ನೀರಾವರಿ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಕ್ರಮವಹಿಸಲು ಶಾಸಕ ಹೆಚ್ .ಡಿ ರೇವಣ್ಣ ಸೂಚನೆ

ಹಾಸನ :- ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸುವಂತೆ  ಹಾಗೂ ಭೂಮಿ ಕಳೆದುಕೊಂಡವರಿಗೆ ತ್ವರಿತವಾಗಿ ಪರಿಹಾರ  ಧನ ಬಿಡುಗಡೆ ಮಾಡುವಂತೆ ಶಾಸಕರಾದ ಹೆಚ್ .ಡಿ  ರೇವಣ್ಣ ಅವರು ತಿಳಿಸಿದ್ದಾರೆ.



ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ತಾಲ್ಲೂಕಿನ ವಿವಿಧ ನೀರಾವರಿ ಯೋಜನೆಗಳಿಗೆ ಸಂಬAದಿಸಿದAತೆ  ಭೂಸ್ವಾಧೀನ ಪ್ರಕ್ರಿಯೆಗಳ ಕುರಿತು ನಡೆದ  ಸಭೆಯಲ್ಲಿ  ಮಾತನಾಡಿ ಅವರು ಕುಡಿಯುವ ನೀರು, ಕೆರೆ ತುಂಬಿಸುವುದು, ಏತ ನೀರಾವರಿ ಸೇರಿದಂತೆ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಅವರು  ಸೂಚಿಸಿದರು.

ಯಗಚಿ, ಕಾಚೇನಹಳ್ಳಿ , ಚಾಕೇನಹಳ್ಳಿ ಅಮಾನಿಕೆರೆ, ಹುಚ್ಚರ ಕೊಪ್ಪಲು, ಕಾಮಸಮುದ್ರ ಏತ ನೀರಾವರಿ ಯೋಜನೆಗಳು ಹಾಗೂ  ದುದ್ದ, ಶಾಂತಿಗ್ರಾಮ ಮಾವಿನಕೆರೆ, ಹೊಂಗೆರೆ  ಅಂಚಿಹಳ್ಳಿ, ಹಳೆಕೋಟೆ ನೀರಾವರಿ ಯೋಜನೆಗಳಲ್ಲಿ ರೈತರಿಗೆ ಭೂಮಿಯ ಪರಿಹಾರವನ್ನು  ನೀಡಿ ಆದಷ್ಟು ಬೇಗ ಕಾಮಗಾರಿ ಮುಗಿಸಿ ಜನರಿಗೆ ಕುಡಿಯಲು ಹಾಗೂ ಕೃಷಿ ಉದ್ದೇಶಗಳಿಗೆ ನೀರು ಒದಗಿಸಿ ಎಂದು ಅವರು ಕೋರಿದರು.

ಭೂಸ್ವಾಧೀನ ಹಾಗೂ ಭೂ ಪರಿಹಾರ ವಿತರಣೆಗೆ ಸಂಬAಧಿಸಿದAತೆ ಕಂದಾಯ ಇಲಾಖೆ, ಸರ್ವೆ ಹಾಗೂ ವಿಶೇಷ ಭೂಸ್ವಾಧೀನ ಕಚೇರಿ ನಡುವೆ ಸಮನ್ವಯತೆ ಅಗತ್ಯವಿದ್ದು ಸಂಘಟಿತ ತಂಡವಾಗಿ ಕಾರ್ಯ ನಿರ್ವಹಿಸಿ ಎಂದು ಹೆಚ್ ಡಿ ರೇವಣ್ಣ ಹೇಳಿದರು.

ಬಹುತೇಕ ಯೋಜನೆಗಳಲ್ಲಿ ಭೂ ಪರಿಹಾರ ಹಾಗೂ ಭೂಮಿ ಖರೀದಿಗೆ  ಹಣ ಲಭ್ಯವಿದೆ ಮುಖ್ಯಮಂತ್ರಿಯವರು ಹೊಸದಾಗಿ ೧೦ ಕೋಟಿ ರೂ ಅನುದಾನ ಒದಗಿಸಿದ್ದಾರೆ ಹಾಗಾಗಿ ಆ ಪ್ರಕ್ರಿಯೆ ಬೇಗ ಮುಗಿಸಲು ಯಾವುದೇ ಅಡ್ಡಿ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಹಳೆಕೋಟೆ ,ಕಾಮಸಮುದ್ರ ಹಾಗೂ ಕಾಂತರಾಜಪುರ ಭಾಗಗಳಿಗೆ ಏತನೀರಾವರಿ ಯೋಜನೆಗಳಿಂದ ಸುಮಾರು ೮ ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಆದ್ದರಿಂದ ಈ ಯೋಜನೆಗಳ ಪ್ರಕ್ರಿಯೆಯನ್ನು ವೇಗವಾಗಿ ಅನುಷ್ಠಾನಗೊಳಿಸಲು  ಕ್ರಮವಹಿಸುವಂತೆ ಶಾಸಕರು ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗುತ್ತಿದ್ದು ಶೀಘ್ರವೇ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ನಿಭಾಯಿಸುವಂತೆ ಮನವಿ ಮಾಡಿದರು.

