ಹಾಸನ: ೬ನೇ ವೇತನ ಜಾರಿಗೆ ಒತ್ತಾಯಿಸಿ ಕರೆ ನೀಡಿರುವ ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರದ ಹಿನ್ನಲೆಯಲ್ಲಿ ಬುಧವಾರದಂದು ಯಾವ ಸಾರಿಗೆ ಬಸ್ ರಸ್ತೆಗೆ ಇಳಿಯಲಿಲ್ಲ. ಸಿಟಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ಮಾಡಲು ಅವಕಾಶ ನೀಡಲಾಗಿತ್ತು. ಇನ್ನು ಹೆಚ್ಚಿನ ಬೆಲೆ ನೀಡಿ ಪ್ರಯಾಣಿಕರು ಪ್ರಯಾಣಿಸಬೇಕಾಯಿತು.
ಹಿಂದಿನ ಮುಖ್ಯ ಬೇಡಿಕೆಗಳಾದ ಆರನೇ ವೇತನ ಆಯೋಗ ಪರಿಷ್ಕರಣೆ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಯಶಸ್ವಿಗೊಂಡಿದೆ. ಹಾಸನ ವಿಭಾಗದಿಂದ ಬೇರೆಬೇರೆ ಜಿಲ್ಲೆಗಳಿಗೆ ಮತ್ತೆ ನಗರ ಹಾಗೂ ಹಾಸನ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗುವ ಎಲ್ಲಾ ಬಸ್ಸುಗಳು ಕೂಡ ಡಿಪೋಗಳಲ್ಲಿಯೇ ಇದ್ದವು. ಯಾವ ಬಸ್ಸುಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಬಸ್ ಪ್ರಯಾಣಿಕರು ಪರದಾಡಿದರು. ನೌಕರರು ಯಾವ ಪ್ರತಿಭಟನೆ ಮಾಡದೆ ಕೆಲಸ ಮುಂದುವರೆಸಿಕೊAಡು ಹೋಗಲು ಇಲಾಖೆ ಮನವಿ ಮಾಡಿದರೂ ಒಪ್ಪದೆ ಮುಷ್ಕರಕ್ಕೆ ಬೆಂಬಲ ನೀಡಿದ್ದಿರಿಂದ ಯಾವೊಬ್ಬ ಸಿಬ್ಬಂದಿ ಕೊಡ ಹಾಜರಾಗಲಿಲ್ಲ. ದೂರವಾಣಿ ಕರೆ ಮೂಲಕ ನಾವು ಮನವೊಲಿಸಲು ಪ್ರಯತ್ನ ಮಾಡುತ್ತಿದ್ದೇವೆ ಆದರೆ ಬಹುತೇಕ ಸಿಬ್ಬಂದಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮನೆಯಲ್ಲಿಯೇ ಉಳಿದಿದ್ದರಿಂದ ಕೆ.ಎಸ್.ಆರ್.ಟಿ.ಸಿ. ಸಾರಿಗೆ ವಾಹನ ರಸ್ತೆಗೆ ಇಳಿಯಲಿಲ್ಲ. ಸಾರಿಗೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರಾದರೂ ಯಾವುದೇ ಸಿಬ್ಬಂದಿಯ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ಮುಷ್ಕರವು ಇಷ್ಟೊಂದು ತೀವ್ರತೆ ಪಡೆಯಲು ರಾಜ್ಯಮಟ್ಟದಲ್ಲಿ ಸಾರಿಗೆ ನೌಕರರು
ಮಾಡಿಕೊಂಡಿರುವ ವಾಟ್ಸಪ್ ಗ್ರೂಪ್ ಪರಿಣಾಮ ಬೀರಿದೆ. ಇದರಲ್ಲಿನ ಸಂದೇಶಗಳ ವಿನಿಮಯ. ಮುಷ್ಕರಕ್ಕೆ ಹೆಚ್ಚು ಬೆಂಬಲ ವ್ಯಕ್ತವಾಗಿ ಇಷ್ಟು ಯಶಸ್ವಿಯಾಗಲು ಪ್ರಮುಖ ಕಾರಣವಾಗಿದೆ. ಆರನೇ ವೇತನ ಆಯೋಗ ಜಾರಿ
ಮಾಡಲೇಬೇಕು ಇಲ್ಲವಾದರೆ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಬಹುತೇಕ ಸಾರಿಗೆ ನೌಕರರು ತೀರ್ಮಾನ ಮಾಡಿದ್ದಾರೆ. ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳ ಮ್ಯಾಕ್ಸಿಕ್ಯಾಬ್, ಟೆಂಪೊ ಟ್ರಾ÷್ಯಕ್ಸಿ ಇತರೆಗಳು ಸಂಚಾರಕ್ಕೆ ಸಾರಿಗೆ ಇಲಾಖೆ ಮುಕ್ತ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯಿAದಲೂ. ಸಹ ಖಾಸಗಿ ವಾಹನಗಳು ರಸ್ತೆಗಿಳಿದಿದ್ದು, ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ಪಡೆಯಲಾಗುತಿತ್ತುಎಂಬ ಆರೋಪ ಕೇಳಿ ಬಂದಿದೆ. ಆದರೆ ಬುಧವಾರದಂದು ಹಾಸನದ ಸಿಟಿ ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನ ನಿಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ಅಷ್ಟೊಂದು ಸಮಸ್ಯೆ ಕಾಣಿಸಲಿಲ್ಲ. ಇನ್ನು ಕೆಲಸ ಪ್ರಯಾಣಿಕರು ಬಸ್ ನೌಕರರ ಮುಷ್ಕರದ ಮಾಹಿತಿ ತಿಳಿದು ಮನೆಯಲ್ಲೆ ಉಳಿದಿದ್ದಾರೆ. ಪ್ರಯಾಣಿಕರಿಲ್ಲದೆ ತಮ್ಮ ವಾಹನ ಬಾಡಿಗೆ ಓಡದೆ ಸಮಸ್ಯೆ ಎದುರಿಸುತ್ತಿದ್ದರು. ಸಾರಿಗೆ ಬಸ್ ಸ್ಥಗಿತವಾದರೇ ಖಾಸಗಿ ಬಸ್ ಮಾಲೀಕರಿಗೆ ಹಬ್ಬ. ಬೆಂಗಳೂರಿಗೆ ಹೋಗಬೇಕಾದರೇ ಒಬ್ಬರಿಗೆ ೫೦೦ ರಿಂದ ೬೦೦ ರೂಗಳು, ಮೈಸೂರಿಗೆ ೪೦೦ ರೂಗಳು, ಸಕಲೆಶಪುರಕ್ಕೆ ೧೦೦ ರೂಗಳು, ಹೊಳೆನರಸೀಪುರಕ್ಕೆ ೨೦೦ ರೂಗಳು ಈ ರೀತಿ ಕೆಲ ವಾಹನದಲ್ಲಿ ಪ್ರಯಾಣಿಕರಿಂದ ಹಣ ಪಡೆಯುತ್ತಿದ್ದರು. ಇಷ್ಟೊಂದು ಹಣ ಕೊಡಲು ಕೆಲ ಪ್ರಯಾಣಿಕರು ಪ್ರಶ್ನೆ ಮಾಡುತ್ತಿದ್ದುದು ಕಂಡು ಬಂದಿತು.