ಅಗತ್ಯ ಸೇವೆಗಳಿಗೆ ಬೆಳಗ್ಗೆ ೬ ರಿಂದ ೧೦ ರವರೆಗೆ ಮಾತ್ರ ಅವಕಾಶ

ಹಾಸನ ಏ.೨೭ :- ಕೋವಿಡ್ ನಿಯಂತ್ರಣಕ್ಕಾಗಿ  ಜನತಾ ಲಾಕ್‌ಡೌನ್ ಜಾರಿಯಲ್ಲಿದ್ದು ಈ ಅವಧಿಯಲ್ಲಿ ಸರ್ಕಾರದ ನಿರ್ದೇಶನದಂತೆ ಅಗತ್ಯ ಸೇವೆಗಳಿಗೆ ಬೆಳಗ್ಗೆ ೬ ರಿಂದ ೧೦ ರವರೆಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ನೀಡಿದ್ದಾರೆ.



ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಲಾಕ್‌ಡೌನ್ ಅನುಷ್ಠಾನಗೊಳಿಸುವ ಕುರಿತು ಎಲ್ಲಾ ತಾಲ್ಲೂಕು ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು  ಕೊವಿಡ್ ಲಾಕ್‌ಡೌನ್ ವೇಳೆ ಸರ್ಕಾರದ ಆದೇಶದವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚನೆ ನೀಡಿದರು.

  

ಲಾಕ್‌ಡೌನ್ ಅವಧಿಯಲ್ಲಿ ಹೋಟೆಲ್‌ಗಳಲ್ಲಿ ಪ್ರತಿನಿತ್ಯ ಬೆ.೬ ರಿಂದ ೧೦ ಗಂಟೆ, ಮಧ್ಯಾಹ್ನ ೧.೩೦ ರಿಂದ ೨.೩೦ ರವರೆಗೆ ಮತ್ತು ಸಂಜೆ ೭.೩೦ ರಿಂದ ೮.೩೦ ರವರೆಗೆ ಮಾತ್ರ ಪಾರ್ಸಲ್ ನೀಡಲು  ಅವಕಾಶ ನಿಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮದ್ಯದಂಗಡಿಗಳಲ್ಲಿ ಬಾರ್‌ಗಳಲ್ಲಿ  ಬೆಳಿಗ್ಗೆ ೬ ರಿಂದ ೧೦ ಗಂಟೆಗೆ ಮಾತ್ರ ಪಾರ್ಸಲ್ ಪಡೆಯಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು


ಕೆಲವು ದಿನಗಳ ಮಟ್ಟಿಗೆ ಸೋಂಕಿತರ  ಕುಟುಂಬ ಸದಸ್ಯರನ್ನು ಮಾತ್ರ ಕೋವಿಡ್ ಪ್ರಾಥಮಿಕ ಸಂಪರ್ಕಿತರನ್ನಾಗಿ  ಪರಿಗಣಿಸಿ ತಪಾಸಣೆ ನಡೆಸುವಂತೆ ತಿಳಿಸಿದರು.


ತಾಲ್ಲೂಕು ಕೋವಿಡ್ ಆಸ್ಪತ್ರೆ  ಕೋವಿಡ್ ಕೇರ್ ಕೇಂದ್ರಗಳಲ್ಲಿರುವ ಸೋಂಕಿತರಿಗೆ ಗುಣಮಟ್ಟದ ಪೌಷ್ಠಿಕ ಆಹಾರವನ್ನು ಕಡ್ಡಾಯವಾಗಿ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದರು.


ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್‌ಗಳನ್ನು ಹೆಚ್ಚಿಸುವಂತೆ ಅವರು ನಿದೇಶನ ನೀಡಿದರು.


ರೆಮ್‌ಡಿಸಿವರ್ ಚುಚ್ಚುಮದ್ದನ್ನು ಅಗತ್ಯವಿದ್ದವರಿಗೆ ಮಾತ್ರ ನೀಡಬೇಕು  ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ  ಮಾಸ್ಕ್ ಧರಿಸದೇ ಓಡಾಡುವವರಿಗೆ ಆಯಾಯ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ   ಕಡ್ಡಾಯವಾಗಿ ದಂಡ ವಿಧಿಸಬೇಕು ಎಂದು ತಿಳಿಸಿದರು.


ಕಟ್ಟಡ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ರೈತರು ಹಾಗೂ  ಕಾರ್ಮಿಕರಿಗೆ ಲಾಕ್ ಡೌನ್ ವೇಳೆಯಲ್ಲಿ  ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದರು.


ಹೋಮ್ ಐಸೂಲೇಶನ್ ಹಾಗೂ  ಕ್ವಾರಂಟೈನ್‌ನಲ್ಲಿರುವ ಸೋಂಕಿತರ ಮನೆಗಳಗೆ ಪ್ರತಿನಿತ್ಯ ಭೇಟಿ ನೀಡಿ ಆರೋಗ್ಯ ಕಡ್ಡಾಯವಾಗಿ ವಿಚಾರಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು  ತಿಳಿಸಿದರು.


ಅರಸೀಕೆರೆ ಹಾಗೂ ಚನ್ನರಾಯಪಟ್ಟಣದ ಸೊಂಕಿತರು ಕೋವಿಡ್ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೂ ದಾಖಲಿಸಬಹುದಾಗಿದೆ  ಅಗತ್ಯವಿದ್ದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳನ್ನು ಕೋವಿಡ್ ಕೇರ್‌ಗಳನ್ನಾಗಿ ಪರಿವರ್ತಿಸುವಂತೆ ಸೂಚನೆ ನೀಡಿದರು. 


ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್ ನಂದಿನಿ, ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ಆರ್. ಗಿರೀಶ್ ನಂದನ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.


Post a Comment

Previous Post Next Post