ಕಸಾಪ ಅಧ್ಯಕ್ಷ ಸ್ಥಾನಕೆ ಪತ್ರಕರ್ತ ಹೆತ್ತೂರು ನಾಗರಾಜ್ ನಾಮಪತ್ರ ಸಲ್ಲಿಕೆ


ಹಾಸನ: ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಬುಧವಾರ ಪತ್ರಕರ್ತ ಹೆತ್ತೂರು ನಾಗರಾಜ್ ತಮ್ಮ ಅಪಾರ ಬೆಂಬಲಿಗರೊAದಿಗೆ ತಾಲೂಕು ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೂ ಕೆಲ ಅಭ್ಯರ್ಥಿಗಳು ಜಾತಿ,ಹಣ,ಬಾಡೂಟ ಆಯೋಜನೆ ಮೂಲಕ ಮತ ಕೇಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದರು.


ನಾಡು,ನುಡಿ,ಸಾಹಿತ್ಯ,ಸಂಘಟನೆಗೆ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದವರು ಇಂದು ತೆರೆ ಮರೆಗೆ ಸರಿಯುವಂತಹ ಪರಿಸ್ಥಿತಿ ಪರಿಷತ್ತಿನಲ್ಲಿ ನಿರ್ಮಾಣವಾಗುತ್ತಿದ್ದು, ಜಾತಿ,ಉಪಜಾತಿಗಳ ಹೆಸರೇಳಿಕೊಂಡು ಪರಿಷತ್ತನ್ನು ಲಾಭದಾಯಕ ಕೇಂದ್ರವನ್ನಾಗಿಸಿಕೊಳ್ಳಲು ಕೆಲವರು ಹೊರಟ್ಟಿದ್ದಾರೆ ಎಂದು ದೂರಿದರು.

ಕಸಾಪ ಚುನಾವಣೆಯು ನಾಡು-ನುಡಿಯ ಚುನಾವಣೆಯಾಗಿದ್ದು, ನಿಜವಾಗಿಯು ಸಾಹಿತ್ಯ ತಿಳಿದವರು,ಸಾಂಸ್ಕೃತಿಕವಾಗಿ ದುಡಿದವರನ್ನು ಆಯ್ಕೆ ಮಾಡುವ ಗುರುತರ ಜವಾಬ್ಧಾರಿ ಮತದಾರರ ಮೇಲಿದ್ದು, ಯಾವುದೇ ಪೊಳ್ಳು ಭರವಸೆಗಳಿಗೆ, ಆಮಿಷಗಳಿಗೆ ತಮ್ಮ ಜವಾಬ್ಧಾರಿಯನ್ನು ಮರೆಯಬಾರದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಅದರದೇ ಆದ ಘನತೆ ಇದ್ದು, ಪರಿಷತ್ತನ್ನು ಪಾರದರ್ಶಕವಾಗಿರಲು,ಕ್ರಿಯಾಶೀಲವಾಗಿಸಿ ಕಸಾಪ ಘನತೆಯನ್ನು ಎತ್ತಿ ಹಿಡಿಯಬಲ್ಲ ಸಮರ್ಥ ಅಭ್ಯರ್ಥಿಯನ್ನು ಗುರುತಿಸಿ ಮತದಾರರು ಗೆಲ್ಲಿಸಿಕೊಳ್ಳಬೇಕೆ ಹೊರತು ಪರಿಷತ್ತಿನ ಘನತೆಯನ್ನು ಬೀದಿಗೆ ತರುವವರನ್ನಲ್ಲ ಎಂದರು.

ಇತ್ತೀಚಿನ ಕೆಲ ವರ್ಷಗಳಲ್ಲಿ ಜಿಲ್ಲಾ ಕಸಾಪ ಮೇಲೆ ಸಾಕಷ್ಟು ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಈ ವ್ಯವಸ್ಥೆ ಬದಲಾಗಬೇಕಿದೆ. ಕೆಲವರು ಪರಿಷತ್ತಿನ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟ್ಟಿದ್ದು, ಪರಿಷತ್ತು ಸಾಹಿತ್ಯ ಚಟುವಟಿಕೆಗಳಿಗಷ್ಟೇ ಸೀಮಿತವಾಗುವ ಸನ್ನಿವೇಶ ನಿರ್ಮಾಣಬೇಕಿದೆ ಈ ನಿಟ್ಟಿನಲ್ಲಿ ಸ್ಪರ್ಧೆಗಿಳಿದಿರುವುದಾಗಿ ತಿಳಿಸಿದರು.

ಈ ವೇಳೆ ಸತ್ಯದ ಹೊನಲು ಪತ್ರಿಕೆಯ ಸಂಪಾದಕ ವೇಣುಕುಮರ್, ವಿಜಯವಾಣಿ ಜಿಲ್ಲಾ ವರದಿಗಾರ ಮಂಜು ಬನವಾಸೆ, ಪತ್ರಕರ್ತ ಬ್ಯಾಕರವಳ್ಳಿ ವೆಂಕಟೇಶ್, ಮಲ್ನಾಡ್ ಮೆಹಬೂಬ್,  ಕಲಾವಿದರಾದ ಕುಮಾರ್ ಕಟ್ಟೆ ಬೆಳಗುಲಿ, ನೀಲಮ್ಮ , ದೇವರಾಜ್ , ನಾಗರಾಜ್   , ಮೊದಲಾದವರಿದ್ದರು


Post a Comment

Previous Post Next Post