ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ನಿವಾರಿಸಲು ಜಿಲ್ಲಾಡಳಿತ ಸದಾ ಸಿದ್ದ

ಹಾಸನ :- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳನ್ನು ನಿವಾರಿಸಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್  ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ  ನಿಯಂತ್ರಣ ಕುರಿತ ಸಭೆಯಲ್ಲಿ ಮಾತನಾಡಿದ ಅವರು ಶೋಷಿತ ಜನ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಹಾಗೂ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು ಎಂದರು.

ಸಭೆಯಲ್ಲಿ ಜೀತ ವಿಮುಕ್ತರ ಪುನರ್ವಸತಿ ಜಮೀನು ಮಂಜೂರಾತಿ ದೌರ್ಜನ್ಯ ನಿಯಂತ್ರಣ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸೇರಿದಂತೆ ಅನೇಕ ವಿಚಾರಗಳನ್ನ ಕುರಿತು ಚರ್ಚಿಸಿಲಾಯಿತು.

ಎಲ್ಲರ ಮನವಿಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿ ಅವರು ಭೂಮಿಯ ವಿಚಾರಕ್ಕೆ ಸಂಬAಧಿಸಿದ ಪ್ರಕರಣಗಳನ್ನು ಕಾನೂನಿನ ಪರಿಮಿತಿಯೊಳಗೆ ಆದಷ್ಟು ಶೀಘ್ರವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು. ಇವುಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುವುದು ಎಂದರು ಗಂಗೂರು ಹಾಸನ ತಾಲ್ಲೂಕಿನ ಜೀತಮುಕ್ತರ ಪುನರ್ವಸತಿಗೆ ಸಂಬAಧಿಸಿದAತೆ ಹಿಂದೆ ನೀಡಲಾಗಿದ್ದ ಜಾಗಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ಕುರಿತು ಫಲಾನುಭವಿಗಳ ಪುರ್ನ ಪಟ್ಟಿಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ಸ್ಮಶಾನ, ಕುಡಿಯುವ ನೀರು ಪೂರೈಕೆ, ರಸ್ತೆ ಸಂಪರ್ಕ ಮತ್ತಿತರ ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತು ಶೀಘ್ರವಾಗಿ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದವರು ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ಸಭೆಗಳನ್ನು ನಡೆಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಕುಂದುಕೊರತೆ ಶೀಘ್ರ ವಿಲೇವಾರಿಗೆ ಶ್ರಮಿಸುವುದಾಗಿ ಹೇಳಿದರು.

   ದಲಿತ ಸಂಘಟನೆಗಳ ಮುಖಂಡರಾದ ಈರಪ್ಪ ,ಸಂದೇಶ್ ,ಕೃಷ್ಣದಾಸ್ ,ಶಂಕರ್ ರಾಜ್, ಪುಟ್ಟರಾಜ್, ಸತೀಶ್ ,ಅಂಬುಗ ಮಲ್ಲೇಶ್, ಚೌಡಳ್ಳಿ ಜಗದೀಶ್ , ಹೆತ್ತೂರುನಾಗರಾಜ್, ಹೂರಾಜ ಗೊರೂರು ಹೇಮಂತ್ ರಾಜ್ ಮತ್ತಿತರರರು ಹಲವು ಪ್ರಮುಖ ವಿಷಯಗಳ ಕುರಿತು ಗಮನ ಸೆಳೆದರು.

ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೊಳವೆ ಬಾವಿ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ದಲಿತ ಮುಖಂಡರುಗಳು ದೂರಿನ ಅನ್ವಯ ತನಿಖೆ ನಡೆಸಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ  ತಿಳಿಸಿದರು

 ಆಲೂರು ತಾಲ್ಲೂಕಿನ ಗಂಗೂರು ಹಾಗೂ ಹಾಸನ ತಾಲ್ಲೂಕುಗಳಲ್ಲಿ ಅನೇಕ ದಶಕಗಳ ಹಿಂದೆ ನಡೆದ ಜೀತ ವಿಮುಕ್ತ ಪ್ರಕರಣದಲ್ಲಿ ಫಲಾನುಭವಿಗಳಿಗೆ ಈವರೆಗೂ ಪುನರ್ವಸತಿ ಕಲ್ಪಿಸಲಾಗಿಲ್ಲ ಅವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಯಾವುದೇ ರೀತಿಯ ಆರ್ಥಿಕ ಹಾಗೂ ಯೋಜನೆಗಳ ನೆರವು ದೊರೆತಿಲ್ಲ ನೀಡಲಾಗಿದ್ದು ಭೂಮಿಯಿಂದಲೂ  ತೆರವುಗೊಳಿಸಲಾಗಿದೆ ಮಂಜೂರಾಗಿದ್ದ ಜಮೀನಿನಲ್ಲಿ ಬೇರೆಯ ಅನುಭವದಲಿದ್ದಾರೆ ಹಾಗಾಗಿ ಮಾನವೀಯ ದೃಷ್ಟಿಯಿಂದ ಈ ಕುಟುಂಬಗಳಿಗೆ ಬದುಕುವ  ದಾರಿ ತೋರಿ ಎಲ್ಲರಿಗೂ  ಸರ್ಕಾರಿ ಜಮೀನು ಮಂಜೂರು ಮಾಡಿಕೊಡಿ ಎಂದು ದಲಿತ ಮುಖಂಡರಾದ ಸಂದೇಶ್, ಕೃಷ್ಣದಾಸ್, ಈರಪ್ಪ , ಮತ್ತಿತರರು ಮನವಿ ಮಾಡಿದರು.



