ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರವಿ ನಾಕಲಗೂಡು ನಾಮಪತ್ರ ಸಲ್ಲಿಕೆ

ಹಾಸನ : ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ   ಮೇ  ೯ ರಂದು ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸುತ್ತಿರುವ  ರವಿ ನಾಕಲಗೂಡು ಅವರು ಇಂದು ಸಾಹಿತಿಗಳು, ಬರಹಗಾರರು,  ಉಪನ್ಯಾಸಕರು, ಶಿಕ್ಷಕರು, ಸ್ನೇಹಿತರು, ಹಿತೈಷಿಗಳು ಮತ್ತು ಅಭಿಮಾನಿಗಳು ಸೇರಿದಂತೆ  ನೂರಾರು ಜನರ ಸಮ್ಮುಖದಲ್ಲಿ  ತಾಲ್ಲೂಕು ಕಚೇರಿಯಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.


 ಇದಕ್ಕೂ ಮೊದಲು ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಇರುವ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಕುವೆಂಪು ಅವರ ಪ್ರತಿಮೆಗೆ  ಮಾಲಾರ್ಪಣೆ ಮಾಡಿ ನಂತರ ಹಾಸನಾಂಬೆ ದೇಗುಲದಲ್ಲಿ ವಿಶೇಷ ಪೂಜೆ  ಸಲ್ಲಿಸಿ ತಾಲ್ಲೂಕು ಕಚೇರಿಯ ಜಿಲ್ಲಾ ಚುನಾವಣಾಧಿಕಾರಿಯಾದ ಶಿವಶಂಕರಪ್ಪ ಅವರಿಗೆ  ಮೂರು ಸೆಟ್‌ಗಳ  ತಮ್ಮ  ಉಮೇದುವಾರಿಕೆಯನ್ನು  ಸಲ್ಲಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ರವಿ ನಾಕಲಗೂಡು,  ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ  ಸ್ಪರ್ಧಿಸುತ್ತಿರುವ ನನಗೆ  ಜಿಲ್ಲಾದ್ಯಂತ  ಕವಿಗಳು, ಸಾಹಿತಿಗಳು ಸೇರಿದಂತೆ ನೌಕರರ ಸಂಘ, ಶಿಕ್ಷಕರ ಸಂಘ ಹಾಗೂ ಕನ್ನಡಪರ ಸಂಘಟನೆಗಳು ಸಂಪೂರ್ಣವಾಗಿ ಸಹಕಾರ ನೀಡಿದ್ದು,  ಅವರೆಲ್ಲರ  ಬೆಂಬಲದಿAದ ನಾನು  ಆಯ್ಕೆಯಾದರೆ  ನನ್ನ ಚುನಾವಣಾ ಪ್ರಣಾಳಿಕೆಯಂತೆ  ಕೊಟ್ಟ ಮಾತಿನಂತೆ  ನನ್ನೆಲ್ಲಾ ಯೋಜನೆಗಳನ್ನು ಕಾರ್ಯ ರೂಪಕ್ಕೆ  ತರುವ ಜೊತೆಗೆ  ಪರಿಷತ್ತಿಗೆ  ಚ್ಯುತಿ ಬಾರದಂತೆ  ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ನಾನು ಚುನಾವಣೆಗೂ ಮುನ್ನ ಘೋಷಣೆ  ಮಾಡಿದಂತೆ  ನಾಡು-ನುಡಿ, ಜಲ, ಭಾಷೆ, ಸಂಸ್ಕೃತಿ   ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.  ನನ್ನ ಅವಧಿಯಲ್ಲಿ  ಯುವ ಬರಹಗಾರರಿಗೆ  ಪ್ರೋತ್ಸಾಹ, ಹಿರಿಯ-ಕಿರಿಯ ಸಾಹಿತಿಗಳನ್ನು ಒಗ್ಗೂಡಿಸಿಕೊಂಡು ಪರಿಷತ್ತಿನಲ್ಲಿ  ಪಾರದರ್ಶಕ ಆಡಳಿತಕ್ಕೆ  ಹೆಚ್ಚಿನ ಒತ್ತು ನೀಡುತ್ತೇನೆ ಎಂದು  ಹೇಳಿದರು.

