ಆಲೂರಿನಲ್ಲಿ ಸೋಮವಾರ ಅತಿಹೆಚ್ಚು ಕರೋನಾ ಪ್ರಕರಣಗಳು ದಾಖಲಾಗಿದು ಈ ಪ್ರಕರಣಗಳಲ್ಲಿ ಆಲೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ೯ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ .
ಕರೋನಾ ಎರಡನೇ ಅಲೆ ಉಲ್ಬಣದ ಬಳಿಕ ರ‍್ಕಾರದ ಆದೇಶದನ್ವಯ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಆಲೂರು ಪೊಲೀಸ್ ಠಾಣೆಯ ಪೋಲಿಸರು ಕರ‍್ಯಪ್ರವೃತ್ತರಾಗಿದ್ದು ವಾರಾಂತ್ಯದ ರ‍್ಫ್ಯೂನಲ್ಲಿ ಕಟ್ಟುನಿಟ್ಟಿನ ಜಾರಿಗಾಗಿ ಠಾಣೆಯ ಪೊಲೀಸರು ರಸ್ತೆಯಲ್ಲಿ ನಿಂತು ವಾಹನಗಳ ತಪಾಸಣೆ ಹಾಗೂ ಕರೋನಾ ಜಾಗೃತಿ ಕರ‍್ಯಕ್ರಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು .
ಸೋಮವಾರ ಒಂದೇ ದಿನ ೯ಮಂದಿಗೆ ಸೋಂಕು ದೃಢ ಪಟ್ಟಿರುವುದರಿಂದ ಸದ್ಯದ ಮಟ್ಟಿಗೆ ಪೋಲಿಸ್ ಠಾಣೆಯನ್ನು ಉಳಿದ ಸಿಬ್ಬಂದಿಗಳ ಹಾಗೂ ಸರ‍್ವಜನಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಸಮೀಪದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗೆ ಸ್ಥಳಾಂತರಿಸಲಾಗಿದೆ .
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆಲೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಹೆಚ್ ಆರ್ ತಿಮ್ಮಯ್ಯ ಕೊೇವಿಡ್ ೧೯ ರ ನಿಯಮಾನುಸಾರ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಸದ್ಯ ಪೊಲೀಸ್ ಸಿಬ್ಬಂದಿಗಳನ್ನು ಹೋಪ್ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗಳ ಸಂರ‍್ಕದಲ್ಲಿದ್ದು ಅವರೂ ಸಹ ತಪ್ಪದೆ ಕೋವಿಟ್ಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಕೋರಿದ್ದಾರೆ .