ದುದ್ದ ಶಾಂತಿಗ್ರಾಮ ಹೋಬಳಿಯ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ  ಅರಣ್ಯ ಇಲಾಖೆಯಿಂದ ಇರುವ ಅಡೆತಡೆಗಳನ್ನು ಬಗೆಹರಿಸಿ  ಆದಷ್ಠು ಬೇಗ ನೀರು ಒದಗಿಸಿ ಎಂದರು. 

ವಿಶೇಷ ಭೂ ಸ್ವಾಧೀನ ಪ್ರಕ್ರಿಯೆಗೆ ನಾಲ್ಕು ಗ್ರಾಮಲೆಕ್ಕಿಗರನ್ನು  ತಾತ್ಕಾಲಿಕವಾಗಿ ನಿಯೋಜಿಸಿ ಎಂದು ಹೆಚ್.ಡಿ ರೇವಣ್ಣ ಅವರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಿಗದಿ ಮಾಡಿ ರೈತರಿಂದ ನೇರ ಖರೀದಿಗೆ ದರ ನಿಗದಿಪಡಿಸುವಂತೆ  ಶಾಸಕರಾದ ಹೆಚ್.ಡಿ ರೇವಣ್ಣ ಮನವಿ ಮಾಡಿದರು.

ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಮಾತನಾಡಿ ಏಪ್ರಿಲ್ ೧೫ರಂದು ಈಗಾಗಲೇ  ೧೧ (೧)ಅಧಿಸೂಚನೆ ಪೂರ್ಣಗೊಂಡಿರುವ ಯೋಜನೆಗಳಿಗೆ ನೇರ ಖರೀದಿಗೆ ಸಂಬAಧಿಸಿದAತೆ ಕಾಯ್ದೆ ಪ್ರಕಾರ ದರ ನಿಗಧಿಗೆ ಸಭೆ ನಡೆಸಲಾಗುವುದು ಒಪ್ಪಿದ ರೈತರಿಂದ ಭೂಮಿ ಖರೀದಿಸಲಾಗುವುದು ಉಳಿದ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆ ಮೂಲಕ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದರು.

ಏಪ್ರಿಲ್ ೧೫ ನಂತರವೂ ಆಗಿಂದಾಗೆ ಸಭೆಗಳನ್ನು  ನಡೆಸಲು ತಾವು ನಿರ್ಧರಿಸಿದ್ದು, ವಿಶೇಷ ಭೂಸ್ವಾಧೀನಾಧಿಕಾರಿಗಳು ಸಬ್‌ರಿಜಿಸ್ಟರ್ ಕಚೇರಿಯಲ್ಲಿ ದರಪಟ್ಟಿ ಪಡೆದು ರೈತರ  ಅಭಿಪ್ರಾಯಗಳನ್ನು ಮಂಡಿಸಿದರೆ ದರ  ನಿಗದಿಪಡಿಸಬಹುದಾಗಿದೆ ಎಂದರು.

ಮುAದಿನ ದಿನಗಳಲ್ಲಿ ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳಿಗೆ ಚುರುಕು ನೀಡಲು  ಭೂಸ್ವಾಧೀನ ಪ್ರಕ್ರಿಯೆಗೆ ಪೂರಕವಾಗಿ ನಾಲ್ಕು ಗ್ರಾಮಲೆಕ್ಕಿಗರನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ  ಆರ್ ಗಿರೀಶ್ ಹೇಳಿದರು.

ಸಂಬAಧಪಟ್ಟ ಅನುಷ್ಠಾನ ಇಲಾಖೆಗಳು ಆಸಕ್ತಿಯಿಂದ ಕೆಲಸ ಮಾಡಬೇಕು ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡು ಬಾಕಿ ಕಡತಗಳ ವಿಲೇವಾರಿಗೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

     ಹಾಸನ ಚಿಕ್ಕಮಗಳೂರು ರೈಲ್ವೆ ಕಾಮಗಾರಿಗೆ ಬೇಲೂರು  ಪುರಸಭೆ ವ್ಯಾಪ್ತಿಯಲ್ಲಿನ ಮನೆಗಳಿಗೆ ಪರಿಹಾರ ನೀಡಲು ಪ್ರತ್ಯೇಕ ಕ್ರಿಯಾ ಯೋಜನೆ ತಯಾರಿಸುವಂತೆ ತಿಳಿಸಿದರು.

ವರ್ಷಗಟ್ಟಲೆ ಕಚೇರಿಗಳಲ್ಲಿ ಕಡತ ಇರಿಸಿಕೊಳ್ಳುವುದು ಬಿಟ್ಟು ಕಾಲಮಿತಿಯೊಳಗೆ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ವಿಶೇಷ ಭೂ ಸ್ವಾಧೀನಾಧಿಕಾರಿ ಮಂಜುನಾಥ್ ಅವರು ವಿವಿಧ ಯೋಜನೆಗಳಿಗೆ ಸಂಬAಧಿಸಿದAತೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಕಾವೇರಿ ನೀರವರಿ ನಿಗಮದ ಅಧಿಕಾರಿಗಳು,  ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ರೈಲ್ವೆ ಇಲಾಖೆ ಅಧಿಕಾರಿಗಳು , ಪುರಸಭೆ ಅಧಿಕಾರಿಗಳು ಸಭೆಯಲ್ಲಿ  ಹಾಜರಿದ್ದರು


Post a Comment

Previous Post Next Post