ಹಾಸನ : ನರ್ಸಿಂಗ್ ಕಾಲೇಜು ಪ್ರಾಂಶುಪಾಲರ ಮೇಲೆ ಸುಳ್ಳು ಆರೋಪಿಸಿ ಹಾಕಲಾಗಿರುವ ಕೇಸನ್ನು ರದ್ದುಪಡಿಸಿ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ಸಮತಾ ಸೈನಿಕ ದಳದ ಅಧ್ಯಕ್ಷ ಆರ್.ಪಿ.ಐ. ಸತೀಶ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸರ್ಕಾರಿ ನರ್ಸಿಂಗ್ ಕಾಲೇಜಿನ ಮಹಿಳಾ ಪ್ರಾಂಶುಪಾಲರಾದ ಶೋಭಾದೇವಮಾನ ಒಬ್ಬ ದಲಿತ ವರ್ಗದವರಾಗಿದ್ದು, ಕಳೆದ ೧೦ ವರ್ಷಗಳಿಂದ ಪ್ರಾಂಶುಪಾಲರಾಗಿ ಅನೇಕ ಯೂನಿರ್ವಸಿಟಿ ಪರೀಕ್ಷೆಗಳು ಮತ್ತು ಕೆ.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಮ್ಮ ಕಾಲೇಜಿನಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಕೇವಲ ೭ ತಿಂಗಳ ನಿವೃತ್ತಿ ಅಂಚಿನಲ್ಲಿರುವ ಇವರ ಮೇಲೆ ಸುಳ್ಳು ಆರೋಪದಲ್ಲಿ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿಸಿರುವುದು ಖಂಡನೀಯ. ೨೦೧೯-೨೦೨೦ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಚಿನ್ನಯ್ಯ ಎಂಬ ವಿದ್ಯಾರ್ಥಿ ಮೆಡಿಕಲ್ ಸರ್ಜಿಕಲ್ ಎನ್-ಎಸ್.ಪಿ ವಿಷಯದಲ್ಲಿ ಫೇಲಾಗಿದ್ದು, ಇದರಿಂದ ಅಚ್ಚರಿಗೊಂಡು ಯೂನಿರ್ವಸಿಟಿಯಿಂದ ನಕಲು ಪ್ರತಿಯನ್ನು ತರಿಸಿಕೊಂಡು ನೋಡಿದಾಗ ಉತ್ತರ ಪತ್ರಿಕೆಯ ಉತ್ತರಗಳ ಮೇಲೆ ಪೆನ್ನಿನಿಂದ ಹೊಡೆದು