ಹೊಳೆನರಸೀಪುರ : ಸಂವಿಧಾನಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್‌ರವರ ೧೩೦ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಏ.೧೪ ರಂದು ಪಟ್ಟಣದಲ್ಲಿ ನೂತನವಾಗಿ ಹಾಸನ – ಮೈಸೂರು ರಸ್ತೆಬಳಿ ನಿರ್ಮಿಸಿರುವ ಡಾ|| ಬಿ.ಆರ್ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಆಚರಿಸಲು ಶಾಸಕ ಹೆಚ್.ಡಿ ರೇವಣ್ಣ ಅವರ ಉಪಸ್ಥಿತಿಯಲ್ಲಿ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ನಡೆದಂತಹ ಪೂರ್ವ ಭಾವಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಶಾಸಕ ಹೆಚ್.ಡಿ ರೇವಣ್ಣ ಮಾತನಾಡಿ ನೂತನವಾಗಿ ಸರ್ಕಾರದ ವತಿಯಿಂದ ನಿರ್ಮಿಸಿರುವ ಡಾ|| ಬಿ.ಆರ್ ಅಂಬೇಡ್ಕರ್ ಭವನದ ಉದ್ಘಾಟನೆಯನ್ನು ಸಂಪ್ರದಾಯ ಬದ್ದವಾಗಿ ಏ.೭ ಮತ್ತು ಏ೮ ರಂದು ಹೋಮ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ನೆರವೇರಿಸಲು ಸಿದ್ದತೆ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಅಂದಿನ ಕಾರ್ಯಕ್ರಮಕ್ಕೆ ಮತ್ತು ಡಾ|| ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆಗೆ ಕಾರ್ಯಕ್ರಮಕ್ಕೆ ಮುಖಂಡರುಗಳು ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಆಗಮಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು. ಡಾ|| ಬಿ.ಆರ್ ಅಂಬೇಡ್ಕರ್ ಭವನ ನಿರ್ವಹಣೆಗೆ ಸಮಿತಿಯೊಂದನ್ನು ರಚಿಸಬೇಕೆಂದು ಸೂಚಿಸಿದ ಶಾಸಕರು ಸ್ಥಳೀಯ ಜನ ಪ್ರತಿನಿಧಿಗಳನ್ನು ಒಳಗೊಂಡAತೆ ಪ್ರಮುಖ ಮುಖಂಡರ ಸಮಿತಿಯೊಂದನ್ನು ರಚನೆ ಮಾಡಬೇಕು , ದಲಿತ ವರ್ಗಕ್ಕೆ ಸೇರಿದವರು ಭವನದಲ್ಲಿ ಕಾರ್ಯಕ್ರಮವನ್ನು ಮಾಡಬೇಕಾದರೆ ಕಾರ್ಯಕ್ರಮ ಆಯೋಜಕರಿಂದ ೨೫೦೦೦ ರೂಪಾಯಿಗಳನ್ನು ಸಮಿತಿಗೆ ಪಡೆಯಬೇಕು. ಭವನದಲ್ಲಿ ಎಲ್ಲಾ ವರ್ಗದವರು ಶುಭ ಸಮಾರಂಭಗಳನ್ನು ನಡೆಸಲು ಅವಕಾಶ ವಿದ್ದು ಅವರು ನಡೆಸುವ ಪ್ರತೀ ಕಾರ್ಯಕ್ರಮಕ್ಕೆ ೩೦,೦೦೦ ರೂಪಾಯಿಗಳನ್ನು ಸಮಿತಿಗೆ ನೀಡಬೇಕೆಂದು ಸಲಹೆ ನೀಡಿದ ಶಾಸಕರು ಸಂಘ ಸಂಸ್ಥೆಯವರು ಸಭೆಯನ್ನು ನಡೆಸಬೇಕಾದರೆ ನೊಂದಾಯಿತ ಸಂಸ್ಥೆಗೆ ಸಭೆ ಮತ್ತು ಕಾರ್ಯಕ್ರಮವನ್ನು ನಡೆಸಲು ಮಾತ್ರ ಅವಕಾಶ ನೀಡಬೇಕೆಂದು ಹಾಗೂ ಅವರಿಂದ ೫೦೦೦ ರೂಪಾಯಿಗಳನ್ನು ಸಮಿತಿಯವರು ಪಡೆಯಬೇಕಿದೆ ಎಂದರು.
