ಅಬಕಾರಿ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದ್ದ ಮಧ್ಯವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ನಾಶ.

ಅಬಕಾರಿ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದ್ದ


ಅಕ್ರಮ ಮಧ್ಯವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ನಾಶಪಡಿಸಲಾಯಿತು.
ಇತ್ತೀಚೆಗೆ ೧೨ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಮದ್ಯವನ್ನು ಅಬಕಾರಿ ಕಚೇರಿ ಹಿಂಭಾಗದಲ್ಲಿ ತಹಶೀಲ್ದಾರ್ ಎನ್ ವಿ ನಟೇಶ್ ಅವರ ಸಮ್ಮುಖದಲ್ಲಿ ಅಬಕಾರಿ ನಿರೀಕ್ಷಕರಾದ ಚಂದನ ಹಾಗೂ ಸಿಬ್ಬಂದಿಗಳು ನಾಶಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಬಕಾರಿ ನಿರೀಕ್ಷಕರಾದ ಚಂದನ
 ೧.೮೦ ಮಿಲೀ ಮದ್ಯ,೨.೮೦ ಲೀ ಬಿಯರ್,೨೩ ಲೀ ಕಳ್ಳಬಟ್ಟಿ ಸಾರಾಯಿ,೨೧೬ ಲೀ ಬೆಲ್ಲದ ಕೊಳೆಯನ್ನು ನಾಶಪಡಿಸಲಾಗಿದೆ ಎಂದರು.
ಇದರ ಒಟ್ಟು ಮೌಲ್ಯ ಸುಮಾರು ೨೫೦೦ ರೂಗಳಾಗಿವೆ.ಪುರಸಭೆ ಚುನಾವಣೆ ಹಿನ್ನಲೆಯಲ್ಲಿ ತಹಶೀಲ್ದಾರ್ ಅವರ ಆದೇಶದ ಮೇರೆಗೆ ಪಟ್ಟಣದ ಎಲ್ಲಾ ಸನ್ನದ್ದುದಾರರ ಸಭೆ ಕರೆಯಲಾಗಿದ್ದು,ಈಗಾಗಲೇ ಪುರಸಭೆ ಚುನಾವಣೆಯ ಘೋಷಣೆ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯ ನಿರ್ದೇಶನದಂತೆ ಬಾರ್ ಬಾಗಿಲು ನಿಗದಿತ ಸಮಯಕ್ಕೆ ಬಾಗಿಲು ಮುಚ್ಚಲು ಸೂಚಿಸಲಾಗಿದೆ‌.ಅಲ್ಲದೆ ಪ್ರತಿನಿತ್ಯ ಎರಡು ತಂಡಗಳು ಗಸ್ತು ತಿರುಗುತ್ತಿದ್ದು ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಎನ್ ವಿ ನಟೇಶ್ ಮಾತನಾಡಿ ಪುರಸಭೆ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದಲ್ಲಿರುವ ಮಧ್ಯದಂಗಡಿಗಳಿಗೆ ಸಭೆ ಕರೆದು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಈಗಾಗಲೇ ಸಭೆಯನ್ನು ಕರೆದು ಅಕ್ರಮವಾಗಿ ನೀತಿ ಸಂಹಿತೆ ಉಲ್ಲಂಘಿಸಿದವರ ಮೇಲೆ‌ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಉಪನಿರೀಕ್ಷಕರಾದ ಸ್ವರ್ಣಶ್ರೀ,ರಂಜನ್,ಮಲ್ಲಿಕಾರ್ಜುನ, ನವೀನ್,ಪ್ತತಾಪ್,ಪ್ರದೀಪ್,ಪ್ರಕಾಶ್ ಹಾಜರಿದ್ದರು.
Attachments area

Post a Comment

Previous Post Next Post