ಹಾಸನ: ಯಾವುದೇ ಸಿದ್ಧತೆಗಳಿಲ್ಲದೇ ಏಕಾಏಕಿ ಲಾಕ್ ಡೌನ್ ಮಾಡಿದರೇ ಬಡವರು ಸಮಸ್ಯೆ ಎದುರಿಸಬೇಕಾಗುತ್ತದೆ. ಮೊದಲು ಆಹಾರ ಧಾನ್ಯ ಮತ್ತು ಸಹಾಯ ಧನ ನೀಡಿ ನಂತರ ಕಾನೂನು ಜಾರಿಗೆ ತರಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸಲಹೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ದಿನೆ ದಿನೆ ಹೆಚ್ಚಾಗುತ್ತಿರುವುದರಿಂದ ಸರಕಾರವು ಲಾಕ್ ಡೌನ್ ಮಾಡಲು ಮುಂದಾಗಿದ್ದು, ಆದರೇ ಯಾವ ಸಿದ್ಧತೆ ಮಾಡಿಕೊಳ್ಳದೇ ಲಾಕ್ ಡೌನ್ ಮಾಡಿದರೇ ಕಡು ಬಡವರು, ಕೂಲಿ ಕಾರ್ಮಿಕರ ಗತಿ ಏನು? ಇವರಿಗೆ ೧೦ ಕೆಜಿ ಅಕ್ಕಿ, ೧೦ ಕೆಜಿ ರಾಗಿ ಇಲ್ಲವೇ ಗೋದಿ ಜೊತೆಗೆ ಜೀವನಕ್ಕಾಗಿ ೫ ಸಾವಿರ ರೂಗಳನ್ನು ಕೊಡಬೇಕು ಎಂದರು. ಇಂತಹ ತುರ್ತು ಸಂದರ್ಭದಲ್ಲಿ ಸರ್ಕಾರ ನಿರ್ಲಕ್ಷ÷್ಯ ಮಾಡದೇ ಕೂಡಲೇ ಹಾಸನ ಜಿಲ್ಲೆಗೆ ೧೦ ಕೋಟಿ ರೂಗಳನ್ನು ಬಿಡುಗಡೆ ಮಾಡಲು ಮುಂದಾಗಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಸನ ಜಿಲ್ಲೆಯನ್ನು ದ್ವೇಶ ಮನೋಭಾವದಲ್ಲಿ ನೋಡಲಾಗುತ್ತಿದೆ ಎಂದು ದೂರಿದರು. ಹಾಸನ ಎಂದರೇ ಅನಾಥ ಜಿಲ್ಲೆಯಂತೆ ನೋಡುತ್ತಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಅಸಮಧಾನ ಹೊರಹಾಕಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ರಾಜ್ಯಕ್ಕೆ ಏನು ಅನುದಾನ ಕೊಡಬೇಕಾಗಿದೆ ಕೊಡಲಿ. ರಾಜ್ಯದಲ್ಲಿ ೨೬ ಜನ ಬಿಜೆಪಿ ಸಂಸದರಿದ್ದೂ ಮೂಕರಾಗಿದ್ದಾರೆ. ಸಂಸದರ ಅನುಧಾನವನ್ನು ಕಡಿತ ಮಾಡಿ ಅವರಿಗೆ ಶಕ್ತಿ ಇಲ್ಲದಂತೆ ಮಾಡಲಾಗಿದೆ ಎಂದ ಅವರು, ಶಾಸಕರ ಸಂಬಳವನ್ನು ಕಡಿತ ಮಾಡಬಾಡದೆ ಬಿಡುಗೆ ಮಾಡಬೇಕು ಎಂದು ಒತ್ತಾಯಿಸಿದರು.
ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ತಕ್ಷಣದಲ್ಲಿ ನ್ಯಾಯಾಲಯವು ಮಧ್ಯ ಪ್ರವೇಶ ಮಾಡಿ ಮಾಡಿಟರ್ ಮಾಡಬೇಕು ಇಲ್ಲದಿದ್ದರೆ ಜನ ಸಾಮಾನ್ಯರು ಬದುಕಿ ಉಳಿಯುವುದಿಲ್ಲ ಎಂದು ಆತಂಕವ್ಯಕ್ತಪಡಿಸಿದರು. ಕೊರೋನಾ ಸೋಂಕಿತರು ಏನಾದರೂ ಸಾವನಪ್ಪಿಸಿದರೇ ನಗರಸಭೆ ವತಿಯಿಂದ ಶವ ಸಂಸ್ಕಾರ ಮಾಡಲು ೫ ಸಾವಿರ ಪಡೆಯುತ್ತಿದ್ದಾರೆ ಎಂದು ದೂರಿದರು. ಹಾಸನ ಜಿಲ್ಲೆಯಲ್ಲಿರುವ ಒಟ್ಟು ೧೫ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆ ಕಾಯ್ದಿರಿಸಿದರೂ ಈವರೆಗೂ ಒಬ್ಬ ರೋಗಿಯನ್ನು ದಾಖಲು ಮಾಡಿ ಚಿಕಿತ್ಸೆ ಕೊಡುತ್ತಿಲ್ಲ. ಜೊತೆಗೆ ಜಿಲ್ಲೆಯ ೧೧ ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳೆಂದು ಗುರುತಿಸಿ ಒಟ್ಟು ೫೦೪ ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾರಿ ಮೀಸಲಿರಿಸಲಾಗಿದ್ದು, ಪ್ರಸ್ತುತ ೧೯೨ ಜನ ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಗೆ ತಜ್ಞ ವೈದ್ಯರು ಮತ್ತು ಎಂ.ಬಿ.ಬಿ.ಎಸ್ ವೈದ್ಯರು ಸೇರಿದಂತೆ ಒಟ್ಟು ೨೮೬ ಹುದ್ದೆಗಳು ಮಂಜೂರಾಗಿದ್ದು, ೨೧೬ ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇನ್ನೂ ೭೦ ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ ನಿತ್ಯ ೭೦೦ ರಿಂದ ೮೦೦ ಜನರಿಗೆ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ನಿತ್ಯ ಅಂದಾಜು ೩೨೦ ಜನರಿಗೆ ರೆಮ್‌ಡಿಸಿವರ್ ಚುಚ್ಚುಮದ್ದು ನೀಡಿ ಚಿಕಿತ್ಸೆ ನೀಡಬೇಕಾಗಿದೆ. ಪ್ರಸ್ತುತ ೧೨೬ ಡೋಸ್ ಮಾತ್ರ ರೆಮ್‌ಡಿಸಿವರ್ ಚುಚ್ಚುಮದ್ದು ಲಭ್ಯವಿದೆ. ಮುಂದಿನ ೧೫ ದಿನಗಳಿಗೆ ಅಂದಾಜು ೪೮೦೦ ಡೋಸ್ ರೆಮ್‌ಡಿಸಿವರ್ ಚುಚ್ಚುಮದ್ದು ಅಗತ್ಯವಿದೆ. ಯಾರು ಯಾರನ್ನು ದೂರುವುದು ಬೇಡ. ಕೈಮುಗಿದು ಕೇಳುತ್ತೇನೆ ಜನರ ಪ್ರಾಣ ಉಳಿಸಬೇಕು ಅಷ್ಟೆ ಎಂದು ಹೇಳಿದರು.