ಹಾಸನ: ಮಳೆಯ ಜೊತೆ ಸಿಡಿಲು ಬಡಿದು ಹಸು ಸಾವನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ವಡೂರು ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಗ್ರಾಮದ ನಾಗೇಶ್ ಎಂಬುವರಿಗೆ ಸೇರಿದ ನಾಲ್ಕು ವರ್ಷದ ನಾಟಿ ಹಸುವನ್ನು ಮೇಯಲು ಬಿಟ್ಟಿದ್ದ ವೇಳೆ ಗುಡುಗು ಸಹಿತ ಸುರಿದ ಭಾರೀ ಮಳೆಗೆ ಸಿಡಿಲು ಬಡಿದು ಹಸು ಸ್ಥಳದಲ್ಲೇ ಸಾವನಪ್ಪಿದೆ. ಇದರಿಂದ ಸುಮಾರು 15 ಸಾವಿರ ರೂ. ನಷ್ಟಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಾಳ್ಳುಪೇಟೆ ಪುಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ದೀಪಕ್ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದರು. ಹಸು ಸಾವಿನಿಂದ ನಾಗೇಶ್ ಕುಟುಂಬಕ್ಕೆ ನಷ್ಟವುಂಟಾಗಿದ್ದು ಸಂಬAಧಪಟ್ಟವರು ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಇದೆ ವೇಳೆ ಒತ್ತಾಯಿಸಿದ್ದಾರೆ.
Tags
ಹಾಸನ
