೨೩ ವರ‍್ಡ್ ಗಳಲ್ಲಿ ಕಟ್ಟುನಿಟ್ಟಿನ ಕ್ರಮದೊಂದಿಗೆ ಬೆಳಗ್ಗೆ ೭ ರಿಂದ ಮತದಾನ ಪ್ರಾರಂಭವಾಯಿತು.
ಕೊರೋನಾದ ನಡುವೆಯೂ ಸಹ ಉತ್ಸಾಹದಿಂದ ಮತದಾನ ಮಾಡಲು ಆಗಮಿಸಿದ ಮತದಾರರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬದಂತ ಪ್ರತಿಯೊಬ್ಬ ಮತದಾರರಿಗೂ ಚುನಾವಣೆ ಸಿಬ್ಬಂದಿಗಳು ರ‍್ಮಲ್ ಸ್ಕ್ಯಾನಿಂಗ್ ಹಾಗೂ ಸಾಮಾಜಿಕ ಅಂತರದ ಮೂಲಕ ಮತದಾನ ಮಾಡಿದರು.
ಯಾವುದೇ ರೀತಿಯಲ್ಲಿ ಗೊಂದಲ ಆಗದಂತೆ ೨೩ ಚುನಾವಣೆಯ ಕೇಂದ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆಬಿಗಿ ಪೋಲೀಸ್ ಬಂಧೋಬಸ್ತ್ ಮಾಡಲಾಗಿತ್ತು.
ಸೂಕ್ಷ್ಮ ಮತಗಟ್ಟೆ ಕೇಂದ್ರಕ್ಕೆ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಬೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು ಯಾವುದೇ ರೀತಿಯ ಗೊಂದಲ ಆಗದಂತೆ ವಿಷೇಶ ಭದ್ರತೆ ಕಲ್ಪಿಸಲಾಗಿದೆ.
ಮತದಾನ ಸಮಯವನ್ನು ಒಂದು ಗಂಟೆ ವಿಸ್ತರಣೆ ಮಾಡುವಂತೆ ಚುನಾವಣೆ ಆಯೋಗ ವಿಸ್ತರಣೆ ಮಾಡಿದ್ದು,೫-ರಿಂದ ೬_ರವರೆಗೆ ಸುಮಾರು ೭೪ ಜನ ಕೋವೀಡ್ ಸೊಂಕಿತರಿಗೆ ಪಿಪಿಇ ಕಿಟ್ ಧರಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಹುಲ್ಲಳ್ಳಿ ಸುರೇಶ್ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.
ಡಿವೈಎಸ್ ಪಿ ಹಾಗೂ ಸಿಪಿಐ ಅವರ ನೇತೃತ್ವದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಭಸ್ತ್ ಕಲ್ಪಿಸಲಾಗಿತ್ತು.