ಜಿ.ಪA ಮಾಜಿ ಸದಸ್ಯ ಹೆಚ್.ವೈ ಚಂದ್ರಶೇಖರ್ ಮಾತನಾಡಿ ಡಾ|| ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ ಆಚರಿಸುವ ಸಭೆಗೆ ಮತ್ತು ಕಾರ್ಯಕ್ರಮಕ್ಕೆ ಅಧಿಕಾರಿಗಳ ಗೈರು ಹಾಜರಿ ಪ್ರತೀ ಸಭೆಯಲ್ಲಿ ಎದ್ದು ಕಾಣುತ್ತಿದ್ದು ಕಡ್ಡಾಯವಾಗಿ ಅಧಿಕಾರಿಗಳು ಭಾಗವಹಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಸೂಚಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ದಲಿತ ಮುಖಂಡ ಹೆಚ್.ಆರ್ ಹನುಮಂತರಾಜು ಮಾತನಾಡಿ ದಲಿತರ ಸಮಸ್ಯೆ ತಾಲ್ಲೂಕಿನಾಧ್ಯಂತ ಎತ್ತೇಚ್ಛ ವಾಗಿದ್ದು ಆ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುವ ಮತ್ತು ಸಂಬAಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಸಲುವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತ ರಕ್ಷಣಾ ಸಮಿತಿ ಸಬೆಯನ್ನು ಹಿಂದೆ ಸರ್ಕಾರದ ಆದೇಶದನ್ವಯ ಮೂರು ತಿಂಗಳಿಗೊಮ್ಮೆ ನಡೆಸಲಾಗುತ್ತಿತ್ತು. ಇತ್ತೀಚೆಗೆ ಸುಮಾರು ೧ ವರ್ಷದಿಂದಲೂ ಸಮಿತಿಯ ಸಭೆ ನಡೆಸದೆ ಇರುವುದು ದಲಿತರ ದುರಂತ. ಶೀಘ್ರದಲ್ಲೇ ಸಬೆ ನಡೆಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಈ ಕುರಿತು ಮಾತನಾಡಿದ ಶಾಸಕರು ಕೆಲವೇ ದಿನಗಳಲ್ಲಿ ಸಭೆ ನಡೆಸಿ ದಲಿತರ ಸಮಸ್ಯೆಯನ್ನು ಆಲಿಸುವುದಾಗಿ ಭರವಸೆ ನೀಡಿದರು.,
ದಲಿತ ಮುಖಂಡ ಎಂ.ಸೋಮಶೇಖರ್ ಮಾತನಾಡಿ ಡಾ|| ಬಿ.ಆರ್ ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಬಗವಾನ್ ಬುದ್ಧ ಪದ್ಧತಿಯಲ್ಲಿ ಹಮ್ಮಿಕೊಂಡು ಬಂತೇಜಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಂದ ಉಪದೇಶ ನೀಡುವುದು ಸೂಕ್ತ. ಡಾ|| ಬಿ.ಆರ್ ಅಂಬೇಡ್ಕರ್ ಆಶಯ ಕೂಡ ಇದೇ ಆಗಿತ್ತು ಎಂದು ಸಲಹೆ ನೀಡಿದರು.,
ತಾಲ್ಲೂಕಿನ ಪ್ರಮುಖ ಸ್ಥಳದಲ್ಲಿ ಬೌದ್ಧ ವಿಹಾರ ನಿರ್ಮಾಣ ಮಾಡುವಂತೆ ಕೆಲವರು ಮನವಿ ಮಾಡಿದ್ದು ಸೂಕ್ತ ಸ್ಥಳದಲ್ಲಿ ಬೌದ್ಧ ವಿಹಾರವನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಇದೇ ಸಂದರ್ಭದಲ್ಲಿ ಶಾಸಕರು ಸಭೆಯಲ್ಲಿ ತಿಳಿಸುತ್ತಾ ಪಟ್ಟಣದ ಡಾ ಅಂಬೇಡ್ಕರ್ ನಗರದ ನಿವೇಶನ ರಹಿತರಿಗೆ ೫೦೦ ಹಾಗೂ ಸಿದ್ದಾರ್ಥ ನಗರದವರಿಗೆ ೨೫೦ ನಿವೇಶನಗಳನ್ನು ನೀಡಲು ಈ ಗಾಗಲೇ ಸಿದ್ದತೆ ನಡೆಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ರಾಜೇಶ್ವರಿ, ಗ್ರೇಡ್ ೨ ತಹಸೀಲ್ದಾರ್ ಬಿ.ಎಸ್ ರವಿ, ತಾ.ಪಂ ಇ.ಒ ಕೆ.ಯೊಗೇಶ್, ಬಿ.ಇ.ಒ. ಜಿ.ಈ ಲೊಕೇಶ್, ಅಬಕಾರಿ ಇಲಾಖೆಯ ಶಂಕರಪ್ಪ, ವಲಯ ಅರಣ್ಯಾಧಿಕಾರಿ ಲಕ್ಷಿö್ಮÃಕಾಂತ್, ಕೃಷಿ ಇಲಾಖೆಯ ಸಪ್ನ, ರೇಷ್ಮೆ ಇಲಾಖೆಯ ನಟರಾಜ್. ಸಿ.ಡಿ.ಪಿ.ಒ ಪ್ರಸನ್ನ ಕುಮಾರ್, ಪಶು ಇಲಾಖೆಯ ತಿಪ್ಪೇಸ್ವಾಮಿ, ಎ.ಇ.ಇ ಮಹೇಶ್, ಪುರಸಭೆ ಮುಖ್ಯಾಧಿಕಾರಿ ವಿ.ಡಿ ಶಾಂತಲ, ಆರೋಗ್ಯ ಇಲಾಖೆಯ ಅಧಿಕಾರಿ ಡಾ|| ಹೆಚ್. ಎನ್ ರಾಜೇಶ್ ಸೇರಿದಂತೆ ವಿವಿಧ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ದಲಿತ ಮುಖಂಡರುಗಳಾದ ಜಿ.ಪಂ ಸದಸ್ಯ ಪ್ರಸನ್ನ, ಪುರಸಭೆ ಸದಸ್ಯ ಹೆಚ್.ಡಿ, ಉಮೇಶ್ , ಮಾಜಿ ಸದಸ್ಯರಾದ ಹೆಚ್.ಎನ್ ರಾಘವೇಂದ್ರ, ಹೆಚ್.ಟಿ ಲಕ್ಷö್ಮಣ, ತಾಪಂ ಮಾಜಿ ಅದ್ಯಕ್ಷ ಸಿ.ಆರ್ ಮಂಜುನಾಥ, ಚಿನ್ನಸ್ವಾಮಿ, ಕೃಷ್ಣ ಮೂರ್ತಿ, ನಾಗೇಂದ್ರ ಮತ್ತಿತರರು ಹಾಜರಿದ್ದರು,.
