ಹಾಸನ: ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿ ಚೆನ್ನಯ್ಯ ಪರವಾಗಿ ಕಳೆದ ಒಂದು ವಾರಗಳ ಕಾಲ ಎಬಿವಿಪಿ ನೇತೃತ್ವದಲ್ಲಿ ನಡೆಸಿದ ಹೊರಾಟಕ್ಕೆ ಜಯ ದೊರಕುವ ಮೂಲಕ ಅನುತ್ತೀರ್ಣವಾದವನು ಉತ್ತೀರ್ಣನಾಗಿದ್ದಾನೆ.
ಕಾಲೇಜಿನ ಪ್ರಾಂಶುಪಾಲರು ದುರುದ್ಧೇಶ ಪೂರ್ವಾಕವಾಗಿ ಚೆನ್ನಯ್ಯ ಜಿ. ಹೀರೆಮಠ ಎಂಬ ನರ್ಸಿಂಗ್ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ತಿದ್ದಿಸಿ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡಲಾಗಿತ್ತು. ಮತ್ತೆ ಮರು ಮೌಲ್ಯಮಾಫನ ಮಾಡುವ ಮೂಲಕ ವಿದ್ಯಾರ್ಥಿಯನ್ನು ಪಾಸ್ ಮಾಡುವಂತೆ ಹಾಗೂ ಪ್ರಾಂಶುಪಾಲರನ್ನು ವಜಾಗೊಳಿಸುವಂತೆ ಬೃಹತ್ ಹೋರಾಟ ನಡೆಸಿತು. ಕಾಲೇಜಿನ ಡೀನ್ ಬಿ.ಸಿ. ರವಿಕುಮಾರ್ ರವರು ಕೂಡ ಉತ್ತರ ಪತ್ರಿಕೆಯನ್ನು ಮತ್ತೆ ಮರು ಮೌಲ್ಯ ಮಾಫನ ಮಾಡಿಸುವ ಮೂಲಕ ಈಗ ವಿದ್ಯಾರ್ಥಿ ಫಸ್ಟ್ ಕ್ಲಾಸ್ ಬಂದಿದ್ದಾನೆ. ರಾಜೀವ್ ಗಾಂಧಿ ಶುಶ್ರೂಷ ವಿಶ್ವವಿದ್ಯಾಲಯದಿಂದ ಚೆನ್ನಯ್ಯ ಜಿ. ಹೀರೆಮಠ ರವರ ಉತ್ತರ ಪತ್ರಿಕೆಯನ್ನು ಪಾಸ್ ಮಾಡಿ ಅಧಿಕೃತ ಆದೇಶ ಹೊರಡಿಸಿರುತ್ತದೆ. ಹೋರಾಟಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರೆಲ್ಲರಿಗೂ ಧನ್ಯವಾದಗಳನ್ನು ಹೋರಾಟಗಾರರು ತಿಳಿಸಿದ್ದಾರೆ.
