹವನ್ನು ಕಾರ್ಯಕ್ರಮವನ್ನು ಭಕ್ತಿಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ರವಿನಾಕಲಗೂಡು, ಅಮೋಘ ವಾಹಿನಿ ಮುಖ್ಯಸ್ಥರಾದ ಕೆ.ಪಿ.ಎಸ್. ಪ್ರಮೋದ್, ಟ್ರಾಫೀಕ್ ಪೊಲೀಸ್ ಅಧಿಕಾರಿ ಪ್ರಮೋದ್, ಸ್ಹೇನ ಬಳಗದ ಮಂಜುನಾಥ್, ಮಹಂತೇಶ್, ಹೇಮಂತ್ ಇತರರು ಸೇರಿ ನೆರವೇರಿಸಿದರು. ನಂತರ ಮಾತನಾಡಿದ ಮಂಜುನಾಥ್ ರವರು, ಜೀವಾತ್ಮರಿಗೆ ಒಳ್ಳೆಯದನ್ನು ಬಯಸುವುದೇ ನಿಜವಾದ ಬದುಕು ಎಂಬ ಬಸವ ವಾಣಿಯನ್ನು ಆಚರಣೆಗೆ ತಂದವರು ಶ್ರೀ ಶ್ರೀ ಶಿವಕುಮಾರ ಸ್ವಾಮಿಜೀಯವರು. ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದರು. ಶಿಕ್ಷಣ ಮತ್ತು ಬಡ ಮಕ್ಕಳಿಗೆ ನೀಡುತ್ತಿದ್ದ ಪ್ರೋತ್ಸಾಹವನ್ನು ಯಾರೂ ಮರೆಯುವಂತಿಲ್ಲ ಎಂದರು. ಶ್ರೀಯರು ನುಡಿದಂತೆ ನಡೆದವರು. ದೀನ ದಲಿತರಿಗೆ ದಾಸೋಹ ಜೊತೆಗೆ ಕಾಯಕ ಕಲಿಸಿದರು. ಸುಮಾರು ೧೨೪ ಶಾಲಾ-ಕಾಲೇಜುಗಳನ್ನು ನಿರ್ಮಿಸಿದರು. ಅಂದರ ಶಾಲೆ, ಕಿವುಡರ ಶಾಲೆ, ಕೃಷಿ ಕೈಗಾರಿಕೆ ಶಾಲೆಗಳನ್ನು ಸ್ಥಾಪಿಸಿದರು. ಸರ್ವೇಜನಾಃ ಸುಖೀನೋಬವತು ಎಂಬAತೆ ಎಲ್ಲಾ ಜನಾಂಗಗಳನ್ನು ಪ್ರೀತಿಸಿದರು ಎಂದರು. ತಮ್ಮ ಜೀವನವನ್ನೆ ಮುಡುಪಾಗಿ ಇಟ್ಟರು. ಪ್ರತಿನಿತ್ಯ ೧೦ ಸಾವಿರ ಮಕ್ಕಳಿಗೆ ಅನ್ನ ದಾಸೋಹ ಮಾಡಿದವರು. ಸ್ವಾಮೀಜಿಯವರು ಧೀಕ್ಷೆ ತೆಗೆದುಕೊಂಡ ದಿನದಿಂದ ಮಕ್ಕಳಿಗೆ ಶಿಕ್ಷಣ ಕೊಡುವುದು, ಅನ್ನದಾನ ಮಾಡುವುದನ್ನು ರೂಢಿಸಿಕೊಂಡು ಬಂದರು. ಕಾಯಕವೇ ಕೈಲಾಸ ಎಂದು ನಂಬಿದ ಅವರು. ಸೇವೆಯನ್ನು ನಿರಂತರವಾಗಿ ಮಾಡಿದವರು ಎಂದರು. ದೇಶ-ವಿದೇಶಗಳಲ್ಲಿ ಶ್ರೀಗಳಿಗೆ ಅನೇಕ ಭಕ್ತರುಗಳ್ಳಿದ್ದು ಹಾಗೂ ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ವರ್ಗದ ಜಾತಿ, ಮತವಿಲ್ಲದೆ ಶಿಕ್ಷಣವನ್ನು ನೀಡುತ್ತಿದ್ದ ಪೂಜ್ಯರು ತಮ್ಮ ಇಳಿ ವಯ್ಯಸ್ಸಿನಲ್ಲಿ ಮಠದ ವಿದ್ಯಾರ್ಥಿಗಳೊಂದಿಗೆ ಹಾಗೂ ಮಠಕ್ಕೆ ಬಂದ ಭಕ್ತಾದಿಗಳಿಗೆ ಸ್ನೇಹಜೀವಿಯಾಗಿದ್ದರು, ಯಾರೆ ಸಿದ್ದಗಂಗಾಮಠಕ್ಕೆ ಬಂದರು ಪ್ರಸಾದ ಮಾಡಿ ಎಂದು ತಿಳಿಸುತ್ತಿದ್ದ ಸ್ವಾಮಿಗಳು ನಂತರ ಅವರ ಕಷ್ಟ ದುಃಖಗಳಿಗೆ ಬಾಗಿಯಾಗುತ್ತಿದ್ದರು, ಹಾಗೂ ಇವರು ಹಾಸನ ಜಿಲ್ಲೆಯ ಭಕ್ತರೊಡನೆ ಅತ್ಯುತ್ತಮವಾದ ಸಂಭAದ ತುಂಬಾ ಅನ್ಯುನ್ಯವಾಗಿತ್ತು. ಅವರನ್ನು ಪಾದ ಪೂಜೆಗೆ ಹಾಗೂ ಸಾರ್ವಜನಿಕ ಕರ‍್ಯಕ್ರಮಗಳಿಗೆ ಕರೆಸಲಾಗುತ್ತಿತ್ತು ಎಂದು ಹೇಳಿದರು. ಅನಾಥ ಮಕ್ಕಳು, ಆರ್ಥಿಕವಾಗಿ ದುರ್ಭಲರ ಮಕ್ಕಳಿಗೆ ಯಾವುದೇ ಸ್ವಾರ್ಥವಿಲ್ಲದೇ ಶಿಕ್ಷಣ ನೀಡಿದರು. ತಮ್ಮ ಜೀವಿತ ಅವಧಿಯಲ್ಲಿ ಯಾವ ಆಡಂಬರ ಇಲ್ಲದೇ, ನಿಶ್ವಾರ್ಥ ಸೇವೆಯನ್ನು ನಡೆಸಿದರು. ಅಂದಿನಿAದ ಜೀವಿತ ಅವಧಿಯವರೆಗೂ ಯಾವ ಪ್ರಶಸ್ತಿ ಹಿಂದೆ ಬಿದ್ದವರಲ್ಲ ಎಂದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೆ ಕೊಂಡುಯ್ಯುವAತೆ ಕರೆ ನೀಡಿದರು.