ಈರಪ್ಪ, ಮರಿಜೋಸೆಫ್ ,ಗೊರೂರು ಹೇಮರಾಜ್ ಮತ್ತಿತರರು ಹೇಮಾವತಿ ಜಲಾಶಯ ಪುನರ್ವಸತಿ ಫಲಾನುಭವಿಗಳ ಸಮಸ್ಯೆ ಭೂಮಂಜೂರಾತಿ    ಇವುಗಳ ಖಾತೆ ಮಾಡಿಸಿಕೊಳ್ಳುಲು ಆಗಿರುವ ತೊಡಕುಗಳ ಬಗ್ಗೆ ಗಮನ ಬೆಳೆದರು ಹಲವು ಕಡೆಯಲ್ಲಿ ಅಕ್ರಮ ಸಕ್ಷಮಕ್ಕೆ ಅರ್ಜಿ ಸಲ್ಲಿಸಿದರೂ ಸಕಾಲದಲ್ಲಿ ವಿಲೇವಾರಿಯಾಗಿಲ್ಲ ಮಂಜೂರಾಗಿರುವ ಜಮೀನು ಉಳ್ಳವರು ಅನುಭವದಲ್ಲಿದ್ದ ಇವುಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಶಂಕರ್ ರಾಜ್ ಮತ್ತಿತರು ಶತಮಾನದ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಸ್ಪöಶ್ಯರ ಶಿಕ್ಷಣ ಸೌಲಭ್ಯಕ್ಕಾಗಿ ಮಂಜೂರು ಮಾಡಿದ್ದ ಹಾಗೂ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಬೇಟಿ ನೀಡಿದ ಎ.ಕೆ.ಬೋರ್ಡಿಂಗ್ ಹೋಂ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ಮಂಜೂರಾಗಿದ್ದು ಇದನ್ನು ೨೦ ಕೋಟಿ ರೂಪಾಯಿಗೆ ಏರಿಕೆ ಮಾಡಬೇಕು ಹಾಗೂ ನಗರಸಭೆಯಲ್ಲಿ ಪೌರಕಾರ್ಮಿಕ ನಾಗಿ ಮೃತಪಟ್ಟಿರುವ ಕುಟುಂಬವೊAದಕ್ಕೆ ಅನುಕಂಪದ ಆಧಾರದ ಮೇಲೆ  ಕೆಲಸ  ಒದಗಿಸಬೇಕು  ಎಂದು ಮನವಿ ಮಾಡಿದರು.

ದುದ್ದ ಹೋಬಳಿಯ ತಿರುಪತಿಹಳ್ಳಿ ಕುಡಿಯುವ ನೀರಿನ ಸಮಸ್ಯೆ ಗೊರೂರಿನಲ್ಲಿ ಹೇಮಾವತಿ ಜಲಾಶಯದ ವಿಭಾಗದ ಪ್ರದೇಶದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಜಾಗ ಒದಗಿಸುವುದು. ಆಲೂರು ತಾಲೂಕು ಕಚೇರಿ ಎದುರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಆವಕಾಶ. ಅಕ್ರಮ ಗಣಿಗಾರಿಕೆ ತಡೆ. ಗ್ರಾಮ ಠಾಣಾ ವ್ಯಾಪ್ತಿಯ ಆಚೆಇರುವ ಜಾಗಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ತರುವುದು, ಮಂಜೂರಾಗಿರುವ ಕುಲುವಾಡಿಕೆ ಜಮೀನಿನಲ್ಲಿ ಬಿಡಿಸಿಕೊಡುವುದು, ಸ್ಮಶಾನ ಭೂಮಿ ಉಳಿಸಿಕೊಡಲಾಗುವುದು ಸೇರಿದಂತೆ ದಲಿತ ಮುಂಖಡರು ಸಭೆಯಲ್ಲಿ ಮನವಿ ಮಾಡಿದರು. 

