ಪಾಂಚಜನ್ಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ

ಹಾಸನ: ನಗರದ ಅಗ್ರಹಾರ ರಸ್ತೆಯಲ್ಲಿರುವ ಪಾಂಚಜನ್ಯದಲ್ಲಿ ಹಿಂದು ಜಾಗರಣ ವೇದಿಕೆ ಮತ್ತು ಜನಜಾಗರಣ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನವು ಯಶಸ್ವಿಗೊಂಡಿತು.

     ಯಾವುದೇ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚು ಇದ್ದು, ಅದರಲ್ಲೂ ಕೊರೋನಾ ಸೋಂಕು ಇರುವುದರಿಂದ ಈ ವೇಳೆ ರಕ್ತದ ಶೇಖರಣೆ ತೀರ ಕಡಿಮೆಯಾಗಿದೆ. ಮೇ.೧ ರಿಂದ ೧೮ ವರ್ಷ ಮೇಲ್ಪಟ್ಟವರೆಲ್ಲಾ ಕೊರೋನಾ ಲಸಿಕಾ ಅಭಿಯಾನ ಆರಂಭವಾಗುತ್ತದೆ. ಲಸಿಕೆ ಹಾಕಿಸಿಕೊಂಡ ಮೇಲೆ ೨ ತಿಂಗಳ ಕಾಲ ರಕ್ತವನ್ನು ಕೊಡಲು ಆಗುವುದಿಲ್ಲ. ಲಸಿಕೆ ಹಾಕಿಸಿಕೊಳ್ಳುವ ಮೊದಲೆ ರಕ್ತದಾನ ಮಾಡಿದರೇ ಉತ್ತಮ. ಅನೇಕ ವೇಳೆ ಅನೇಕರಿಗೆ ಇದರ ಪ್ರಯೋಜನವಾಗಲಿದೆ ಎಂದರು. ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಿ ಎಂದು ಇದೆ ವೇಳೆ ಕರೆ ನೀಡಿದರು.

     ರಕ್ತದಾನ ಶಿಬಿರದಲ್ಲಿ ರಕ್ತನಿದಿ ವಿಭಾಗದ ಹಿರಿಯ ಲ್ಯಾಬರೇಟರಿ ಟೆಕ್ನಿಶಿಯನ್ ಶಿವಸ್ವಾಮಿ, ಡಾ. ನಾಗಲಕ್ಷಿö್ಮ, ಹಿಂದು ಜಾಗರಣ ವೇದಿಕೆಯ ಸಂಯೋಜಕ ಲೋಕೇಶ್, ಪ್ರದೀಪ್ ಶರ್ಮ, ಮುರುಳಿ, ರಾಜೀವ್, ಪ್ರಮೋದ್, ಅಜೀತ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post