ಜೆಡಿಎಸ್ ಯುವ ನಾಯಕ ಶ್ರೀಕಾಂತ್ ನಿಂದ ಕಸಾಪಗೆ ನಾಮಪತ್ರ ಸಲ್ಲಿಕೆ


ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಯುವ ನಾಯಕ ಮತ್ತು ವಕೀಲರಾದ ಶ್ರೀಕಾಂತ್ ಚನ್ನಂಗಿಹಳ್ಳಿರವರು ತಮ್ಮ ಹುಟ್ಟು ಹಬ್ಬದ ದಿನದಂದೆ ಬುಧವಾರದಂದು ಬೆಳಿಗ್ಗೆ ತಹಸೀಲ್ದಾರ್ ಕಛೇರಿಯಲ್ಲಿ ತಮ್ಮ ಪಕ್ಷದ ಬೆಂಬಲಿಗರೊAದಿಗೆ ನಾಮಪತ್ರ ಸಲ್ಲಿಸಿದರು.

        ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೇ.೯ ರಂದು ನಡೆಯಲಿರುವ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಚುಣಾವಣೆಗೆ ಸ್ಪರ್ದೆ ಮಾಡಲು ಮಾವಿನಕೆರೆ ರಂಗನಾಥ್ ಸ್ವಾಮಿ ಬೆಟ್ಟದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಎಸ್. ದ್ಯಾವೇಗೌಡ, ಪುಟ್ಟಸ್ವಾಮಿ ಗೌಡ, ಗ್ರಾಮಸ್ಥರಾದ ಸೋಮಶೇಖರ್, ಹರೀಶ್ ಇತರರು ಸಮ್ಮುಖದಲ್ಲಿ ನಾಮಪತ್ರವನ್ನು ಸಲ್ಲಿಸಲಾಗಿದೆ ಎಂದರು. ಯುವಕರು ಚುನಾವಣೆಯಲ್ಲಿ ಸ್ಪರ್ದೆ ಮಾಡಬೇಕಾದ ಅವಶ್ಯಕತೆ ಇದ್ದು, ನಾವು ಬುದ್ದಿ ಜೀವಿಗಳು, ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪಾರದರ್ಶಕವಾದ ಆಡಳಿತ ಕೊಡಬೇಕು ನಿಟ್ಟಿನಲ್ಲಿ ಕಸಾಪ ಚುನಾವಣೆಗೆ ನಿಲ್ಲಲಾಗುತ್ತಿದೆ. ಈಗಾಗಲೇ ಹಾಸನ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಸಂಚಾರ ಮಾಡಿ ಮತದಾರರ ಸಂಪರ್ಕ ಮಾಡಲಾಗಿದೆ. ಮುಂದೆಯೂ ಕೂಡ ತಾಲೂಕುವಾರು ಪ್ರವಾಸ ಮಾಡಿ ಮತಗಳನು ಕೇಳಲಾಗುವುದು. ಎಲ್ಲರ ಸಹಕಾರದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನ ಗೆಲ್ಲುವುದಾಗಿ ವಿಶ್ವಾಸವ್ಯಕ್ತಪಡಿಸಿದರು.

       ಜೆಡಿಎಸ್ ತಾಲೂಕು ಅಧ್ಯಕ್ಷರಾಧ ಎಸ್. ದ್ಯಾವೇಗೌಡರು ಮಾತನಾಡಿ, ಯುವ ವಕೀಲರು ಆದಂತಹ ಚನ್ನಂಗಿಹಳ್ಳಿ ಶ್ರೀಕಾಂತ್ ರವರು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಬುಧವಾರದಂದು ವಿಶೇಷವಾಗಿ ಅವರ ಜನ್ಮ ದಿನದಂದೆ ಉಮೇದುಗಾರಿಕೆ ಸಲ್ಲಿಸುವ ಮೂಲಕ ಕನ್ನಡ ಸೇವೆಗೆ ಮುಂದಾಗಿದ್ದಾರೆ. ಕನ್ನಡ ಭಾಷಾಭಿಮಾನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನಿಟ್ಟುಕೊಂಡಿದ್ದು, ಹೋರಾಟಗಾರನಾಗಿ ಕೆಲಸವನ್ನು ಸ್ಪೂರ್ತಿಯಾಗಿ ಮಾಡಲಿದ್ದಾರೆ ಎಂದು ಇದೆ ವೇಳೆ ಶುಭ ಹಾರೈಸಿದರು. 

     ನಂತರ ಕೇಕ್ ಕತ್ತರಿಸಿ ತಮ್ಮ ಜನ್ಮ ದಿನವನ್ನು ಸರಳವಾಗಿ ಆಚರಿಸಿಕೊಂಡರು. ಇದೆ ವೇಳೆ ಪಕ್ಷದ ಮುಖಂಡರು ಸೇರಿದಂತೆ ಇತರರು ಶುಭ ಹಾರೈಸಿದರು.


Post a Comment

Previous Post Next Post