ಪುಟ್ಟರಾಜು ಅವರು ಸಿದ್ದಯ್ಯ ನಗರ ಹಾಗೂ ಅಂಬೇಡ್ಕರ್ ನಗರದ ರಾಜಕಾಲುವೆಗಳ ಬಳಿ ದಲಿತ ಕುಟುಂಬಗಳಿಗೆ ಸೇರಿದ ಮನೆಗಳನ್ನು ಕೆಡವಲಾಗಿದ್ದ್ದು ಸೂಕ್ತ ಪುನರ್ವಸತಿ ಕಲ್ಪಿಸಿ ಎಂದು ಅವರು ಮನವಿ ಮಾಡಿದರು.

ಚೌಡಳ್ಳಿ ಜಗದೀಶ್ ಮತ್ತಿತರರು ದಲಿತ ಕುಟುಂಬ ರಸ್ತೆಬದಿ ನಡೆಸುತ್ತಿದ್ದ ಮೀನು ಮಾರಾಟ ಕೇಂದ್ರವನ್ನು ಹಾನಿಮಾಡಿದ್ದು ಸೂಕ್ತ ಕ್ರಮ ವಹಿಸಬೇಕು ಹಾಗೂ ಪರಿಯಾಯ ಸ್ಥಳಾವಕಾಶ ಒದಗಿಸಬೇಕು ಎಂದು ಒತ್ತಾಯಿಸಿದರು. 

ಹೂರಾಜ್ ರವರು ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಹಾಜರಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾಕ್ಟರ್ ಬಸವರಾಜ್ ಅವರು ಹಕ್ಕಿಪಿಕ್ಕಿ ಸಮುದಾಯಕ್ಕೆ ಅರಣ್ಯ ಉತ್ಪನ್ನಗಳನ್ನು ಸಂರಕ್ಷಿಸಲು ಅವಕಾಶ ಒದಗಿಸಲು ಪ್ರಯತ್ನಿಸಲಾಗುವುದು ಎಂದರು ಅದೇರೀತಿ ಕೇಂದ್ರ ಸರ್ಕಾರದ ರಾಷ್ಟಿçÃಯ ಔಷಧಿ ಗಿಡಗಳ ಅಭಿವೃದ್ಧಿ ಯೋಜನೆಯ ಅನುಕೂಲವನ್ನು ಪಡೆಯುವಂತೆ ಮನವಿ ಮಾಡಿದರು .

ಸಭೆಯಲ್ಲಿ ಪೊಲೀಸ್ ಇಲಾಖೆಗೆ ಸಂಬAಧಿಸಿ ಪ್ರಕರಣವಾರು ಸುಧೀರ್ಘ ಚರ್ಚೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ದೌರ್ಜನ್ಯದ ಬಗ್ಗೆ  ಹಲವು ಪ್ರಕರಣಗಳು ಬಂದಿವೆ  ಬಹುತೇಕ ಪ್ರಾರ್ಥಮಿಕ ಮಾಹಿತಿ ವರದಿ ನೀಡಲಾಗಿದೆ ಇದಕ್ಕೆ ಸೂಕ್ತ ಕ್ರಮವನ್ನು ಜರುಗಿಸಲಾಗುತ್ತಿದೆ. ಕೆಲವು ಪ್ರಕರಣಗಳು ಇನ್ನು ಠಾಣೆಗಳಲ್ಲಿ ವರದಿಯಾಗಿಲ್ಲ ಅವುಗಳನ್ನು ದಾಖಲಿಸಿದರೆ ಪರಿಹಾರ ಸೂಚಿಸಬಹುದು ಎಂದರು.

ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಸಂದರ್ಭ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸಂಘಟನೆ ಮುಖ್ಯಸ್ಥರು ಮನವಿ ಮಾಡಿದರು. ಇದಕ್ಕೆ ಎಸ್.ಪಿ ಅವರು ಈ ರೀತಿ ಘಟನೆಗಳು ನಡೆಯುವ ಮುನ್ಸೂಚನೆ ಇದ್ದರೆ ಮುಂಚಿತವಾಗಿ ತಿಳಿಸಿ.  ಆದಷ್ಟು ಸಿ.ಸಿ ಕ್ಯಾಮೆರಾ ಇರುವ ಕಡೆಗಳಲ್ಲಿ ಬಂಟಿಕ್ಸ್ಗಳನ್ನು ಅಳವಡಿಸಿ ಎಂದು ಮನವಿ ಮಾಡಿದರು. 

 ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ  ಉಪವಿಭಾಗಾಧಿಕಾರಿ ಬಿ.ಎ ಜಗದೀಶ್ ,ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ಜಂಟಿ ಕೃಷಿ ನಿರ್ದೇಶಕರಾದ ರವಿ ತೋಟಗಾರಿಕೆ ಉಪನಿರ್ದೇಶಕರಾದ ಯೋಗೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ದಲಿತ ಸಂಘಟನೆಗಳ ಪ್ರಮುಖರು ಹಾಜರಿದ್ದರು.

Post a Comment

Previous Post Next Post