ಸುಳ್ಳು ಆರೋಪ ಬಿಟ್ಟು ದಾಖಲೆ ಇದ್ದರೇ ಬಹಿರಂಗ ಚರ್ಚೆಗೆ ಬರಲು ಕಸಾಪ ಅಭ್ಯರ್ಥಿ ಗಂಜಲಗೂಡು ಗೋಪಾಲ್ ಸವಾಲು


ಹಾಸನ: ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡರು ನನ್ನ ಬಗ್ಗೆ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ದಾಖಲೆ ಇದ್ದರೇ ಬಹಿರಂಗ ಚರ್ಚೆಗೆ ಬರಬೇಕು ಎಂದು ಕಸಾಪ ಅಭ್ಯರ್ಥಿ ಗಂಜಲಗೂಡು ಗೋಪಾಲ್ ಸವಾಲು ಹಾಕಿದರು.

        ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರದAದು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಅವರು ಹತಾಶೆ ಮನೋಭಾವದಿಂದ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿಕೊಂಡು ತಿರುಗಾಡುತ್ತಿರುವುದು ಖಂಡನೀಯ. ಈಗಾಗಲೇ ನನಗೆ ಜಿಲ್ಲೆಯ ಕಸಾಪ ಮತದಾರರು ವ್ಯಾಪಕ ಬೆಂಬಲ ಸೂಚಿಸಿರುವ ವಿಚಾರ ಈಗಾಗಲೇ ಮಂಜೇಗೌಡರಿಗೆ ಗೊತ್ತಾಗಿದೆ. ತಮ್ಮ ಅಭ್ಯರ್ಥಿ ಪರ ಮತಪ್ರಚಾರದ ವೇಳೆ ಹಾಗೂ ಸಭೆ ಸಮಾರಂಭಗಳಲ್ಲಿ ಗೋಪಾಲಗೌಡ ಆದ ನನ್ನ ಮೇಲೆ ಗೇಲಿಮಾಡುವುದು, ಸಲ್ಲದ ಆರೋಪ ಮಾಡುವುದು, ಕಸಾಪ ಸಮ್ಮೇಳನದಲ್ಲಿ ಭ್ರಷ್ಟಚಾರ ಮಾಡಿದ್ದಾನೆ ಎಂದು ತಮ್ಮ ಬೆಂಬಲಿಗರೊAದಿಗೆ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ದೂರಿದರು. ಮಂಜಿಗೌಡರು ಅವರು ಎಲ್ಲೋ ಕುಳಿತುಕೊಂಡು ಆರೋಪ ಮಾಡುವುದನ್ನು ಬಿಟ್ಟು ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಬೇಕು. ನಾನು ಮಾಡಿರುವ ಭ್ರಷ್ಟಚಾರದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ಇಲ್ಲವಾದರೆ ಈಗಾಗಲೇ ಕಸಾಪದಲ್ಲಿ ಇವರು ಹಾಗೂ ಇವರ ತಂಡ ಮಾಡಿರುವ ಭ್ರಷ್ಟಚಾರದ ಪಟ್ಟಿ ನನ್ನ ಬಳಿ ಇದ್ದು, ಇದನ್ನು ನಾನು ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡಲು ಸಿದ್ಧನಿದ್ದೇನೆ ಎಂದು ಎಚ್ಚರಿಸಿದರು.