ಪ್ರತೀ ಹೋಬಳಿ ಮಟ್ಟದಲ್ಲಿ  ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಶಾಲೆಗಳ ಅಭಿವೃದ್ಧಿ ಮಾಡುವುದು, ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವು, ಪ್ರತೀ ತಾಲ್ಲೂಕಿನಲ್ಲಿ ಪರಿಷತ್ತಿನ ಭವನವನ್ನು ನಿರ್ಮಾಣ ಮಾಡುವುದು ಸೇರಿದಂತೆ  ಹಲವು ಯೋಜನೆಗಳನ್ನು ಕರ‍್ಯ ರೂಪಕ್ಕೆ  ತರುವುದಾಗಿ ಭರವಸೆ ನೀಡಿದ ಅವರು, ನನಗೆ ಸಾಹಿತ್ಯಾಭಿಮಾನಿಗಳು, ಕನ್ನಡದ ಮನಸ್ಸುಗಳು ಮತ್ತು ಪರಿಷತ್ತಿನ ಎಲ್ಲಾ ಸದಸ್ಯರು ಸಂಪೂರ್ಣ ಸಹಕಾರ  ನೀಡಬೇಕು ಎಂದು ಮನವಿ ಮಾಡಿದರು.

ಕಸಾಪ ಅಧ್ಯಕ್ಷ  ನಾಯಕರಳ್ಳಿ ಮಂಜೇಗೌಡ ಮಾತನಾಡಿ,  ರವಿ ನಾಕಲಗೂಡು ಅವರು ಕಸಾಪ ಗೌರವಾಧ್ಯಕ್ಷರಾಗಿ ನನ್ನೊಂದಿಗೆ  ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಯಾವುದಶೇ  ಕಪ್ಪು ಚುಕ್ಕಿ ಬಾರದಂತೆ  ನಮ್ಮೆಲ್ಲಾ ಕೆಲಸ ಕರ‍್ಯಗಳಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ.  ಆದ್ದರಿಂದ  ಜಿಲ್ಲಾಯ ಎಲ್ಲಾ   ಪರಿಷತ್ತಿನ ಸದಸ್ಯರು  ಮತ ನೀಡುವ ಮೂಲಕ ಅವರನ್ನು ಸಂಪೂರ್ಣವಾಗಿ ಬೆಂಬಲಿಸಬೇಕೆAದು ಮನವಿ ಮಾಡಿದರು.

ಸಮಾಜ ಸೇವಕ  ಗೋಮತಿ ದಿನೇಶ್ ಮಾತನಾಡಿ,  ರವಿ ನಾಕಲಗೂಡು ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಮತದಾರರು ಅತ್ಯಂತ  ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ.  ನನ್ನೆಲ್ಲಾ ಸ್ನೇಹಿತರು ಮತ್ತು ಹಿತೈಷಿಗಳು ಬೆಂಬಲ ಕೊಡುವುದರ  ಜೊತೆಗೆ ಅವರ ಗೆಲುವಿಗೆ  ಶ್ರಮಿಸುವುದಾಗಿ ತಿಳಿಸಿದರು.

ನಂತರ  ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಆರ್. ಪ್ರಸನ್ನಕುಮಾರ್  ಮತ್ತು  ಹಿರಿಯ ಪತ್ರಕರ್ತರಾದ ಕೆ.ಶೇಷಾದ್ರಿ ಮತ್ತು ಕೆ.ಪಿ.ಎಸ್. ಪ್ರಮೋದ್ ಅವರು,   ರವಿ ನಾಕಲಗೂಡು ಪತ್ರಕರ್ತರಾಗಿ ಓರ್ವ ದಕ್ಷ ಸಂಘಟಕನಾಗಿ ಪರಿಷತ್ತಿನಲ್ಲಿ  ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತರುವ ವಿಶ್ವಾಸವಿದೆ.  ಅವರು ಈಗಾಗಲೇ ಪತ್ರಕರ್ತರ ಸಂಘದಲ್ಲಿ ಮತ್ತು ಪರಿಷತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು  ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಸರ್ಕಾರಿ ಕಲಾ ಕಾಲೇಜಿನ  ನಿವೃತ್ತ ಉಪನ್ಯಾಸಕರಾದ ಆನಂದಸ್ವಾಮಿ, ಶಿವಣ್ಣಗೌಡ ಮಾತನಾಡಿ,   ನಾಕಲಗೂಡು ಅವರು ನುಡಿದಂತೆ  ನಡೆಯುವ  ವ್ಯಕ್ತಿತ್ವ. ಪರಿಷತ್ತಿಗೆ  ಓರ್ವ ಸಂಘಟಕನ ಅವಶ್ಯಕತೆ ಇದ್ದು,   ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ  ಮುನ್ನಡೆಸುವ  ಚಾಕಚಕ್ಯತೆ  ಅವರಿಗಿದೆ.  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪರಿಷತ್ತನ್ನು  ಮತ್ತಷ್ಟು ಉನ್ನತ ಮಟ್ಟಕ್ಕೆ  ಕೊಂಡೊಯ್ಯುವ ಭರವಸೆ ನಮ್ಮಲ್ಲಿದೆ  ಎಂದು ಹೇಳಿದರು.

