ಆಮ್ಲಜನಕ ಪೂರೈಕೆ ಇರುವ ಹಾಸಿಗೆಗಳ ಸಂಖ್ಯೆ ಹೆಚ್ಚಳಕ್ಕೆ ಸಚಿವರ ಸೂಚನೆ

ಹಾಸನ ಏ.೨೩ :-ಕೋವಿಡ್ -೧೯ ಸೋಂಕಿನ ಪ್ರಮಾಣ  ದಿನೇ ದಿನೇ ಹೆಚ್ಚುತ್ತಿರುವುದರಿಂದ ಹಿಮ್ಸ್ನಲ್ಲಿ ಆಮ್ಲಜನಕ ಪೂರೈಕೆ ಇರುವ ಇನ್ನು ೧೦೦ ಹಾಸಿಗೆಗಳ ಸಂಖ್ಯೆ   ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು  ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಅವರು ತಿಳಿಸಿದ್ದಾರೆ.



      ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನ ಜಿಲ್ಲೆಯಲ್ಲಿ ಕೋವಿಡ್-೧೯  ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ರೀತಿ ಚುಚ್ಚುಮದ್ದಿಗೆ ಕೊರತೆಯಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ರೆಮಿಡಿಸಿಯರ್  ಚುಚ್ಚುಮದ್ದಿಗೆ ಪೊರೈಕೆಗೆ  ಸಮಸ್ಯೆಯನ್ನು ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಚಿಸಿ ಬಗೆಹರಿಸಲಾಗುವುದು ಎಂದು ತಿಳಿಸಿದರು.

 ರೆಮಿಡಿಸಿವಿಯರ್ ಚುಚ್ಚುಮದ್ದಿಗೆ ದುಬಾರಿ ಹಣ ಪಡೆಯುತ್ತಿರುವ ಬಗ್ಗೆ ಹಾಗೇನಾದರೂ ದೂರು ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. 

     ಪ್ರತಿನಿತ್ಯ ಜಿಲ್ಲಾಧಿಕಾರಿಗಳೊಂದಿಗೆ  ಕೋವಿಡ್ ನಿಯಂತ್ರಣದ ಕುರಿತು ದೂರವಾಣಿ ಮೂಲಕ ಮಾಹಿತಿ ಪಡೆಯುತ್ತಿದ್ದು ಸೂಕ್ತ ಸೂಚನೆಗಳನ್ನು ನೀಡುತ್ತಿರುವುದಾಗಿ  ಸಚಿವರು ತಿಳಿಸಿದರು.

      ಮೊಸಳೆಹೊಸಳ್ಳಿ ,ಶಾಂತಿಗ್ರಾಮ, ಉದಯಪುರ ,ನುಗ್ಗೆಹಳ್ಳಿ ,ಅರೆಹಳ್ಳಿ ,ಜೆ,ಸಿ,ಪುರ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಲಭ್ಯವಿರುವ ೧೦೦ ಕ್ಕೂ ಹೆಚ್ಚು ಹಾಸಿಗೆಗಳನ್ನು ಬಳಸಿಕೊಂಡು  ಜಂಬೋ ಆಕ್ಸಿಜûನ್ ಅಳವಡಿಸಲು  ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದೇನೆ ಎಂದರು.

ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಏರುತ್ತಿದ್ದು ಸಾರ್ವಜನಿಕರು ಲಸಿಕೆಯನ್ನು ಪಡೆಯುವಂತೆ ಮನವಿ ಮಾಡಿದ ಸಚಿವರು  ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ತಾತ್ಕಾಲಿಕ ಕೆಲವು  ದೈನಂದಿನ ವ್ಯಾಪಾರಗಳಿಗೆ ಕಡಿವಾಣ ಹಾಕಲಾಗಿದೆ

 ಮದುವೆಗೆ  ಸೇರಿದಂತೆ ಕೆಲವು ಅನಿವಾರ್ಯ ತುರ್ತು ಸಾಮಗ್ರಿ ಬೇಕಿದರೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಮಾಡಿದರೆ ಅವಕಾಶ ನೀಡಲಾಗುವುದು ಎಂದರು.

    ಚಿತಾಗಾರದ  ವ್ಯವಸ್ಥೆ ಕಡಿಮೆ ಇರುವುದರಿಂದ ಮೃತರ   ಸರ್ಕಾರದ ನಿರ್ದೇಶನದಂತೆ ಸ್ವಂತ ಜಾಗದಲಿ ೧೦ ಅಡಿ ಅಳದ ಗುಂಡಿ ತೆಗಿಸಿ ಅಂತ್ಯಕ್ರಿಯೆ ಮಾಡಲು ಅವಕಾಶ  ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು. 

              ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಉಪಸ್ಥಿತರಿದ್ದರು


Post a Comment

Previous Post Next Post