ಬೇಲೂರು ವೀರಶೈವ ಸಂಘದಿಂದ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ನಡೆಸಿದರು.
"ವೀರಶೈವ-ಲಿಂಗಾಯುತರಲ್ಲಿ ಒಗ್ಗಟ್ಟಿನ ಕೊರತೆ"
:-ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಬಹುಸಂಖ್ಯೆಯಲ್ಲಿದ್ದರೂ ಸೂಕ್ತ ರಾಜಕೀಯ ಸ್ಥಾನ-ಮಾನ ಹೊಂದಲು ಜನಾಂಗದಲ್ಲಿ ಇತ್ತೀಚಿನ ಒಗ್ಗೂಟ್ಟಿನ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಲೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಾಪರಮೇಶ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ವೀರಶೈವ ಮಹಾಸಭಾ ವತಿಯಿಂದ ಚುನಾಯಿತ ಜನಪ್ರತಿನಿಧಿಗಳಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಸಕ್ತ ದಿನದಲ್ಲಿ ಸಣ್ಣ ಪುಟ್ಟ ಸಮುದಾಯಗಳ ಹೊಂದಾಣಿಕೆ ಮತ್ತು ಸಂಘಟನೆ ನಮ್ಮ ಸಮಾಜದಲ್ಲಿ ಕಾಣಲು ಸಾದ್ಯವಾಗುತ್ತಿಲ್ಲ,ಇದಕ್ಕೆ ಕಾರಣ ಮುಖಂಡರಲ್ಲಿ ಸ್ವ ಪ್ರತಿಷ್ಠೆಯೇ ಕಾರಣವಾಗಿದೆ.ವೀರಶೈವ ಲಿಂಗಾಯತ ರ‍್ಮ ಸಕಲ ಜೀವಾತ್ಮರಿಗೆ ಲೇಸು ಬಯಸಿ, ಎಲ್ಲಾ ಜಾತಿ ಮತ್ತು ರ‍್ಮಗಳನ್ನು ಅಪ್ಪಿಕೊಂಡ ಲಿಂಗಾಯತ ರ‍್ಮ ಸಂಘಟನೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದ ಅವರು ಗ್ರಾಮ ಪಂಚಾಯತಿಗೆ ನೂತನವಾಗಿ ಅಯ್ಕೆಯಾದ ಜನಪ್ರತಿನಿಧಿಗಳು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ವೀರಶೈವ ಲಿಂಗಾಯತ ರ‍್ಮದಿಂದ ಸುಮಾರು ೭೬ ಕ್ಕೂ ಅಧಿಕ ಸದಸ್ಯರು ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ ಆಯ್ಕೆಯ ವಿಷಯ ನಿಜಕ್ಕೂ ನನಗೆ ಅತೀವ ಸಂತೋಷವಾಗಿದೆ. ಅಂತೆಯೇ ತಮ್ಮ ಅಧಿಕಾರ ಅವಧಿಯಲ್ಲಿ ದೀನ ದಲಿತರ ಮತ್ತು ಶೋಷಿತರ ಪರವಾಗಿ ಕೆಲಸ ಮಾಡಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಚತೆ, ನರ‍್ಮಲ್ಯ ಮತ್ತು ಶುದ್ದ ಕುಡಿಯುವ ನೀರಿಗೆ ಹೆಚ್ಚಿನ ಅಧ್ಯತೆ ನೀಡುತ್ತಾ ನಿಮ್ಮ-ನಿಮ್ಮ ಗ್ರಾಮ ಪಂಚಾಯತಿಗಳನ್ನು ಮಾದರಿ ಪಂಚಾಯತಿಗಳಾಗಿ ಬದಲಾವಣೆಗೆ ಮುನ್ನಡಿ ಬರೆಯಬೇಕು ಎಂದು ಕಿವಿ ಮಾತು ಹೇಳಿದರು.
ತಾಲ್ಲೂಕು ವೀರಶೈವ ಮಹಾಸಭಾ ವತಿಯಿಂದ ಯಗಚಿ ಸೇತುವೆ ಬಳಿ ನೂತನವಾಗಿ ಆರಂಭವಾಗಿರುವ ವೀರಶೈವ ಸಮುದಾಯ ಭವನ ರೂ ೬ ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ಕಳೆದ ರ‍್ಷ ಪುಷ್ಪಗಿರಿ ರಾಷ್ಟ್ರೀಯ ಉತ್ಸವ ಮತ್ತು ತರಳಬಾಳು ಮಹೋತ್ಸವ ಅತ್ಯಂತ ಯಶಸ್ವಿಯಾಗಿದೆ. ಅಂತಯೇ ಈ ಭಾರಿ ದಸರಾ ರ‍್ಬಾರ್ ಕರ‍್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ನಡೆಸಬೇಕು ಎಂದು ನರ‍್ಧರಿಸಿದ್ದು, ರ‍್ವ ಸಮಾಜದ ಬಂಧುಗಳು ಹೆಚ್ಚಿನ ದೇಣಿಗೆ ನೀಡಲು ಮುಂದಾಗಬೇಕಿದೆ ಎಂದರು.
ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಬೇಲೂರು ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಡಗೂರು ಬಸವರಾಜು, ಸಮಾಜದ ಮುಖಂಡರಾದ ಬಿ.ಕೆ.ಚಂದ್ರಕಲಾ, ದಿನೇಶ್.ರೇಣುಕುಮಾರ್, ಅದ್ದೂರಿ ಚೇತನ್, ವಕೀಲರಾದ ರಾಜಶೇಖರ, ಹಗರೆ ಕಾಂತರಾಜು, ರುದ್ರಯ್ಯ, ಅರೇಹಳ್ಳಿ ನಟರಾಜ್, ಮಹಾದೇವ್, ಯುವ ಘಟಕದ ಅಧ್ಯಕ್ಷ ಗೆಂಡೇಹಳ್ಳಿ ಚೇತನ್, ಪಿಕರ‍್ಡ್ ಬ್ಯಾಂಕ್ ಅಧ್ಯಕ್ಷ ಸೋಮಶೇಖರ್, ಉಮೇಶ್. ರಾಜು ಇನ್ನು ಮುಂತಾದವರು ಹಾಜರಿದ್ದರು.
ರಾಜ್ಯ ಬಿಜೆಪಿ ರ‍್ಕಾರ ನಿಷ್ಠಾವಂತ ಕರ‍್ಯರ‍್ತರಾದ ಬೆಣ್ಣೂರು ರೇಣುಕುಮಾರ್, ಕೊರಟಿಕೆರೆ ಪ್ರಕಾಶ್ ಅವರಿಗೆ ಶೀಘ್ರವೇ ನಿಗಮ ಮಂಡಳಿಯಿಂದ ಸೂಕ್ತ ಸ್ಥಾನ ನೀಡುವ ಮೂಲಕ ವೀರಶೈವ ಸಮಾಜಕ್ಕೆ ಮುನ್ನಣೆ ದೊರಕಿಸಿ ಕೊಡಬೇಕು ಎಂದು ಬೇಲೂರು ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್ ರ‍್ಕಾರವನ್ನು ಒತ್ತಾಯಿಸಿದರು.