       ನಾನು ೩ ನೇ ತರಗತಿ ಎಂದು ನನ್ನ ಓದಿನ ಬಗ್ಗೆ ವ್ಯಂಗ್ಯ ಮಾಡುತ್ತೀರಲ್ಲ ನಿಮಗೆ ನನ್ನ ವಿದ್ಯಾಭ್ಯಾಸದ ಬಗ್ಗೆ ಸಂಶಯ ಇದ್ದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗಂಜಲಗೂಡು, ಸರ್ಕಾರಿ ಪ್ರೌಢಶಾಲೆ ಹೆಬ್ಬಾಲೆ ಹೋಬಳಿ ಅರಕಲಗೂಡು ತಾಲ್ಲೂಕು ಇಲ್ಲಿ ನೀವು ಖುದ್ದಾಗಿ ಭೇಟಿಯಾಗಿ ಮಾಹಿತಿ ಪಡೆದು ನಂತರ ನನ್ನ ವಿದ್ಯಾಭ್ಯಾಸದ ಬಗ್ಗೆ ಮಾತನಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು. ನಿಮ್ಮ ಹುಳುಕು ಮುಚ್ಚಿಕೊಳ್ಳಲು ನನ್ನ ಮೇಲೆ ಆರೋಪ ಮಾಡಿದರೆ ಅದು ನಿಮಗೆ ಮುಳುವಾಗಲಿದೆ. ಇನ್ನು ತಾವು ಮೂರು ಡಿಗ್ರಿ ಮಾಡಿಕೊಂಡಿದ್ದೀನಿ ಎಂದು ಹೇಳಿಕೊಳ್ಳುವ ನೀವು ಎಲ್ಲಿ ಯಾವ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಡೆದಿದ್ದೀರಿ ಮಾಹಿತಿಯನ್ನು ದಾಖಲೆ ಸಮೇತ ನೀಡಬೇಕು. ಹಾಗೆಯೇ ನೀವು ಈಗಾಗಲೇ ಪುಸ್ತಕ ಹಾಗೂ ಇನ್ನಿತರ ಕಡೆಗಳಲ್ಲಿ ಗೌರವ ಡಾಕ್ಟರೇಟ್ ಎಂಬ ಪದವನ್ನು ಬಳಸಿಕೊಂಡಿದ್ದೀರಿ, ನೀವು ಯಾವ ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್‌ಡಿ ಮಾಡಿದ್ದೀರಿ ಸೂಕ್ತ ದಾಖಲೆಗಳೊಂದಿಗೆ ಸಾರ್ವಜನಿಕವಾಗಿ ಖಚಿತ ಪಡಿಸಬೇಕಾಗಿದೆ ಎಂದು ಮತ್ತೊಮ್ಮೆ ಸವಾಲು ಎಸೆದರು. ಸುಮ್ಮನೆ ಹತಾಶರಾಗಿ ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ನಿಮ್ಮ ಅಭ್ಯರ್ಥಿ ಠೇವಣಿಯನ್ನು ಉಳಿಸಿಕೊಳ್ಳದ ಹಾಗೆ ಸೋಲಿಸಲು ಗಂಭೀರವಾಗಿ ಚಿಂತಿಸಿ, ಯೋಚಿಸಿ ಮತದಾರರ ಬಳಿ ಹೋಗಿ ನಾನು ಒಬ್ಬ ವ್ಯಕ್ತಿಯ ಮಾತು ಕೇಳಿ ಈಗಾಗಲೇ ತಪ್ಪು ಮಾಡಿ ಪಾಶ್ಚತಾಪ ಪಡುತ್ತಿದ್ದು, ಇನ್ನು ಮುಂದೆಯಾದರೂ ಕಸಾಪ ಸದಸ್ಯರು ಇಂತಹ ತಪ್ಪು ಮಾಡುವರ ಬಗ್ಗೆ ಎಚ್ಚರವಹಿಸಿ ಎಂದು ಹೇಳಿ ಒಳ್ಳೆಯ ಅಭ್ಯರ್ಥಿಗೆ ಮತ ನೀಡಿ ಎಂದು ತಮ್ಮ ಮತ ಪ್ರಚಾರ ನಡೆಸಿದರೆ ಕಸಾಪ ಅಧ್ಯಕ್ಷರಾಗಿದ್ದಕ್ಕೂ ನಿಮಗೆ ಬೆಲೆ ಬರುತ್ತದೆ ಎಂಬುವುದು ನನ್ನ ವೈಯಕ್ತಿ ಸಲಹೆ ಪಾಲಿಸಿದರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುವುದು ಎಂಬುವುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದರು.

       ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಲಾವಿದ ಯಲಗುಂದ ಶಾಂತಕುಮಾರ್, ಬರಹಗಾರರು ಅರುಣ್ ಕುಮಾರ್, ರವಿಕಿರಣ್, ಅರುಣ್ ಇತರರು ಉಪಸ್ಥಿತರಿದ್ದರು.

Post a Comment

Previous Post Next Post