ಹೊಳೆನರಸೀಪುರ:- ಪುರಸಭಾ ವ್ಯಾಪ್ತಿಯ ೧೭ ನೇ ವಾರ್ಡಿನಲ್ಲಿರುವ ೨೯೫೭೪೦೭೦೧೩೧ ‘ಬಿ’ ಸಂಖ್ಯೆಯ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಡಬೇಕೆಂದು ಹತ್ತಾರು ವರ್ಷದಿಂದ ಈ ಭಾಗದ ಜನರು ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಇಲಾಖೆಗೆ ಮನವಿಯನ್ನು ಸಲ್ಲಿಸಿದ್ದರು.
ಈ ಮನವಿಯನ್ನು ಪರಿಶೀಲಿಸಿದ ಸಿ.ಡಿ.ಪಿ.ಓ ಪ್ರಸನ್ನಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿಕೊಡಲು ಪ್ರಯತ್ನಿಸುತ್ತೇನೆ. ಈ ಸಂಬAಧವಾಗಿ ಶಾಸಕರ ಗಮನಕ್ಕೆ ತರಲಾಗುವುದು ಮತ್ತು ಪುಸಭೆಯ ಅಧಿಕಾರಿಗಳಿಗೆ ಖಾಲಿ ಇರುವ ಒಂದು ನಿವೇಶನವನ್ನು ಗುರುತಿಸಿಕೊಡುವಂತೆ ಇಲಾಖೆ ವತಿಯಿಂದ ಪತ್ರ ಬರೆಯುತ್ತೇವೆ. ಇಲ್ಲಿ ನಾಗರೀಕರು ಗುರುತಿಸಿರುವ ನಿವೇಶನ ಖಾಲಿ ಇದ್ದರೆ ಇದೆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.
ಸ್ಥಳೀಯ ನಾಗರೀಕ ಯೋಗೇಶ್ ಮಾತನಾಡಿ ಈ ಭಾಗದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಸ್ವಂತ ಕಟ್ಟಡವಿಲ್ಲದೆ ಎರಡನೆ ಮಹಡಿಯ ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದಾರೆ. ಎರಡನೆ ಮಹಡಿಯಲ್ಲಿ ಪಾಠ ಪ್ರವಚನ ನಡೆಯುವುದರಿಂದ ಮಕ್ಕಳು ಮೇಲೆ ಹತ್ತಲು ಇಳಿಯಲು ತುಂಬಾ ಕಷ್ಠವಾಗುತ್ತಿದೆ. ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಜವಾಬ್ದಾರಿ ಯಾರು ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಈ ಕೇಂದ್ರಕ್ಕೆ ೧೫-೨೦ ಮಕ್ಕಳು ಬರುತ್ತಿದ್ದು, ಸ್ವಂತ ಕಟ್ಟಡ ಅವಶ್ಯಕತೆ ಇದೆ. ಶಾಸಕರು ಹಾಗೂ ಪುರಸಭಾ ಅಧಿಕಾರಿಗಳು ತುರ್ತಾಗಿ ಇತ್ತ ಗಮನ ಹರಿಸಬೇಕು. ಸುತ್ತಮುತ್ತ ವಾಸದ ಮನೆಗಳಿದ್ದು, ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಲು ಯಾರು ಸಹಕರಿಸುತ್ತಿಲ್ಲ. ಇರುವ ಬಾಡಿಗೆದಾರರು ಅಂಗನವಾಡಿ ಕೇಂದ್ರವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಯಾರು ಸಹ ಅಂಗನವಾಡಿ ಕೇಂದ್ರವನ್ನು ನಡೆಸಲು ಬಾಡಿಗೆ ಕೊಡುತ್ತಿಲ್ಲ. ಮಕ್ಕಳು ಎಲ್ಲಿಗೆ ಹೋಗಬೇಕು, ಕೆಲವು ಅಂಗನವಾಡಿ ಕೇಂದ್ರಗಳು ೫೦೦ ಮೀ ದೂರದಲ್ಲಿವೆ ಆದ್ದರಿಂದ ಚಿಕ್ಕ ಮಕ್ಕಳನ್ನು ಬೇರೆ ಕಡೆ ಕಳಿಸಲು ಕಷ್ಠವಾಗುತ್ತಿದೆ. ದಯವಿಟ್ಟು ಈ ಬೀದಿಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರವನ್ನು ಇಲ್ಲೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ರತ್ನಮ್ಮ ಮಾತನಾಡಿ ಈ ಹಿಂದೆ ಪುರಸಭೆಯ ಹಲವಾರು ಅಧ್ಯಕ್ಷರು ಸುನಂದಾ ಕೋ- ಆಪರೇಟಿವ್ ಸೊಸೈಟಿ ರಸ್ತೆಯ ನಾಗೇಶ್ ಅವರ ರಾಗಿಗಿರಣಿಗೆ ಹೋಗುವ ರಸ್ತೆಯ ತಿರುವಿನಲ್ಲಿರುವ ನಿವೇಶನ ಖಾಲಿ ಇದ್ದು ಈ ಜಾಗವನ್ನು ಅಂಗನವಾಡಿ ಕೇಂದ್ರಕ್ಕಾಗಿ ಮೀಸಲಿಟ್ಟಿದ್ದೇವೆ ಎಂದು ಹೇಳಿದ್ದರು. ಈ ಸ್ಥಳಕ್ಕೆ ಬಂದ ಪುರಸಭಾ ಅಧಿಕಾರಿಗಳೆಲ್ಲರು ಅಂಗನವಾಡಿ ಕೇಂದ್ರ ನಿರ್ಮಿಸಿಕೊಡಲು ಮೀಸಲಿಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಹಲವರು ಇದರ ಸುತ್ತಲು ಬೇಲಿ ನಿರ್ಮಿಸಿ ನನ್ನದೆ ಈ ನಿವೇಶನ ಎಂಬುದಾಗಿ ಎಲ್ಲರ ಮೇಲು ಹರಿಹಾಯುತ್ತಿದ್ದಾರೆ. ಯಾರಿಗು ಇದನ್ನು ಕೊಡದೆ ಇಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಿಕೊಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