ಸಾಹಿತಿಗಳಾದ ವಿಜಯ ಹಾಸನ್,   ಓಬಳೇಶ್ ಘಟ್ಟಿ ಮಾತನಾಡಿ,  ರವಿ ಅವರು  ಪರಿಷತ್ತಿನ ಗೌರವಾಧ್ಯಕ್ಷರಾಗಿ ಹಲವು ಅತ್ಯುತ್ತಮ ಕಾರ್ಯಕ್ರಮಗಳು ಮತ್ತು ಸಮ್ಮೇಳನಗಳನ್ನು ಆಯೋಜನೆ ಮಾಡಿ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ಇವರೇ ಅಧ್ಯಕ್ಷರಾದರೆ  ಪರಿಷತ್ತಿನಲ್ಲಿ ಇನ್ನೂ ಹಲವು ಕರ‍್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ.  ಅಲ್ಲದೆ  ನಮ್ಮಂತಹ ಸಾಹಿತಿಗಳು ಮತ್ತು  ಬರಹಗಾರರಿಗೆ  ಇವರ  ಪ್ರೋತ್ಸಾಹ ಅತ್ಯಗತ್ಯ ಎಂದರು. 

ಈ ಸಂದರ್ಭದಲ್ಲಿ   ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ  ಪರಮ ಶಿವಯ್ಯ,  ಸಂಜೀವಿನಿ ಸಹಕಾರಿ ಆಸ್ಪತ್ರೆಯ ಮಾಜಿ ಅಧ್ಯಕ್ಷ ಗಿರಿಗೌಡ, ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯಸ್ಥರಾದ ಗಂಗಾಧರ್,   ಸುರೇಂದ್ರ, ಮಲೆನಾಡು ಕಾಲೇಜಿನ ಉಪನ್ಯಾಸಕ ಮಂಜುನಾಥ್, ತಾಲ್ಲೂಕು ಕಸಾಪ ಅಧ್ಯಕ್ಷರುಗಳಾದ  ಶ್ರೀಕಾಂತ್, ಪ್ರಕಾಶ್‌ಜೈನ್,  ವಿಷ್ಣು ಪ್ರಕಾಶ್, ಸಕಲೇಶಪುರ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ರವಿ, ಬೇಲೂರು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ  ಹೊಳ್ಳ, ಆಲೂರು ಪತ್ರಕರ್ತರ ಸಂಘದ ಅಧ್ಯಕ್ಷ  ನಟರಾಜ್ ನಾಕಲ ಗೂಡು, ಗ್ರಾಪಂ ಮಾಜಿ ಅಧ್ಯಕ್ಷ  ಅಗಿಲೆ ನವೀನ್, ಮಾಜಿ ಸದಸ್ಯ ಸಿ.ಸಿ.ಸೋಮಶೇಖರ್, ದಲಿತ ಮುಖಂಡರಾದ ಕೃಷ್ಣದಾಸ್,  ಶಂಕರ್ ರಾಜ್, ಸೈಯ್ಯದ್ ಏಜಾಜ್ ಪಾಷ,  ಮಹಂತೇಶ್,  ಕನ್ನಡಪರ ಸಂಘಟನೆಯ ಶಂಕರ್‌ಗೌಡ ಸೇರಿದಂತೆ ಸಾಹಿತಿಗಳು, ಬರಹಗಾರರು, ಪತ್ರಕರ್ತರು, ಪರಿಷತ್ತಿನ  ಗೌರವಾನ್ವಿತ ಸದಸ್ಯರು, ಶಿಕ್ಷಕರ  ಸಂಘ ಮತ್ತು ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ವಕೀಲರು,  ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ, ರವಿ ನಾಕಲಗೂಡು  ಆತ್ಮೀಯ ಸ್ನೇಹಿತರ ಬಳಗ,  ಹಿತೈಷಿಗಳು ಹಾಗೂ ಇನ್ನಿತರರು ಹಾಜರಿದ್ದರು.


Post a Comment

Previous Post Next Post